• Home
  • »
  • News
  • »
  • jobs
  • »
  • Walk-in-Interview: ವಿಕಾಸಸೌಧದ ಕೊಠಡಿ ಸಂಖ್ಯೆ 135ರಲ್ಲಿ ನಡೆಯುತ್ತಿದೆ ಸಂದರ್ಶನ; ಅಭ್ಯರ್ಥಿಗಳು ಈಗಲೇ ಹೋಗಿ

Walk-in-Interview: ವಿಕಾಸಸೌಧದ ಕೊಠಡಿ ಸಂಖ್ಯೆ 135ರಲ್ಲಿ ನಡೆಯುತ್ತಿದೆ ಸಂದರ್ಶನ; ಅಭ್ಯರ್ಥಿಗಳು ಈಗಲೇ ಹೋಗಿ

ಸಾಂದರ್ಭಿಕ ಚಿತ್ರ ( ಫೋಟೋ ಕೃಪೆ: google)

ಸಾಂದರ್ಭಿಕ ಚಿತ್ರ ( ಫೋಟೋ ಕೃಪೆ: google)

ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಸಂದರ್ಶನದಲ್ಲಿ ಭಾಗಿಯಾಗುವ  ಅಭ್ಯರ್ಥಿಯ ವಯಸ್ಸು ನವೆಂಬರ್ 2, 2022ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು.

  • News18 Kannada
  • Last Updated :
  • Bangalore [Bangalore], India
  • Share this:

    KSMCL Recruitment 2022: ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ(Karnataka State Minerals Corporation Limited)ದಲ್ಲಿ ಖಾಲಿ ಇರುವ ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಹುದ್ದೆಗೆ(Social Media Consultant) ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ(Bangalore Vikasa soudha) ಸಂದರ್ಶನ ನಡೆಯುತ್ತಿದೆ. ಸರ್ಕಾರಿ ಹುದ್ದೆಯ(Government Job) ಕನಸು ಕಾಣುತ್ತಿರುವವರು ಈ ಕೂಡಲೇ ಹೋಗಿ ಸಂದರ್ಶನದಲ್ಲಿ ಪಾಲ್ಗೊಳ್ಳಿ.


    ಈಗಾಗಲೇ ಅರ್ಜಿ ಸಲ್ಲಿಸಿರಬೇಕು:
    ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 7, 2022ಕ್ಕೆ ಮುನ್ನ ಇ-ಮೇಲ್ ಐಡಿ secy-ci@karnataka.gov.in ಗೆ ಕಳುಹಿಸಿರಬೇಕು.

    ಸಂಸ್ಥೆಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ
    ಹುದ್ದೆಯ ಹೆಸರುಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್
    ಸಂದರ್ಶನ ನಡೆಯುವ ದಿನಾಂಕ09/11/2022
    ಸಂದರ್ಶನ ನಡೆಯುವ ಸ್ಥಳವಿಕಾಸಸೌಧ, ಕೊಠಡಿ ಸಂಖ್ಯೆ 135
    ಅಧಿಕೃತ ವೆಬ್​ಸೈಟ್​ksmc.karnataka.gov.in
    ವಿದ್ಯಾರ್ಹತೆಬಿಸಿಇ, ಬಿಇ/ಬಿ.ಟೆಕ್
    ವೇತನಮಾಸಿಕ ₹30,000


    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ksmc.karnataka.gov.in ಗೆ ಭೇಟಿ ನೀಡಬೇಕು.


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 02/11/2022
    ಇ-ಮೇಲ್ ಮಾಡಲು ಕೊನೆಯ ದಿನ-07/11/2022
    ಸಂದರ್ಶನ ನಡೆಯುವ ದಿನ: 09/11/2022(ಇಂದು)


    ಇದನ್ನೂ ಓದಿ: JOB ALERT: ಸರ್ಕಾರಿ ಕೆಲಸ ಬೇಕು ಅಂದ್ರೆ ಇವತ್ತೇ ಅರ್ಜಿ ಹಾಕಿ, ವಿಕಾಸಸೌಧದಲ್ಲಿ ನ.9ಕ್ಕೆ ಸಂದರ್ಶನ


    ಸಂದರ್ಶನ ನಡೆಯುವ ಸ್ಥಳ:
    ಕೊಠಡಿ ಸಂಖ್ಯೆ 135
    ವಿಕಾಸ ಸೌಧ
    ಬೆಂಗಳೂರು
    ಕರ್ನಾಟಕ


    ಸಂದರ್ಶನದಲ್ಲಿ ಯಾರ್ಯಾರು ಭಾಗಿಯಾಗಬಹುದು?


     ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಸಂದರ್ಶನದಲ್ಲಿ ಭಾಗಿಯಾಗುವ ಅಭ್ಯರ್ಥಿ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ/ಸಂಸ್ಥೆ/ಬೋರ್ಡ್​​ನಿಂದ ಕಡ್ಡಾಯವಾಗಿ ಕಂಪ್ಯೂಟರ್​ ಸೈನ್ಸ್​/ ಇನ್ಫರ್ಮೇಶನ್ ಟೆಕ್ನಾಲಜಿ ವಿಭಾಗದಲ್ಲಿ ಕಡ್ಡಾಯವಾಗಿ ಬಿಸಿಎ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.


    ಅಭ್ಯರ್ಥಿಯ ವಯಸ್ಸು ಎಷ್ಟಿರಬೇಕು?


    ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಸಂದರ್ಶನದಲ್ಲಿ ಭಾಗಿಯಾಗುವ  ಅಭ್ಯರ್ಥಿಯ ವಯಸ್ಸು ನವೆಂಬರ್ 2, 2022ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು.


    ಇದನ್ನೂ ಓದಿ: Government Job: ಬೆಂಗಳೂರಿನಲ್ಲಿ JRF ಹುದ್ದೆ ಖಾಲಿ ಇದೆ, ತಿಂಗಳಿಗೆ 31,000 ಸಂಬಳ


    ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಹೇಗೆ?


    ಮೊದಲಿಗೆ ಅಭ್ಯರ್ಥಿಗಳ ಮೆರಿಟ್ ಲಿಸ್ಟ್​ ನ್ನು ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ.  ನಂತರ ಅಭ್ಯರ್ಥಿಗಳ ಅನುಭವವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕೊನೆಯದಾಗಿ  ಅಭ್ಯರ್ಥಿಗಳ ಸಂದರ್ಶನ ಮುಖ್ಯವಾಗುತ್ತದೆ. ಈ ಮೂರು ಹಂತಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

    Published by:Latha CG
    First published: