• Home
  • »
  • News
  • »
  • jobs
  • »
  • Jobs in Bagalkot: ಬಾಗಲಕೋಟೆ ತೋಟಗಾರಿಕಾ ವಿವಿಯಲ್ಲಿದೆ ಪ್ರೊಫೆಸರ್ ಹುದ್ದೆ

Jobs in Bagalkot: ಬಾಗಲಕೋಟೆ ತೋಟಗಾರಿಕಾ ವಿವಿಯಲ್ಲಿದೆ ಪ್ರೊಫೆಸರ್ ಹುದ್ದೆ

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  • Share this:

    ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (University of Horticultural Sciences Bagalkot) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಹಾಯಕ ಪ್ರೊಫೆಸರ್​ ಮತ್ತು ಸೇವಾ ಸಿಬ್ಬಂದಿ ಸೇರಿದಂತೆ ಒಟ್ಟು 23 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 30 ಆಗಿದೆ.


    ಈ ಹುದ್ದೆಗಳು ಕೋಲಾರ ಮತ್ತು ಹಾವೇರಿಯಲ್ಲಿ ಖಾಲಿ ಇವೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.


    ವಿಶ್ವವಿದ್ಯಾಲಯದ ಹೆಸರು: ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ
    ಹುದ್ದೆಯ ಹೆಸರು: ಸಹಾಯಕ ಪ್ರೊಫೆಸರ್ ಕೇಡರ್, ಸೇವಾ ಸಿಬ್ಬಂದಿ
    ಹುದ್ದೆಗಳ ಸಂಖ್ಯೆ: 23
    ಉದ್ಯೋಗ ಸ್ಥಳ: ಕೋಲಾರ - ಹಾವೇರಿ - ಬಾಗಲಕೋಟೆ
    ವೇತನ: 57700-217100 ರೂ. ಪ್ರತಿ ತಿಂಗಳು




    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿವೇತನ
    ಸಹಾಯಕ ಪ್ರೊಫೆಸರ್ ಕೇಡರ್14ಸ್ನಾತಕೋತ್ತರ ಪದವಿ, ಎಂಫಿಲ್​, ಪಿಎಚ್​ಡಿಕನಿಷ್ಟ 18-ಗರಿಷ್ಟ 4257700-182400 ರೂ ಮಾಸಿಕ
    ಅಸೋಸಿಯೇಟ್ ಪ್ರೊಫೆಸರ್ ಕೇಡರ್7ಸ್ನಾತಕೋತ್ತರ ಪದವಿ ಪಿಎಚ್​ಡಿವಯಸ್ಸಿನ ಮಿತಿ ಇಲ್ಲ11400-217100 ರೂ ಮಾಸಿಕ
    ಸೇವಾ ಸಿಬ್ಬಂದಿ2ಪದವಿಕನಿಷ್ಟ 18-ಗರಿಷ್ಟ 35ತೋಟಗಾರಿಕಾ ವಿವಿ ನಿಯಮ ಅನುಸಾರ


    ವಯೋಮಿತಿ ಸಡಿಲಿಕೆ


    ಪ.ಜಾ, ಪ.ಪಂ ಅಭ್ಯರ್ಥಿಗಳು: 5 ವರ್ಷಗಳು
    ಪ್ರವರ್ಗ 1, 2ಎ,2ಬಿ,3ಎ ಮತ್ತು 3ಬಿ ಅಭ್ಯರ್ಥಿಗಳು: 3 ವರ್ಷಗಳು


    ಇದನ್ನು ಓದಿ: ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗ; ಮಾಸಿಕ 35000 ರೂ ವೇತನ

    ಸೇವಾ ಸಿಬ್ಬಂದಿ ಹುದ್ದೆಗಳಿಗೆ


    ಪ.ಜಾ, ಪ.ಪಂ ಮತ್ತು ಪ್ರವರ್ಗ 1ಎ ಭ್ಯರ್ಥಿಗಳು: 5 ವರ್ಷಗಳು
    ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 3 ವರ್ಷಗಳು
    ಅನುಭವ ಅಭ್ಯರ್ಥಿಗಳು: 10 ವರ್ಷಗಳು


    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ


    ಅರ್ಜಿ ಸಲ್ಲಿಕೆ ವಿಳಾಸ


    ರಿಜಿಸ್ಟ್ರಾರ್, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ, ಬಾಗಲಕೋಟ-587104.


    ಇದನ್ನು ಓದಿ: ಸ್ಯಾಮ್​ಸಂಗ್​ನಲ್ಲಿದೆ ಬಿಇ ಪದವೀಧರರಿಗೆ ಉದ್ಯೋಗ; ಬೆಂಗಳೂರಿನಲ್ಲಿ ಕೆಲಸ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25 ಆಗಸ್ಟ್​​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್​ 2022


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: uhsbagalkot.edu.in


    ಅರ್ಜಿ ಸಲ್ಲಿಕೆ ವಿಧಾನ


    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಲಗತ್ತಿಸಿ


    ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


    ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.


    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ

    Published by:Seema R
    First published: