• Home
  • »
  • News
  • »
  • jobs
  • »
  • Job Alert: ಆಟೋ ಮೊಬೈಲ್​ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇದ್ರೆ, ಇಲ್ಲಿದೆ ಭರಪೂರ ಅವಕಾಶ

Job Alert: ಆಟೋ ಮೊಬೈಲ್​ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇದ್ರೆ, ಇಲ್ಲಿದೆ ಭರಪೂರ ಅವಕಾಶ

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

10ನೇ ತರಗತಿ ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದು, ಆಟೋ ಮೊಬೈಲ್​ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

  • News18 Kannada
  • 4-MIN READ
  • Last Updated :
  • Jobat, India
  • Share this:

    ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದು ಈ ಆಟೋಮೊಬೈಲ್​. ಮಾರುಕಟ್ಟೆಯಲ್ಲಿ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಕ್ಷೇತ್ರದಲ್ಲಿ ಉದ್ಯೋಗ ಕೂಡ ಹೆಚ್ಚುತ್ತಿದೆ. ಇಂತಹ ಕ್ಷೇತ್ರದಲ್ಲಿ ಕೆಲಸ ಮಾಡಲು ಇದೀಗ ಕ್ರೇಡ್​ಆರ್ (CredR)​ ಸಂಸ್ಥೆ ಅವಕಾಶ ನೀಡಿದೆ. ಆಟೋ ಎಕ್ಸ್​ಪರ್ಟ್​ಗಳ (Auto Expert) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 10ನೇ ತರಗತಿ ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಹೊಂದಿದ್ದು, ಆಟೋ ಮೊಬೈಲ್​ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.


    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆCredR
    ಹುದ್ದೆಆಟೋ ಎಕ್ಸ್​ಪರ್ಟ್​ (ಮೆಕಾನಿಕ್​)
    ಒಟ್ಟು ಹುದ್ದೆನಿಗದಿಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಅಹಮದಾಬಾದ್​, ಡೆಲ್ಲಿ , ಜೈಪುರ ಮತ್ತು ಪುಣೆ
    ವೇತನಕಂಪನಿಯ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು 10 ನೇ ತರಗತಿ ಪಾಸ್​ ಆಗಿರಬೇಕು.


    ಅನುಭವ: ಮೆಕಾನಿಕ್​ ಆಗಿ ಅಥವಾ ಮೋಟರ್​ ಸೈಕಲ್​ ಸರ್ವೀಸ್​ನಲ್ಲಿ ಕನಿಷ್ಠ 2 ವರ್ಷದ ಅನುಭವ ಹೊಂದಿರಬೇಕು.ವಾಹನದ ಸಮಸ್ಯೆಗಳ ಬಗ್ಗೆ ಅರಿವಿದ್ದು, ಅವುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು.ಗ್ರಾಹಕರೊಂದಿಗೆ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.


    ಇದನ್ನು ಓದಿ: ಬೆಂಗಳೂರಿನ ಜವಾಹರ್​​ಲಾಲ್​​ ನೆಹರು ಸಂಶೋಧನಾ ಸಂಸ್ಥೆಯಲ್ಲಿದೆ ಕೆಲಸ; ಇಲ್ಲಿದೆ ವಿವರ


    ಅರ್ಜಿ ಸಲ್ಲಿಕೆ ವಿಧಾನ:  ಇಮೇಲ್​ ಮುಖಾಂತರ


    ಇಮೇಲ್​ ವಿಳಾಸ: hr@credr.com.


    ಅಧಿಕೃತ ವೆಬ್​ಸೈಟ್​: credr.com


    ಇದನ್ನು ಓದಿ: ಐಟಿಐ ಆಗಿದ್ರೆ ಕೈಗಾದಲ್ಲಿದೆ ಕೆಲಸ; ಇಲ್ಲಿದೆ ಹುದ್ದೆಯ ಸಂಪೂರ್ಣ ಮಾಹಿತಿ


    ಹುದ್ದೆಯ ಜವಾಬ್ದಾರಿ (Jobs Roles And Responsibility)


    -ಮೋಟಾರ್​ ಸೈಕಲ್​​ ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸಬೇಕು.


    -ಇಂಜಿನ್​ಗಳ ವ್ಯವಸ್ಥೆಗಳ ದುರಸ್ತಿ ಮಾಡುವ ಅನುಭವ ಇರಬೇಕು.


    -ಸೇವಾ ಕೇಂದ್ರಗಳ ನಡುವೆ ಸಮನ್ವಯವನ್ನು ನಡೆಸಬೇಕು.


    ವಿಶೇಷ ಸೂಚನೆ (Special Instruction)


    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಹುದ್ದೆ ಹೆಸರು- ಸ್ಥಳದ ಹೆಸರಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ನವೀಕರಿಸಿ ರೆಸ್ಯೂಮ್​ ಅನ್ನು ಮೇಲಿನ ಇಮೇಲ್​ ವಿಳಾಸಕ್ಕೆ ಸಲ್ಲಿಸಬೇಕು


    ಅರ್ಜಿ ಸಲ್ಲಿಕೆ ವಿಧಾನ (How To Apply)


    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.

    Published by:Seema R
    First published: