ಭಾರತದಾದ್ಯಂತ ಕೆಲಸ ಹುಡುಕುತ್ತಿರುವ ಎಷ್ಟೋ ಜನರಿಗೆ AtoS ಸಿಂಟೆಲ್ ಆಫ್ ಕ್ಯಾಂಪಸ್ ಡ್ರೈವ್ (Campus Drive) ಮೂಲಕ ಕೆಲಸ ಸಿಗುವ ಸಾಧ್ಯತೆ ಇದೆ. ನೀವು ಈ ಕೆಲಸ ಪಡೆಯಬೇಕಾದರೆ ಇಲ್ಲಿ ನೀಡಿರುವ ಮಾಹಿತಿ ಅನುಸರಿಸಿ ಅಪ್ಲೈ ಮಾಡಬಹುದು. ಈ ಕೆಲಸಕ್ಕೆ ನಿಮ್ಮ ಕೌಶಲ್ಯಕ್ಕೆ (Skill) ಅನುಗುಣವಾಗಿ ಸಂಬಳ ನಿಗದಿ ಮಾಡಲಾಗುತ್ತದೆ. ನೀವು ಪ್ರೆಶರ್ (Fresher) ಆಗಿದ್ದು ಕೆಲಸ ಹುಡುಕುತ್ತಿದ್ದರೆ ಖಂಡಿತ ಇಲ್ಲಿ ಅರ್ಜಿ ಸಲ್ಲಿಸಬಹುದು (Apply).
ಹುದ್ದೆ | ಟ್ರೈನಿ ಇಂಜಿನಿಯರ್ |
ಸಂಸ್ಥೆ | AtoS ಸಿಂಟೆಲ್ ಆಫ್ ಕ್ಯಾಂಪಸ್ ಡ್ರೈವ್ |
ವಯೋಮಿತಿ | 20 ವರ್ಷ ಮೇಲ್ಪಟ್ಟವರು |
ವಿದ್ಯಾರ್ಹತೆ | BE/ BTech/BSc/ BCS/MCA |
ಉದ್ಯೋಗ ಸ್ಥಳ | ಭಾರತದಾಧ್ಯಂತ ಅವಕಾಶವಿದೆ |
ಸಂಬಳ | ನಿಗದಿ ಪಡಿಸಿಲ್ಲ |
ಕೆಲಸದ ಪ್ರಕಾರ | ಪುಲ್ ಟೈಂ ಜಾಬ್ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಯಾವ ರೀತಿಯ ಕೆಲಸ ಇರುತ್ತದೆ?
ನೆಟ್ವರ್ಕಿಂಗ್, ಡೇಟಾ ಬೇಸ್, ಕ್ಲೌಡ್ ಸೇವೆಗಳು, ವಿಂಡೋಸ್, ಸರ್ವಿಸ್ ಡೆಸ್ಕ್, ಡಿಜಿಟಲ್ ವರ್ಕ್ಪ್ಲೇಸ್ ಮತ್ತು ಇತರ ಐಟಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡಬೇಕಾಗುತ್ತದೆ.
ಇದನ್ನೂ ಓದಿ: Snapdeal Job: ಜಸ್ಟ್ ಒಂದು ಫೋನ್ ಮಾಡಿ, ಕೆಲಸಕ್ಕೆ ಅಪ್ಲೈ ಮಾಡಿ!
ಆಯ್ಕೆ ಪ್ರಕ್ರಿಯೆ
ಲಿಖಿತ ಹಾಗೂ ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕೆಲಸ ಮೂರು ಪಾಳಿಯಲ್ಲಿ ಇರುತ್ತದೆ (ರಾತ್ರಿ, ಮಧ್ಯಾಹ್ನ, ಬೆಳಿಗ್ಗೆ) ಈ ಮೂರು ಪಾಳಿಗಳಲ್ಲಿ ಯಾವ ಶಿಪ್ಟ್ನಲ್ಲಿ ಬೇಕಾದರೂ ಕೆಲಸ ಮಾಡಲು ಸಿದ್ಧರಿರಬೇಕು.
ವಿದ್ಯಾರ್ಹತೆ:
BE, BTech, BSc, BCS, MCA ಹೀಗೆ ಯಾವದಾದರೊಂದು ಪದವಿ ಪೂರ್ಣಗೊಳಿಸಿರಬೇಕು ಅಷ್ಟೇ ಅಲ್ಲ ಯಾವುದಾದರು ಮಾನ್ಯ ಪಡೆದ ವಿಶ್ವವಿದ್ಯಾಲಯದಲ್ಲೇ ನೀವು ಕಲಿತಿರಬೇಕು. ಸಂವಹನ ಕೌಶಲ್ಯ ಉತ್ತಮವಾಗಿರಬೇಕು. ಹೆಚ್ಚು ಭಾಷೆ ತಿಳಿದಿದ್ದರೆ ಉತ್ತಮ. ಈ ಎಲ್ಲಾ ಅಂಶಗಳನ್ನು ನೀವು ಹೊಂದಿದ್ದರೆ ಖಂಡಿತ ಈ ಕೂಡಲೇ ಅಪ್ಲೈ ಮಾಡಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ.
ಅರ್ಜಿ ಸಲ್ಲಿಸಲು ನೀವು ನೇರವಾಗಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ಇಲ್ಲಿ ಕ್ಲಿಕ್ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ