Jobs In Ballari: ಬಳ್ಳಾರಿ ಜಿಲ್ಲಾ ಪಂಚಾಯತ್​ನಲ್ಲಿ ನರೇಗಾ ಯೋಜನೆ ಅಡಿ ಖಾಲಿ ಇದೆ ವಿವಿಧ ಹುದ್ದೆ

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವ ವಿವಿಧ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಿ

  • Share this:
    ಬಳ್ಳಾರಿ ಜಿಲ್ಲಾ ಪಂಚಾಯತ್​ನಲ್ಲಿ (Ballari Zilla Panchayat) ಮಹಾತ್ಮ ನರೇಗಾ ಯೋಜನೆ (MGNREGA Scheme) ಅಡಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ತಾಂತ್ರಿಕ ಸಹಾಯಕರು, ಆಡಳಿತ ಸಹಾಯಕರು ಸೇರಿದಂತೆ ಒಟ್ಟು 22 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವ ವಿವಿಧ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಆನ್​ಲೈನ್​ ಮೂಲಕ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 11 ಆಗಿದೆ.

    ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ನಿರ್ಧಿಷ್ಟ ಅವಧಿಗೆ ಮಾತ್ರ ನೇಮಕ ಮಾಡಲಾಗುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಬಳ್ಳಾರಿ ಜಿಲ್ಲಾ ಪಂಚಾಯತ್ (ಬಳ್ಳಾರಿ ಜಿಲ್ಲಾ ಪಂಚಾಯತ್)
    ಹುದ್ದೆಯ ಹೆಸರು: ತಾಂತ್ರಿಕ ಸಹಾಯಕರು, ಆಡಳಿತ ಸಹಾಯಕರು
    ಹುದ್ದೆಗಳ ಸಂಖ್ಯೆ: 22
    ಉದ್ಯೋಗ ಸ್ಥಳ: ಬಳ್ಳಾರಿ
    ವೇತನ: 15008-24000 ರೂ. ಪ್ರತಿ ತಿಂಗಳು



























































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿವೇತನ
    ತಾಲೂಕು ಸಂಯೋಜಕರು1ಎಂಸಿಎ, ಬಿಡಿಎ, ಬಿಇ ಅಥವಾ ಕಂಪ್ಯೂಟರ್​ ಸೈನ್ಸ್​ ಪದವಿಕನಿಷ್ಠ 21ರಿಂದ ಗರಿಷ್ಠ 4024000 ರೂ ಮಾಸಿಕ
    ತಾಂತ್ರಿಕ ಸಹಾಯಕರು (ಸಿವಿಲ್)4ಬಿಇ ಅಥವಾ ಬಿಟೆಕ್​ ಪದವಿಕನಿಷ್ಠ 21ರಿಂದ ಗರಿಷ್ಠ 4022000- 24000 ರೂ ಮಾಸಿಕ
    ತಾಂತ್ರಿಕ ಸಹಾಯಕರು (ತೋಟಗಾರಿಕೆ)6ತೋಟಗಾರಿಕೆಯಲ್ಲಿ ಪದವಿಕನಿಷ್ಠ 21ರಿಂದ ಗರಿಷ್ಠ 4024000 ರೂ ಮಾಸಿಕ
    ತಾಂತ್ರಿಕ ಸಹಾಯಕರು (ಅರಣ್ಯ)2ಅರಣ್ಯಶಾಸ್ತ್ರದಲ್ಲಿ ಪದವಿಕನಿಷ್ಠ 21ರಿಂದ ಗರಿಷ್ಠ 4024000 ರೂ ಮಾಸಿಕ
    ತಾಂತ್ರಿಕ ಸಹಾಯಕರು (ಕೃಷಿ)2ಕೃಷಿಯಲ್ಲಿ ಪದವಿಕನಿಷ್ಠ 21ರಿಂದ ಗರಿಷ್ಠ 4024000 ರೂ ಮಾಸಿಕ
    ಆಡಳಿತ ಸಹಾಯಕರು5ಬಿಕಾಂ ಪದವಿಕನಿಷ್ಠ 21ರಿಂದ ಗರಿಷ್ಠ 4015008 ರೂ ಮಾಸಿಕ
    ಕಂಪ್ಯೂಟರ್ ಆಪರೇಟರ್‌ಗಳು2ಯಾವುದೇ ವಿಷಯದಲ್ಲಿ ಪದವಿಕನಿಷ್ಠ 21ರಿಂದ ಗರಿಷ್ಠ 4015008 ರೂ ಮಾಸಿಕ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಆನ್​ಲೈನ್

    ಇದನ್ನು ಓದಿ: ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿದೆ ವಿವಿಧ ಹುದ್ದೆ; ಎಸ್​ಎಸ್​ಎಲ್​ಸಿ, ಪಿಯುಸಿ ಆಗಿದ್ರೆ ಅರ್ಜಿ ಸಲ್ಲಿಸಿ

    ಅರ್ಜಿ ಶುಲ್ಕ: ವಿನಾಯಿತಿ

    ಆಯ್ಕೆ ಪ್ರಕ್ರಿಯೆ: ಮೆರಿಟ್​ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಆಗಸ್ಟ್​​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಸೆಪ್ಟೆಂಬರ್​ 2022
    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಯ ದಿನಾಂಕ: 12 ಸೆಪ್ಟೆಂಬರ್​ 2022
    ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯ ಪ್ರಕಟಣೆಯ ದಿನಾಂಕ: 19 ಸೆಪ್ಟೆಂಬರ್ 2022
    ತಾತ್ಕಾಲಿಕ ಮೆರಿಟ್ ಪಟ್ಟಿಗೆ ಅಭ್ಯರ್ಥಿಗಳಿಂದ ಆಕ್ಷೇಪಣೆಯ ದಿನಾಂಕ: 19 ರಿಂದ 28 ಸೆಪ್ಟೆಂಬರ್ 2022
    ಸಲ್ಲಿಸಿದ ಆಕ್ಷೇಪಣೆಗಳ ಪರಿಶೀಲನೆಯ ನಂತರ ಅಂತಿಮ ಆಯ್ಕೆ ಪಟ್ಟಿಯ ಪ್ರಕಟಣೆಯ ದಿನಾಂಕ: 30 ಸೆಪ್ಟೆಂಬರ್​ 2022

    ಇದನ್ನು ಓದಿ: ಡಿಆರ್​ಡಿಒದಲ್ಲಿ ಬೃಹತ್​ ನೇಮಕಾತಿ; ಐಟಿಐ, ಡಿಪ್ಲೊಮಾ ಆದವರಿಗೆ ಅವಕಾಶ

     ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: ballari.nic.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ:

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
    Published by:Seema R
    First published: