Army Jobs: 8700 ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ

ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1,2021ಕ್ಕೆ 40-57 ವರ್ಷದೊಳಗಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
AWES Recruitment 2022: ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ(Army Welfare Education Society ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8700 ಶಿಕ್ಷಕ(Teacher) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 7ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ awesindia.com ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.ಸಂಸ್ಥೆಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ
ಹುದ್ದೆಯ ಹೆಸರುಶಿಕ್ಷಕ
ಒಟ್ಟು ಹುದ್ದೆಗಳು8700
ವಿದ್ಯಾರ್ಹತೆಬಿ.ಎಡ್, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ
ಉದ್ಯೋಗದ ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
ವೇತನನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ07/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ28/01/2022ವಿದ್ಯಾರ್ಹತೆ:
ಪಿಜಿಟಿ- ಬಿ.ಎಡ್​, ಸ್ನಾತಕೋತ್ತರ ಪದವಿ
ಟಿಜಿಟಿ- ಬಿ.ಎಡ್, ಪದವಿ
ಪಿಆರ್​ಟಿ-ಡಿಪ್ಲೋಮಾ, ಬಿ.ಎಡ್, ಪದವಿ

ಇದನ್ನೂ ಓದಿ: KPSC ನೇಮಕಾತಿ: 150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ Apply ಮಾಡಿ

ಅನುಭವ:
ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ 5 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರಬೇಕು.

ವಯೋಮಿತಿ:
ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1,2021ಕ್ಕೆ 40-57 ವರ್ಷದೊಳಗಿರಬೇಕು.

ವಯೋಮಿತಿ ಸಡಿಲಿಕೆ:
ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: FACT Recruitment 2022: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ 1 ಲಕ್ಷದವರೆಗೆ

ಅರ್ಜಿ ಶುಲ್ಕ:
ಆರ್ಮಿ ವೆಲ್​ಫೇರ್ ಎಜುಕೇಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ, 385 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಆನ್​ಲೈನ್/ಆಫ್​ಲೈನ್​​ ಮೋಡ್​​ನಲ್ಲಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ:
ಆನ್​ಲೈನ್​ ಸ್ಕ್ರೀನಿಂಗ್ ಟೆಸ್ಟ್
ಟೀಚಿಂಗ್ ಸ್ಕಿಲ್ಸ್​
ಕಂಪ್ಯೂಟರ್ ಪ್ರೊಫೆಸಿಯೆನ್ಸಿ
ಸಂದರ್ಶನ

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/01/2022
ಆನ್​ಲೈನ್​ನಲ್ಲಿ ಅಡ್ಮಿಟ್​ ಕಾರ್ಡ್ ಲಭ್ಯವಿರುವ ದಿನಾಂಕ: 10/02/2022
ಪರೀಕ್ಷಾ ದಿನಾಂಕ: ಫೆಬ್ರವರಿ 19 & 20
ಫಲಿತಾಂಶ ಪ್ರಕಟ ದಿನಾಂಕ: 28/02/2022
Published by:Latha CG
First published: