ಪದವಿ ಆದ್ರೂ ಪರವಾಗಿಲ್ಲ, IT Sectorನಲ್ಲಿ ಕೆಲಸ ಪಡೆಯಬೇಕು ಅಂದ್ರೆ ಈ ಐದು Skill ಕಲಿಯಿರಿ ಸಾಕು

ತಂತ್ರಜ್ಞಾನ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ, ಅನೇಕರು ಈ ಡಿಜಿಟಲ್​ ಉದ್ಯಮದಲ್ಲಿ ವೃತ್ತಿ ಪಡೆಯಲು ಮುಂದಾಗುತ್ತಿದ್ದಾರೆ. ಈ ಹಿನ್ನಲೆ ಈ ಐದು ಕೌಶಲ್ಯ ಕಲಿತಿರುವುದು ಅವಶ್ಯವಾಗಿದೆ.

File photo

File photo

 • Share this:
  ಕೋವಿಡ್​ ಅಲೆಗೆ ಅನೇಕ ಉದ್ಯಮ ವಲಯಗಳ ತತ್ತರಿಸಿದವು. ಆದರೆ, ಐಟಿ ವಲಯ (IT Sector) ಮಾತ್ರ ಇದಕ್ಕೆ ಅಪವಾದದಂತಿದೆ. ಇದೇ ಕೋವಿಡ್ (Covi)​ ಸಂಕಷ್ಟದ ಸಮಯದಲ್ಲಿ ಕೂಡ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸುವ ಮೂಲಕ  ಐಟಿ ಕಂಪನಿಗಳು ತಮ್ಮ ಲಾಭಾವನ್ನು ಪ್ರಕಟಿಸಿದವು. ಇತ್ತೀಚಿನ ವರ್ಷಗಳಲ್ಲಿ ಭಾರತದ ಐಟಿ ಸೇವೆಗಳಿಗೆ ಡಿಜಿಟಲ್ ಕೌಶಲ್ಯ ಅಭಿವೃದ್ಧಿ ಪ್ರಮುಖ ವ್ಯಾಪಾರ ಆದ್ಯತೆಯಾಗಿದೆ. ಹಲವಾರು ಸಂಸ್ಥೆಗಳು ಈಗಾಗಲೇ ತಮ್ಮ ಒಟ್ಟಾರೆ ಸಾಂಸ್ಥಿಕ ಕಾರ್ಯತಂತ್ರದಲ್ಲಿ ಡಿಜಿಟಲ್ ಕೌಶಲ್ಯ ಅಭಿವೃದ್ಧಿಯನ್ನು ಸಂಯೋಜಿಸಿವೆ. ಆನ್‌ಲೈನ್ ಮತ್ತು ತಂತ್ರಜ್ಞಾನ-ಚಾಲಿತ ಕಲಿಕೆಯ ಅಳವಡಿಕೆ ಗಮನಾರ್ಹವಾಗಿ ಬೆಳೆದಿದೆ. ಭಾರತದ ಡಿಜಿಟಲ್ ಕೌಶಲ್ಯ (Digital Skill) ಹೊಂದಿದ ಕಾರ್ಯಪಡೆಯು ವಾರ್ಷಿಕವಾಗಿ ಸಾಧಾರಣವಾಗಿ ಶೇಕಡ 20 ರಷ್ಟು ಬೆಳೆಯುತ್ತಿದೆ. ಡಿಜಿಟಲ್​ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. 

  ಐಟಿ ವಲಯದಲ್ಲಿ ಬಿಗ್ ಡೇಟಾ ವಿಶ್ಲೇಷಣೆ, ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಸೈಬರ್‌ ಸೆಕ್ಯುರಿಟಿ, ರೋಬೋಟಿಕ್ ಪ್ರಕ್ರಿಯೆ ಆಟೊಮೇಷನ್, ಬ್ಲಾಕ್‌ಚೈನ್, ವರ್ಧಿತ ಮತ್ತು ವರ್ಚುವಲ್ ರಿಯಾಲಿಟಿ ಮತ್ತು 3 ಡಿ ಪ್ರಿಂಟಿಂಗ್‌ನಲ್ಲಿ ಪರಿಣತಿ ಹೊಂದಿರಬೇಕಿದೆ.
  ವಿಶೇಷ ಎಂದರೆ ಭಾರತದ ಐಟಿ ಅಥವಾ ಐಟಿಇಎಸ್ ವಲಯದಲ್ಲಿ ಉದ್ಯೋಗದಲ್ಲಿರುವ 4.3 ಬಿಲಿಯನ್ ಜನರಲ್ಲಿ, ಬಹುತೇಕರು ಕಂಪ್ಯೂಟರ್ ಸೈನ್ಸ್‌ನಲ್ಲಿ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿಲ್ಲ

  ತಂತ್ರಜ್ಞಾನ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ, ಅನೇಕರು ಈ ಡಿಜಿಟಲ್​ ಉದ್ಯಮದಲ್ಲಿ ವೃತ್ತಿ ಪಡೆಯಲು ಮುಂದಾಗುತ್ತಿದ್ದಾರೆ. ಈ ಹಿನ್ನಲೆ ಈ ಐದು ಕೌಶಲ್ಯ ಕಲಿತಿರುವುದು ಅವಶ್ಯವಾಗಿದೆ.

  1. ಕೋರ್​ ಲೀಡರ್​​ ಶಿಪ್​​ ಸ್ಕಿಲ್​
  ಉದ್ಯೋಗಿಗಳು ಸ್ವಯಂ-ನಿರ್ವಹಣೆಯ ತಂಡಗಳನ್ನು ಪ್ರೋತ್ಸಾಹಿಸುವುದು. ಪ್ರಮುಖ ನಾಯಕತ್ವ ಕೌಶಲ್ಯಗಳನ್ನು ಅಳವಡಿಸುವುದು ಮುಖ್ಯವಾಗಿದೆ. ಸಂವಹನ, ಪ್ರಭಾವದ ನಾಯಕತ್ವ ಅಧಿಕಾರಿಯ ಉನ್ನತ ಕೌಶಲ್ಯಗಳಲ್ಲಿ ಒಂದಾಗಿದೆ

  2. ಸಮಸ್ಯೆ ನಿರ್ವಹಣಾ ಕಲೆ
  ಯಾವುದೇ ಕೆಲಸದ ಪಾತ್ರದಲ್ಲಿ ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳು ಅತ್ಯಗತ್ಯ. ಸಮಸ್ಯೆ-ಪರಿಹರಿಸುವ ಕೌಶಲ್ಯದ ಜೊತೆಗೆ ತರ್ಕವನ್ನು ಬಳಸಿ ಸಮಸ್ಯೆ ಅರ್ಥೈಸಿಕೊಂಡು ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಸಮಸ್ಯೆ ಪರಿಹರಿಸುವ ಕೌಶಲ್ಯವು ಸೃಜನಶೀಲ ಚಿಂತನೆ, ಹೊಂದಾಣಿಕೆಯನ್ನು ಒಳಗೊಂಡಿದೆ.

  ಇದನ್ನು ಓದಿ: ನಿರುದ್ಯೋಗಿಗಳ ಸವಲತ್ತನ್ನು ಒಂದು ವರ್ಷ ವಿಸ್ತರಿಸಿದ ಇಎಸ್​ಐಸಿ

  3. ತಾಂತ್ರಿಕ ಕೌಶಲ್ಯ
  ತಾಂತ್ರಿಕ ಜ್ಞಾನದೊಂದಿಗೆ ವೃತ್ತಿಪರ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ. ಡಿಜಿಟಲೀಕರಣ ಮತ್ತು ತಂತ್ರಜ್ಞಾನದ ಅಳವಡಿಕೆಯ ವೇಗವನ್ನು ಹೆಚ್ಚಿಸುವುದರೊಂದಿಗೆ, ತಾಂತ್ರಿಕ ಕೌಶಲ್ಯಗಳನ್ನು ಉನ್ನತೀಕರಿಸುವ ಅವಶ್ಯಕತೆಯಿದೆ. ಕೃತಕ ಬುದ್ಧಿಮತ್ತೆ (ಎಐ), ಮತ್ತು ಯಂತ್ರ ಕಲಿಕೆ, ಬಿಗ್ ಡೇಟಾ, ವಿಶ್ಲೇಷಣೆ, ಕ್ಲೌಡ್ ಕಂಪ್ಯೂಟಿಂಗ್, ಮತ್ತು ಆಟೊಮೇಷನ್ ನಲ್ಲಿ ಮಾಸ್ಟರಿಂಗ್ ಕೌಶಲ್ಯಗಳು ಇದರಲ್ಲಿ ಪ್ರಮುಖವಾಗಿದೆ.

  4. ಪ್ರಾಜೆಕ್ಟ್​ ಮ್ಯಾನೇಜ್​ಮೆಂಟ್​
  ಐಟಿ/ಐಟಿಇಎಸ್ ವಲಯದಲ್ಲಿ ಕ್ರಾಸ್-ಫಂಕ್ಷನಲ್ ಕೆಲಸ ಸಾಮಾನ್ಯವಾಗಿದೆ. ಇದು ಒಬ್ಬರ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕೌಶಲ್ಯಗಳನ್ನು ಸುಧಾರಿಸಲು ಪ್ರಯೋಜನವನ್ನು ನೀಡುತ್ತದೆ. ಇದು ತಂಡಗಳೊಂದಿಗೆ ಉತ್ತಮವಾಗಿ ಕೆಲಸ ಮಾಡಲು, ಗಡುವನ್ನು ಪೂರೈಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಸಾಮರ್ಥ್ಯವನ್ನು ನೀಡುತ್ತದೆ. ಜೊತೆಗೆ ಏಕಕಾಲದಲ್ಲಿ ಅನೇಕ ಯೋಜನೆಗಳಲ್ಲಿ ಕೆಲಸ ಮಾಡುವುದು, ಈ ನಿರ್ದಿಷ್ಟ ಕೌಶಲ್ಯವು ನಾಯಕತ್ವದ ಚಾಣಾಕ್ಷತೆಯನ್ನು ಕಲಿಸುತ್ತದೆ

  5. ಕ್ರಿಯಾತ್ಮಕತೆ
  ಸೃಜನಶೀಲತೆ ಇಂದು ಪ್ರತಿಯೊಂದು ಕೆಲಸಕ್ಕೂ ಅವಶ್ಯಕವಾಗಿದೆ. ನಿಮ್ಮಲ್ಲಿ ಸೃಜನಾತ್ಮಕ ಪರಿಕಲ್ಪನೆ ಇದ್ದಲ್ಲಿ ಇದು ಉತ್ತಮ ವೇದಿಕೆಯಾಗಿದೆ.

  ಭಾರತದ ಐಟಿ ವಲಯ, ಖಾಸಗಿ ವಲಯದಲ್ಲಿ ಅತಿದೊಡ್ಡ ಉದ್ಯೋಗದಾತರಾಗಿದ್ದು, 2025 ರ ವೇಳೆಗೆ 100 ಡಾಲರ್ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ. ಈ ಹಿನ್ನಲೆ ಸಮಗ್ರ ತರಬೇತಿ ಮತ್ತು ಕಲಿಕೆಯ ಅವಕಾಶಗಳು ಸಾಂಸ್ಥಿಕ ಬೆಳವಣಿಗೆಯ ಕಾರ್ಯತಂತ್ರಗಳ ಭಾಗವಾಗಿರುವುದರಿಂದ, ವೃತ್ತಿಪರರು ಕೌಶಲ್ಯ ಮತ್ತು ಕೌಶಲ್ಯಗಳನ್ನು ಕಲಿಯುವ ಸಾಮರ್ಥ್ಯ ಮತ್ತು ಮನೋಭಾವವನ್ನು ಹೊಂದಿರಬೇಕು.
  Published by:Seema R
  First published: