Assistant Professors Post: ನೀವು ಪಿಜಿ ಮಾಡಿದ್ದೀರಾ? 57700-1,82,400 ಸಂಬಳದ 1242 ಹುದ್ದೆಗಳು ಖಾಲಿ ಇವೆ

Karnataka Examination Authority: ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರ್ಗಿ ಮತ್ತು ಮಂಗಳೂರಿನಲ್ಲಿ ನಡೆಸಲಾಗುವುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

  • Share this:
    ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ(Government First Grade college) ಸಹಾಯಕ ಪ್ರಾಧ್ಯಾಪಕರ(Assistant Professors) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ(Competitive Exam) ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ(Karnataka Government) ಇದೀಗ ಅಧಿಸೂಚನೆಯನ್ನು(Notification) ಬಿಡುಗಡೆ ಮಾಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(Karnataka Examination Authority) ವೆಬ್​ಸೂಟ್​ನಲ್ಲೂ ಸಹ ನೋಟಿಫಿಕೇಶನ್ ಬಿಡುಗಡೆಯಾಗಿದೆ. 2015ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳ ಲಭ್ಯವಿಲ್ಲದೇ ಭರ್ತಿಯಾಗಿರುವ 145 ಹುದ್ದೆಗಳನ್ನು ಒಳಗೊಂಡಂತೆ, ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.

    ಈ ಕೆಳಕಂಡ ವಿಷಯಗಳಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯನ್ನು ನಡೆಸಲಾಗುತ್ತದೆ.

    • ಕನ್ನಡ

    • ಇಂಗ್ಲಿಷ್

    • ಹಿಂದಿ

    • ಉರ್ದು

    • ಇತಿಹಾಸ

    • ಅರ್ಥಶಾಸ್ತ್ರ

    • ರಾಜ್ಯಶಾಸ್ತ್ರ

    • ಸಮಾಜಶಾಸ್ತ್ರ

    • ಶಿಕ್ಷಣ ಶಾಸ್ತ್ರ

    • ಕಾನೂನು

    • ಸಮಾಜ ಕಾರ್ಯ

    • ಭೋಗೋಳ ಶಾಸ್ತ್ರ

    • ಭೂಗರ್ಭ ಶಾಸ್ತ್ರ

    • ವಾಣಿಜ್ಯ ಶಾಸ್ತ್ರ

    • ನಿರ್ವಹಣಾ ಶಾಸ್ತ್ರ

    • ಭೌತಶಾಸ್ತ್ರ

    • ರಸಾಯನ ಶಾಸ್ತ್ರ

    • ಜೈವಿಕ ರಸಾಯನ ಶಾಸ್ತ್ರ

    • ಗಣಿತ ಶಾಸ್ತ್ರ

    • ಸೂಕ್ಷ್ಮ ಜೀವಶಾಸ್ತ್ರ

    • ಪ್ರಾಣಿ ಶಾಸ್ತ್ರ

    • ಸಸ್ಯ ಶಾಸ್ತ್ರ

    • ಎಲೆಕ್ಟ್ರಾನಿಕ್ಸ್​

    • ಗಣಕ ವಿಜ್ಞಾನ

    • ಸಂಖ್ಯಾಶಾಸ್ತ್ರ

    • ಫ್ಯಾಶನ್ ಟೆಕ್ನಾಲಜಿ ವಿಯಷಗಳಿಗೆ ನೇಮಕಾತಿ ನಡೆಸಲಾಗುತ್ತದೆ.


    ಹುದ್ದೆ: ಸಹಾಯಕ ಪ್ರಾಧ್ಯಾಪಕ

    ಹುದ್ದೆಗಳ ಸಂಖ್ಯೆ: 1242

    ವಿದ್ಯಾರ್ಹತೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಖಾಲಿ ಹುದ್ದೆಯ ವಿಷಯಕ್ಕೆ ಸಂಬಂಧಿಸಿದ ಸ್ನಾತಕೋತ್ತರ ಪದವಿ(Post Graduate) ಜತೆಗೆ, ಎನ್​ಇಟಿ(NET), ಕೆಸ್​ಇಟಿ(K-SET), ಪಿಹೆಚ್​​ಡಿ(Ph.D) ಉತ್ತೀರ್ಣರಾಗಿರಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01/10/2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/10/2021

    ಪರೀಕ್ಷೆ ನಡೆಯುವ ಸಂಭವನೀಯ ದಿನಾಂಕ: ಡಿಸೆಂಬರ್ 2021

    ವೇತನ ಶ್ರೇಣಿ: ಯುಜಿಸಿ ವೇತನ ಶ್ರೇಣಿ ₹ 57700-1,82,400

    ವಯೋಮಿತಿ: ಕನಿಷ್ಠ 22 ವರ್ಷ- ಗರಿಷ್ಠ 40 ವರ್ಷ.
    2ಎ, 2ಬಿ, 3ಎ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ.
    ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ

    ಅರ್ಜಿ ಸಲ್ಲಿಸುವ ವಿಧಾನ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​ಸೈಟ್​​ https://kea.kar.nic.in ನಲ್ಲಿ ತೋರಿಸಿರುವ Assistant Professors Recruitment -2021 ಲಿಂಕ್​ನ್ನು ಆಯ್ಕೆ ಮಾಡಿ ಆನ್​ಲೈನ್​ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು.

    ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಇತರೆ ಪ್ರವರ್ಗಗಳು(ಪ್ರವರ್ಗ-2ಎ/2ಬಿ/3ಎ/3ಬಿ)- 2000 ರೂ.

    ಎಸ್​ಸಿ/ಎಸ್​ಟಿ ಮತ್ತು ಪ್ರವರ್ಗ-1- 1,000 ರೂ.

    ಹುದ್ದೆ ಮತ್ತು ನೇಮಕಾತಿ ವಿವರ:

























    ಹುದ್ದೆ ಹುದ್ದೆಗಳ ಸಂಖ್ಯೆ ವಿದ್ಯಾರ್ಹತೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಪರೀಕ್ಷೆ ನಡೆಯುವ ಸಂಭವನೀಯ ದಿನಾಂಕ ವೇತನ ಶ್ರೇಣಿ ವಯೋಮಿತಿ ಅರ್ಜಿ ಸಲ್ಲಿಸುವ ವಿಧಾನ
    ಸಹಾಯಕ ಪ್ರಾಧ್ಯಾಪಕ 1242 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಖಾಲಿ ಹುದ್ದೆಯ ವಿಷಯಕ್ಕೆ ಸಂಬಂಧಿಸಿದ ಸ್ನಾತಕೋತ್ತರ ಪದವಿ(Post Graduate) ಜತೆಗೆ, ಎನ್​ಇಟಿ(NET), ಕೆಸ್​ಇಟಿ(K-SET), ಪಿಹೆಚ್​​ಡಿ(Ph.D) ಉತ್ತೀರ್ಣರಾಗಿರಬೇಕು.

    01/10/2021

    31/10/2021 ಡಿಸೆಂಬರ್ 2021 ಯುಜಿಸಿ ವೇತನ ಶ್ರೇಣಿ ₹ 57700-1,82,400 ಕನಿಷ್ಠ 22 ವರ್ಷ- ಗರಿಷ್ಠ 40 ವರ್ಷ.
    2ಎ, 2ಬಿ, 3ಎ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ.
    ಎಸ್​ಸಿ, ಎಸ್​ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ


    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್​ಸೈಟ್​​ https://kea.kar.nic.in ನಲ್ಲಿ ತೋರಿಸಿರುವ Assistant Professors Recruitment -2021 ಲಿಂಕ್​ನ್ನು ಆಯ್ಕೆ ಮಾಡಿ ಆನ್​ಲೈನ್​ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬೇಕು.




    ಅರ್ಜಿ ಶುಲ್ಕ:

    •  ಸಾಮಾನ್ಯ ಮತ್ತು ಇತರೆ ಪ್ರವರ್ಗಗಳು(ಪ್ರವರ್ಗ-2ಎ/2ಬಿ/3ಎ/3ಬಿ)- 2000 ರೂ.

    • ಎಸ್​ಸಿ/ಎಸ್​ಟಿ ಮತ್ತು ಪ್ರವರ್ಗ-1- 1,000 ರೂ.


    ಈ ಹುದ್ದೆಗಳಲ್ಲಿ ಶೇಕಡ.95 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಮತ್ತು ಶೇಕಡ.5 ರಷ್ಟು ಇಲಾಖೆಯ ಗ್ರೂಪ್‌ ಸಿ ವೃಂದದಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿದೆ.

    ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರ್ಗಿ ಮತ್ತು ಮಂಗಳೂರಿನಲ್ಲಿ ನಡೆಸಲಾಗುವುದು.
    Published by:Latha CG
    First published: