ಸೇನೆಯ ಸಶಸ್ತ್ರ ಪಡೆಗಳಲ್ಲಿ ವಿಭಿನ್ನ ಶ್ರೇಣಿಯನ್ನು ಹೊಂದಿರುವ ಅಗ್ನಿವೀರ್‌ಗಳ(Agniveer Jobs) ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ(Recruitment) ಉಂಟಾಗುವ ಖರ್ಚು ವೆಚ್ಚಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಮಾರ್ಪಾಡುಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು(Officials) ತಿಳಿಸಿದ್ದಾರೆ. ಸೇನೆಯಲ್ಲಿರುವ ಯಾವುದೇ ಇತರ ಶ್ರೇಣಿಗಳಿಗಿಂತ ಅಗ್ನಿವೀರ್ ಶ್ರೇಣಿ ಭಿನ್ನವಾಗಿದೆ.
ಆಯ್ಕೆಗೂ ಮುನ್ನ ಮೂರು ಹಂತಗಳು ಅಭ್ಯರ್ಥಿಗಳಿಗೆ ಕಡ್ಡಾಯ
ಸೇನೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ನಾಮನಿರ್ದೇಶಿತ ಕೇಂದ್ರಗಳಲ್ಲಿ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ (CEE) ಒಳಗಾಗಬೇಕಾಗುತ್ತದೆ, ನಂತರ ನೇಮಕಾತಿ ರ‍್ಯಾಲಿಗಳ ಸಮಯದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಗಳು ಮತ್ತು ನಂತರ ವೈದ್ಯಕೀಯ ಪರೀಕ್ಷೆಗಳನ್ನು ಆಯ್ಕೆಗೂ ಮುನ್ನ ನಡೆಸಲಾಗುತ್ತದೆ ಎಂದು ಸೇನೆ ತಿಳಿಸಿದೆ.
ಸೇನೆಯು ಶುಕ್ರವಾರ ನೀಡಿದ ಜಾಹೀರಾತಿನಲ್ಲಿ ಅಗ್ನಿವೀರ್‌ಗಳ ಪಡೆಗೆ ಸೈನಿಕರ ನೇಮಕಾತಿಗಾಗಿ ಮೂರು ಹಂತಗಳನ್ನು ವಿವರಿಸಲಾಗಿದೆ.
ಈ ಹಿಂದೆ ಇದ್ದ ಪ್ರಕ್ರಿಯೆಗಿಂತ ಭಿನ್ನ ನೇಮಕಾತಿ ಪ್ರಕ್ರಿಯೆ
ಈ ಹಿಂದೆ, ಅಗ್ನಿವೀರ್‌ಗಳ ನೇಮಕಾತಿ ಪ್ರಕ್ರಿಯೆಯು ವಿಭಿನ್ನ ಆದೇಶವನ್ನು ಅನುಸರಿಸಿದ್ದು, ಅಭ್ಯರ್ಥಿಗಳು ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು, ನಂತರ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು ಹಾಗೂ ಕೊನೆಯ ಹಂತವಾಗಿ ಸಿಇಇಗೆ ಅರ್ಹತೆ ಪಡೆಯಬೇಕಾಗಿತ್ತು.
ಇದನ್ನೂ ಓದಿ: Job Alert: ಈ ಕಂಪನಿಗಳಲ್ಲಿ ವಾರಕ್ಕೆ ನಾಲ್ಕೇ ದಿನ ಕೆಲಸ- ಬೇಕಿದ್ದರೆ ನೀವೂ ಅಪ್ಲೈ ಮಾಡಿ!
ಈ ಸಮಯದಲ್ಲಿ ಅಭ್ಯರ್ಥಿಗಳ ನಿರ್ವಹಣೆಗೆ ಸಾಕಷ್ಟು ಖರ್ಚುಗಳು ಉಂಟಾಗುತ್ತಿತ್ತು ಹಾಗೂ ಅವರನ್ನು ನಿಯಂತ್ರಿಸುವುದೇ ಸವಾಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ಹೊಸ ನಿಯಮ ಅನ್ವಯ
ಇದುವರೆಗೆ 19,000 ಅಗ್ನಿವೀರ್‌ಗಳು ಸೇನೆಗೆ ಸೇರ್ಪಡೆಗೊಂಡಿದ್ದು, ಮಾರ್ಚ್ ಮೊದಲ ವಾರದಿಂದ 21,000 ಮಂದಿ ಸೇನೆ ಸೇರಲಿದ್ದಾರೆ. 2023-24ರ ಮುಂದಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸೇನೆಗೆ ಸೇರಲು ಸಿದ್ಧವಿರುವ ಸುಮಾರು 40,000 ಅಭ್ಯರ್ಥಿಗಳಿಗೆ ಹೊಸ ನೇಮಕಾತಿ ನಿಯಮಗಳು ಅನ್ವಯಿಸುತ್ತವೆ ಎಂದು ಸೇನಾ ಆಡಳಿತ ಮಂಡಳಿ ಸೂಚಿಸಿದೆ.
ಸೇನೆಗೆ ಸೇರಿರುವ ಅಭ್ಯರ್ಥಿಗಳು
ಹಿಂದಿನ ನೇಮಕಾತಿ ರ‍್ಯಾಲಿಗಳಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ಸಂಖ್ಯೆಯು ಚಿಕ್ಕ ಪಟ್ಟಣಗಳಲ್ಲಿ 5,000 ರಿಂದ ದೊಡ್ಡ ನಗರಗಳಲ್ಲಿ 1.5 ಲಕ್ಷದವರೆಗೆ ಎಂಬುದಾಗಿ ವರದಿಯಾಗಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಸಾವಿರಾರು ಅಭ್ಯರ್ಥಿಗಳು ಪಾಲ್ಗೊಳ್ಳುತ್ತಿದ್ದು ಅವರ ನಿರ್ವಹಣೆಗೆ ಸಾಕಷ್ಟು ಖರ್ಚುವೆಚ್ಚಗಳು ಉಂಟಾಗುತ್ತವೆ. ಈ ಹಿನ್ನಲೆಯಲ್ಲಿ ಆ ವಿನಿಯೋಗಗಳನ್ನು ಗಮನದಲ್ಲಿಟ್ಟುಕೊಂಡು ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ನಡೆಸಲಾಗಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಭ್ಯರ್ಥಿಗಳ ನಿರ್ವಹಣೆ ಇದೀಗ ಸರಳ
ಮುಂಚಿನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಂಡಿದ್ದರ ಪರಿಣಾಮ ಆಡಳಿತಾತ್ಮಕ ಖರ್ಚುವೆಚ್ಚಗಳ ಮೇಲೂ ಇದು ಪ್ರಭಾವ ಬೀರಿತು.
ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿತ್ತು ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸುವ ಒತ್ತಡ ಕೂಡ ಬಿದ್ದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Karnataka: ಜಲ ಸಂಪನ್ಮೂಲ ಇಲಾಖೆಯಲ್ಲಿ 400 ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೊಸ ನೇಮಕಾತಿ ಪ್ರಕ್ರಿಯೆಯು ರ‍್ಯಾಲಿಗಳನ್ನು ಆಯೋಜಿಸುವ ಸಮಯದಲ್ಲಿ ಉಂಟಾಗುವ ಖರ್ಚುವೆಚ್ಚಗಳನ್ನು ಗಣನೀಯವಾಗಿ ತಗ್ಗಿಸುತ್ತದೆ ಮತ್ತು ಆಡಳಿತಾತ್ಮಕ ಮತ್ತು ವ್ಯವಸ್ಥಾಪನಾ ಹೊರೆಯನ್ನು ಸರಾಗಗೊಳಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಅಭ್ಯರ್ಥಿಗಳ ನಿರ್ವಹಣೆ ಕೂಡ ಸುಲಭವಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬುದ್ಧಿವಂತಿಕೆಯ ನಡೆ
ಆಧುನೀಕರಣದ ಉತ್ತೇಜನ ಮತ್ತು ಭವಿಷ್ಯದಲ್ಲಿ ಸೈನ್ಯದಲ್ಲಿ ಸ್ಥಾಪಿತ ತಂತ್ರಜ್ಞಾನಗಳ ಯೋಜಿತ ಸೇರ್ಪಡೆಯೊಂದಿಗೆ, ಸೈನ್ಯದಲ್ಲಿ ಶೈಕ್ಷಣಿಕವಾಗಿ ಉತ್ತಮ ಸೈನಿಕರನ್ನು ಹೊಂದಿರುವುದು ಬುದ್ಧಿವಂತಿಕೆಯ ನಡೆಯಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಸಿಇಇ ಅರ್ಹತೆಯನ್ನು ಮೊದಲ ಸ್ಕ್ರೀನಿಂಗ್ ಹಂತವನ್ನಾಗಿ ಮಾಡುವ ಹೊಸ ಪ್ರಕ್ರಿಯೆಯು ಉತ್ತಮ ಅರ್ಹ ಅಭ್ಯರ್ಥಿಗಳನ್ನು ಖಚಿತಪಡಿಸುತ್ತದೆ, ನಂತರ ಅವರ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ