• ಹೋಂ
 • »
 • ನ್ಯೂಸ್
 • »
 • Jobs
 • »
 • Artificial Intelligence: ಶೇಕಡಾ 80ರಷ್ಟು ಉದ್ಯೋಗಿಗಳ ಅವಕಾಶ ಕಸಿದುಕೊಳ್ಳುತ್ತಾ ಕೃತಕ ಬುದ್ಧಿಮತ್ತೆ? ಮುಂದಿನ 5 ವರ್ಷಗಳಲ್ಲಿ ಬಿಗ್ ಚೇಂಜಸ್

Artificial Intelligence: ಶೇಕಡಾ 80ರಷ್ಟು ಉದ್ಯೋಗಿಗಳ ಅವಕಾಶ ಕಸಿದುಕೊಳ್ಳುತ್ತಾ ಕೃತಕ ಬುದ್ಧಿಮತ್ತೆ? ಮುಂದಿನ 5 ವರ್ಷಗಳಲ್ಲಿ ಬಿಗ್ ಚೇಂಜಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೃತಕ ಬುದ್ಧಿಮತ್ತೆ (Artificial Intelligence) ಮುಂಬರುವ ದಿನಗಳಲ್ಲಿ 80% ರಷ್ಟು ಮಾನವ ಉದ್ಯೋಗಗಳನ್ನು ಬದಲಾಯಿಸಬಹುದು. ಆದರೆ ಇದು ಉತ್ತಮ ವಿಷಯವಾಗಿದೆ ಎಂದು ಯುಎಸ್ (US) ಬ್ರೆಜಿಲಿಯನ್ ಎಐ ರಿಸರ್ಚರ್ ಬೆನ್ ಗೋರ್ಟ್‌ಜೆಲ್ ತಿಳಿಸಿದ್ದಾರೆ.

 • Share this:

ಕೃತಕ ಬುದ್ಧಿಮತ್ತೆ (Artificial Intelligence) ಮುಂಬರುವ ದಿನಗಳಲ್ಲಿ 80% ರಷ್ಟು ಮಾನವ ಉದ್ಯೋಗಗಳನ್ನು ಬದಲಾಯಿಸಬಹುದು. ಆದರೆ ಇದು ಉತ್ತಮ ವಿಷಯವಾಗಿದೆ ಎಂದು ಯುಎಸ್ (US) ಬ್ರೆಜಿಲಿಯನ್ ಎಐ ರಿಸರ್ಚರ್ ಬೆನ್ ಗೋರ್ಟ್‌ಜೆಲ್ ತಿಳಿಸಿದ್ದಾರೆ. ಉನ್ನತ ಮಟ್ಟದ ಕೌಶಲ್ಯಗಳನ್ನು ಅರಿತುಕೊಳ್ಳಲು ಅಂತೆಯೇ ಉದ್ಯೋಗದಲ್ಲಿ ಸಾಕಷ್ಟು ಸಮಯ ಉಳಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಪರಿಕರಗಳು ನೆರವಾಗಲಿವೆ ಎಂದು ಬೆನ್ ಗೋರ್ಟ್‌ಜೆಲ್ (Ben Goertzel) ತಿಳಿಸುತ್ತಾರೆ.


ಎಐ ಮುನ್ನಡೆಸುವ ಮಹಾನ್ ಮೇಧಾವಿ


ಗಣಿತತಜ್ಞ, ಅರಿವಿನ ವಿಜ್ಞಾನಿ ಮತ್ತು ಪ್ರಸಿದ್ಧ ರೋಬೋಟ್-ಸೃಷ್ಟಿಕರ್ತ ಗೋರ್ಟ್‌ಜೆಲ್, ಸಿಂಗ್ಯುಲಾರಿಟಿನೆಟ್ (SingularityNET) ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರು ಮಾನವ ಅರಿವಿನ ಸಾಮರ್ಥ್ಯಗಳೊಂದಿಗೆ ಕೃತಕ ಬುದ್ಧಿಮತ್ತೆಯನ್ನು ರಚಿಸಲು ರೀಸರ್ಚ್ ಗ್ರೂಪ್ ಅನ್ನು ಆರಂಭಿಸಿದ ಮೇಧಾವಿ ಎಂದೆನ್ನಿಸಿದ್ದಾರೆ.


ಕೃತಕ ಬುದ್ಧಿಮತ್ತೆ ಹಾಗೂ ಮಾನವನ ಅರಿವಿನ ಸಾಮರ್ಥ್ಯಗಳ ಬಗ್ಗೆ ಕೆಲವೊಂದು ಮಾಹಿತಿ ಹಾಗೂ ಮುಂದಿನ ದಿನಗಳಲ್ಲಿ ಎಐ ಹೇಗೆ ಮಾನವರ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ತಿಂಗಳಿಗೆ 50,000 ಸಂಬಳ- ಬೆಂಗಳೂರಿನಲ್ಲಿದೆ ಬಂಪರ್ ಉದ್ಯೋಗ


ಸುಧಾರಣೆಗಳನ್ನು ತರುವುದು ಅಗತ್ಯವಾಗಿದೆ


ಮಾನವನ ಅರಿವಿನ ಸಾಮರ್ಥ್ಯಗಳೊಂದಿಗೆ ಕೃತಕ ಬುದ್ಧಿಮತ್ತೆಯ ಪರಿಣಾಮಗಳನ್ನು ಬೆನ್ ವಿವರಿಸಿದ್ದು ಮೆಶೀನ್‌ಗಳು ಕೂಡ ಮಾನವರಷ್ಟೇ ಚುರುಕು ಹಾಗೂ ಕೌಶಲ್ಯಪೂರ್ಣರಾಗಲು ಅವುಗಳಿಗೆ ನೀಡುವ ತರಬೇತಿ ಹಾಗೂ ಪ್ರೋಗ್ರಾಮಿಂಗ್‌ನಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಬೇಕಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ನಾವ್ಯಾರೂ ಇಲ್ಲಿಯವರೆಗೆ ಆ ಹಂತಕ್ಕೆ ತಲುಪಿಲ್ಲ ಆದರೆ ಮುಂದೊಂದು ದಿನ ಆ ಸಾಮರ್ಥ್ಯವನ್ನು ಗಳಿಸಿಕೊಳ್ಳುವ ದಿನಗಳು ದೂರವಿಲ್ಲ ಎಂದು ತಿಳಿಸಿದ್ದಾರೆ.


ಎಐಗಳಿಂದ ತಪ್ಪು ಮಾಹಿತಿಗಳು ಹರಡುವ ಸಾಧ್ಯತೆ ಇರುತ್ತದೆ


ಕೃತಕ ಬುದ್ಧಿಮತ್ತೆ ಮಾನವನಷ್ಟೇ ಪ್ರಭಾವಶಾಲಿ ಹಾಗೂ ಚುರುಕಾಗಲು ಇನ್ನಷ್ಟು ಪ್ರಯೋಗಗಳನ್ನು ನಡೆಸಬೇಕಾಗಿದೆ, ಕೆಲವೊಂದು ಕ್ಲಿಷ್ಟ ಅಂಶಗಳನ್ನು ಎಐ ಮಾನವರಂತೆ ಪರಿಹರಿಸಲು ಸಾಧ್ಯವಿಲ್ಲ. ಮಾನವರ ಬುದ್ಧಿಮತ್ತೆಯ ಹಂತಕ್ಕೇರಲು ಇನ್ನಷ್ಟು ಕಾಲಾವಕಾಶ ಬೇಕು ಎಂಬ ಅಂಶವನ್ನು ಅವರು ತಿಳಿಸಿದ್ದಾರೆ. ಎಐಗಳು ತಪ್ಪುಮಾಹಿತಿಯನ್ನು ಹರಡುವ ಸಾಧ್ಯತೆ ಕೂಡ ಇದೆ ಎಂದು ಬೆನ್ ತಿಳಿಸಿದ್ದಾರೆ.


ಸಾಂದರ್ಭಿಕ ಚಿತ್ರ


ನಾವು ಮುಕ್ತ ಸಮಾಜದಲ್ಲಿ ವಾಸಿಸುತ್ತಿರುವುದರಿಂದ ಇಂಟರ್ನೆಟ್‌ಗೆ ಹೇಗೆ ಬಹಿಷ್ಕಾರವಿಲ್ಲವೋ ಅಂತೆಯೇ ಕೃತಕ ಬುದ್ಧಿಮತ್ತೆಯನ್ನು ನಿರಾಕರಿಸಲಾಗುವುದಿಲ್ಲ. ತಂತ್ರಜ್ಞಾನದ ಪ್ರಗತಿಯನ್ನು ನಾವೆಲ್ಲರೂ ಸ್ವೀಕರಿಸಲೇಬೇಕು ಎಂದು ಬೆನ್ ಸೂಚಿಸಿದ್ದಾರೆ.


ಮಾನವನ ಉದ್ಯೋಗವನ್ನು ಎಐ ಬದಲಾಯಿಸುತ್ತದೆ ಎಂಬುದು ಅಪಾಯದ ಮುನ್ಸೂಚನೆಯೇ?


ಮಾನವನ ಉದ್ಯೋಗವನ್ನು ಎಐ ಬದಲಾಯಿಸುತ್ತದೆ ಎಂಬುದು ಅಪಾಯದ ಮುನ್ಸೂಚನೆಯಲ್ಲವೇ ಎಂಬ ಪ್ರಶ್ನೆಗೂ ಉತ್ತರಿಸಿರುವ ಬೆನ್, ಮುಂದೊಂದು ದಿನ ಉದ್ಯೋಗದ 80% ದಷ್ಟು ಭಾಗಗಳಿಗೆ ಮಾನವರ ಸಹಾಯ ಬೇಕಾಗುವುದಿಲ್ಲ ಇದು ಕೂಡ ಒಂದು ಊಹೆ ಮಾತ್ರವಾಗಿದೆ ಎಂದು ಬೆನ್ ತಿಳಿಸಿದ್ದಾರೆ.
ಇದು ಅಪಾಯ ಎಂಬುದಾಗಿ ನಾನು ಹೇಳುವುದಿಲ್ಲ ಎಂದು ತಿಳಿಸಿರುವ ಬೆನ್, ಇದು ಪ್ರಯೋಜನಕಾರಿಯಾಗಿ ಮಾರ್ಪಡಲಿದೆ ಎಂದು ತಿಳಿಸಿದ್ದಾರೆ. ಜನರು ಕೃತಕ ಬುದ್ಧಿಮತ್ತೆಯ ಪರಿಕರಗಳಿಂದ ಇನ್ನಷ್ಟು ಉತ್ತಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬಹುದು ಅಂತೆಯೇ ಸಮಯವನ್ನು ಉಳಿಸಬಹುದು ಎಂದು ಬೆನ್ ಹೇಳುತ್ತಾರೆ.


ಮಾನವ ರೊಬೋಟ್‌ಗಳಿಂದ ಸಮಾಜಕ್ಕೆ ಒಳಿತಾಗಲಿದೆ


ರೊಬೋಟ್‌ಗಳು ಸಮಾಜಕ್ಕೆ ಉತ್ತಮ ಸಂಗಾತಿಯಾಗಿ ರೂಪುಗೊಳ್ಳಲಿದೆ ಒಬ್ಬಂಟಿಯಾಗಿ ಇರುವವರಿಗೆ ಮಾನವ ರೊಬೋಟ್‌ಗಳು ಒಡನಾಡಿಯಾಗಿ ಅವರೊಂದಿಗೆ ಇರಲಿದೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದು, ನಿಮ್ಮೊಂದಿಗೆ ಸಂಭಾಷಿಸುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಲು ಸಹಕಾರಿಯಾಗಿದೆ.

top videos


  ಅಮೆರಿಕಾದಂತಹ ದೊಡ್ಡ ನಗರಗಳಲ್ಲಿ ಹಿರಿಯ ನಾಗರಿಕರು ಓಲ್ಡ್ ಏಜ್ ಹೋಮ್‌ಗಳಲ್ಲಿ ಒಬ್ಬಂಟಿಗರಾಗಿಯೇ ದಿನಗಳೆಯುತ್ತಾರೆ. ಅವರಿಗೆ ಸಮಯ ಕಳೆಯಲು ಟಿವಿ, ಸುದ್ದಿಪತ್ರಿಕೆ, ಉತ್ತಮ ಆಹಾರ ಎಲ್ಲವೂ ಇದೆ ಆದರೆ ಭಾವನಾತ್ಮಕ ಹಾಗೂ ಸಾಮಾಜಿಕ ಬೆಂಬಲದ ಕೊರತೆ ಅವರನ್ನು ಕಾಡುತ್ತಿದೆ. ಈ ಕೃತಕ ಬುದ್ಧಿಮತ್ತೆಗೆ ಮಾನವ ರೊಬೋಟ್‌ಗಳನ್ನು ಅಳವಡಿಸಿದರೆ ಅವುಗಳು ಇವರೊಂದಿಗೆ ಸಂವಾದ ನಡೆಸುವುದು, ಮಾತನಾಡುವುದು ಸೇರಿದಂತೆ ಅವರ ಬೇಸರವನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಬೆನ್ ತಿಳಿಸುತ್ತಾರೆ.

  First published: