Job Alert: ಬಾಗಲಕೋಟೆ ಜಿಲ್ಲಾ ಪಂಚಾಯತ್​ನಲ್ಲಿ 10 ಹುದ್ದೆಗಳು ಖಾಲಿ; ಆಸಕ್ತರು ಅರ್ಜಿ ಸಲ್ಲಿಸಿ

Bagalkot Zilla Panchayat Recruitment 2021: ಆಡಳಿತ ಸಹಾಯಕ ಮತ್ತು ತಾಲೂಕು ಐಇಸಿ ಸಂಯೋಜಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.

ಬಾಗಲಕೋಟೆ ಜಿಲ್ಲಾ ಪಂಚಾಯತ್

ಬಾಗಲಕೋಟೆ ಜಿಲ್ಲಾ ಪಂಚಾಯತ್

  • Share this:
    Bagalkot Zilla Panchayat Recruitment 2021: ಬಾಗಲಕೋಟೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 10 ಆಡಳಿತ ಸಹಾಯಕ ಮತ್ತು ತಾಲೂಕ ಐಇಸಿ ಸಂಯೋಜಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

    ಬಾಗಲಕೋಟೆ ಜಿಲ್ಲಾ ಪಂಚಾಯತ್ ಇಲಾಖೆಯು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಡಳಿತಾತ್ಮಕ ಸಹಾಯಕ ಮತ್ತು ತಾಲೂಕು ಐಇಸಿ ಸಂಘಟಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಫ್ರೆಶರ್ಸ್ ಮತ್ತು ಅನುಭವಿ ಅಭ್ಯರ್ಥಿಗಳಿಗಳು ಅರ್ಜಿ ಹಾಕಬಹುದು. ಬಾಗಲಕೋಟೆ ಜಿಲ್ಲಾ ಪಂಚಾಯತ್ ನೇಮಕಾತಿ-2021 ಅನ್ನು ಹುಡುಕುತ್ತಿರುವವರಿಗೆ ಉದ್ಯೋಗ ಸುದ್ದಿಗಳು ಮತ್ತು ಉತ್ತಮ ಅವಕಾಶಗಳಿವೆ.

    ಇದನ್ನೂ ಓದಿ:Job alert 2021: ಕೆಲಸ ಖಾಲಿ ಇದೆ! ಆಲೂಗಡ್ಡೆ ಸವಿದರೆ 50 ಸಾವಿರ ರೂ ಸಂಬಳ!

    ಆಡಳಿತ ಸಹಾಯಕ ಮತ್ತು ತಾಲ್ಲೂಕು ಐಇಸಿ ಸಂಘಟಕ ಹುದ್ದೆಗಳ ಅರ್ಜಿ ನಮೂನೆಯನ್ನು ಭರ್ತಿ ಮಾಡಲು, ಅಭ್ಯರ್ಥಿಗಳು ಬಾಗಲಕೋಟೆ ಜಿಲ್ಲಾ ಪಂಚಾಯತ್ ಇಲಾಖೆಯಿಂದ ಉಲ್ಲೇಖಿಸಲಾದ ಅರ್ಹತಾ ಮಾನದಂಡಗಳನ್ನು/ ಅರ್ಹತೆಗಳನ್ನು ಪೂರೈಸಬೇಕು.

    ಆಡಳಿತ ಸಹಾಯಕ -9 ಹುದ್ದೆಗಳು
    ತಾಲೂಕು ಐಇಸಿ ಸಂಯೋಜಕ-1 ಹುದ್ದೆ
    ಒಟ್ಟು 10 ಹುದ್ದೆಗಳು

    ವಿದ್ಯಾರ್ಹತೆ:

    ಬಿ.ಕಾಂ ಪದವಿ ಮತ್ತು ಸಮೂಹ ಸಂವಹನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

    ಇದನ್ನೂ ಓದಿ:Government Jobs: ಹೈಕೋರ್ಟ್​​ನಲ್ಲಿ ಕೆಲಸ ಖಾಲಿ ಇದೆ, 25,500 ರೂ.ನಿಂದ 81,100ವರಗೆ ಸಂಬಳ, ಅರ್ಜಿ ಹಾಕಲು ಹೀಗೆ ಮಾಡಿ

    ವಯೋಮಿತಿ ಮತ್ತು ವೇತನ:

    ಈ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಆಡಳಿತ ಸಹಾಯಕ ಮತ್ತು ತಾಲೂಕು ಐಇಸಿ ಸಂಯೋಜಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ:

    ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಕೆ:

    ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ಪಂಚಾಯತ್ ಕಾರ್ಯಾಲಯ, ಬಾಗಲಕೋಟೆಯಿಂದ ಪಡೆದು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಜಯ ಸೂಳಿಕೇರಿ (ಐ.ಇ.ಸಿ ) ಇವರಿಗೆ ಸೆಪ್ಟೆಂಬರ್ 15, 2021ರ ಸಂಜೆ 5:30ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

    ಬಾಗಲಕೋಟ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು.ಈ ಜಿಲ್ಲೆಯ ಜನಸಂಖ್ಯೆ 2011 ರ ಜನಗಣತಿಯ೦ತೆ 16,51,892.ಇದರಲ್ಲಿ 83,427, ಪುರು‍ಷ ಮತ್ತು 81,7645 ಮಹಿಳಿಯರು ಆಗಿದ್ದಾರೆ.ಬಾಗಲಕೋಟ ಜಿಲ್ಲೆಯಲ್ಲಿ 6 ತಾಲೂಕುಗಳಿವೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ 42 ಡಿಗ್ರಿಗಳವರೆಗೆ ಹೋಗಬಲ್ಲದು. ಚಳಿಗಾಲದ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15 ಡಿಗ್ರಿ ಇರುವುದು.ಇಲ್ಲಿರುವ ಮೂರು ಮುಖ್ಯ ನದಿಗಳೆ೦ದರೆ ಕೃಷ್ಣಾ ಘಟಪ್ರಭಾ ಮತ್ತು ಮಲಪ್ರಭಾ.ಬಾಗಲಕೋಟ ಬೆಂಗಳೂರಿನಿ೦ದ 520 ಕಿಮೀ ದೂರದಲ್ಲಿದ್ದು ಬಿಜಾಪುರ, ಹುಬ್ಬಳ್ಳಿ, ಬೆಳಗಾಂವ ಮೊದಲಾದವುಗಳಿಗೆ ರಸ್ತೆ ಸ೦ಪರ್ಕ ಹೊ೦ದಿದೆ. ಜಿಲ್ಲೆಯ ಪ್ರವಾಸಿ ತಾಣಗಳು: ಬದಾಮಿ, ಮೇಣಬಸದಿ, ಬನಶಂಕರಿ ದೇವಾಲಯ, ಶಿವಯೋಗ ಮಂದಿರ,ಮಹಾಕೂಟ, ಪಟ್ಟದಕಲ್ಲು, ಐಹೊಳೆ ಹಾಗು ಕೂಡಲಸಗಂಮ
    Published by:Latha CG
    First published: