ಬಳ್ಳಾರಿ (Ballari)ಜಿಲ್ಲೆಯ ಸಂಡೂರು (Sandur) ತಾಲೂಕಿನ ಮಹಾತ್ಮ ಗಾಂಧಿ ನರೇಗಾ ಯೋಜನೆ (MGNREGA Scheme) ಅಡಿ ಉದ್ಯೋಗ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಗ್ರಾಮಗಳಲ್ಲಿ ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಭರ್ತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ಹೊರಡಿಸಿದೆ. 10 ಗ್ರಾಮ ಪಂಚಾಯತಿಗಳಲ್ಲಿ 20 ಸಾವಿರ ಮಾನವ ದಿನಗಳಿಗಿಂತ ಹೆಚ್ಚಿನ ಉದ್ಯಗೂ ಸೃಜನೆ ಮಾಡಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು. ವಿಶೇಷ ಸೂಚನೆ ಎಂದರೆ ಈ ಹುದ್ದೆಗೆ ಕೇವಲ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಸಂಸ್ಥೆಯ ಹೆಸರು: ಬಳ್ಳಾರಿ ಗ್ರಾಮ ಪಂಚಾಯತ್
ಹುದ್ದೆ ಸಂಖ್ಯೆ ಸಂಖ್ಯೆ: ನಿರ್ದಿಷ್ಟಪಡಿಸಲಾಗಿಲ್ಲ
ಉದ್ಯೋಗ ಸ್ಥಳ: ಬಳ್ಳಾರಿ
ಹುದ್ದೆಯ ಹೆಸರು: ಗ್ರಾಮ ಕಾಯಕ ಮಿತ್ರ
ವೇತನ: ರೂ. 6000 ರೂ ಪ್ರತಿ ತಿಂಗಳು
ಹುದ್ದೆ ವಿವರ | ಮಾಹಿತಿ |
ಹುದ್ದೆ | ಕಾಯಕ ಮಿತ್ರ |
ಹುದ್ದೆ ಸಂಖ್ಯೆ | ನಿರ್ದಿಷ್ಟಪಡಿಸಿಲ್ಲ |
ವೇತನ | ಮಾಸಿಕ 6 ಸಾವಿರ ರೂ |
ವಯೋಮಿತಿ
ಕನಿಷ್ಠ 18 ವರ್ಷ ಆಗಿದ್ದು, ಗರಿಷ್ಠ 45ವರ್ಷ ಮೀರಿರಬಾರದು
ಸೂಚನೆ
ಅಭ್ಯರ್ಥಿಯೂ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಅಡಿ ಕ್ರಿಯಾ ಶೀಲ ಜಾಬ್ ಕಾರ್ಡ್ ಹೊಂದಿರಬೇಕು.
ಅಭ್ಯರ್ಥಿ ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಎರಡು ವರ್ಷ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು.
ಇದನ್ನು ಓದಿ: ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ
ಅರ್ಹತೆ:
ಚೆನ್ನಾಗಿ ಓದಿ, ಬರಹ ಚೆನ್ನಾಗಿ ತಿಳಿದಿರಬೇಕು
ಗ್ರಾಮ ಪಂಚಾಯತಿಯಲ್ಲಿ ವಾಸಿಸುತ್ತಿರಬೇಕು.
ಉದ್ಯೋಗ ಚೀಟಿ ಆಯಾ ಗ್ರಾಮ ಪಂಚಾಯಿತಿಯಲ್ಲಿಯೇ ಇರಬೇಕು
ಆಯ್ಕೆ ವಿಧಾನ
10ನೇ ತರಗತಿಯಲ್ಲಿ ಗಳಿಸಿದ ಶೇಕಡವಾರು ಅಂಗಗಳಲ್ಲಿ ಶೇ 50ರಷ್ಟು ಪರಿಗಣನೆ
ಕಳೆದ ಮೂರು ವರ್ಷಗಳಲ್ಲಿ ಅಕುಶಲ ಕೂಲಿ ನಿರ್ವಹಿಸಿದ ಸರಾಸರಿ ಮಾನವ ದಿನಗಳಿಗೆ 20 ಅಂಕಗಳನ್ನು ನೀಡಲಾಗುವುದು.
ಇದನ್ನು ಓದಿ: ಪದವೀಧರರಿಗೆ ಉದ್ಯೋಗಾವಕಾಶ; ವ್ಯವಸ್ಥಾಪಕರು ಮತ್ತು ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ವಿಧಾನ
ಆಫ್ಲೈನ್
ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ
ಮೇ 27
ಅರ್ಜಿ ಸಲ್ಲಿಕೆ ವಿಳಾಸ
ಸಂಡೂರು ತಾಲೂಕಿನ ಅಗ್ರಹಾರ, ತಾರಾನಗರ, ಬಂಡ್ರಿ, ತಾಳೂರು, ಸೋವೇನಹಳ್ಳಿ, ಅಂತಾಪುರ, ಭಜಂಗನಗರ, ಹೆಚ್ಕೆಹಳ್ಳಿ, ಮೆಟ್ರಿಕಿ, ದಯೋಜಿ ಗ್ರಾಮ ಪಂಚಾಯಿತಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು
ಹೆಚ್ಚಿನ ಮಾಹಿತಿಗಾಗಿ ಸಂಡೂರು ತಾಲೂಕಿನ ಗ್ರಾಮ ಪಂಚಾಯಿತಿಗೆ ಭೇಟಿ ನೀಡಬಹುದು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ