ನೀವು Freelancing ಮಾಡ್ತಿದಿರಾ? GST ಪಾವತಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ

ಫ್ರೀಲ್ಯಾನ್ಸರ್‌ಗಳಿಗೆ ಬದಲಿ ಸೇವಾ ತೆರಿಗೆಯಾಗಿರುವುದರಿಂದ ಜಿಎಸ್‌ಟಿ ಶುಲ್ಕಗಳು ಒಟ್ಟು ಬಿಲ್ ಮೊತ್ತದ 18% ವಾಗಿರುತ್ತದೆ. ನೀವು ರಚಿಸುವ ಪ್ರತಿಯೊಂದು ಬಿಲ್ ಅಥವಾ ಇನ್‌ವಾಯ್ಸ್ 18% ಜಿಎಸ್‌ಟಿಯನ್ನು ಹೊಂದಿರಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
'ವರ್ಕಿಂಗ್ ಫಾರ್ ಯುವರ್‌ಸೆಲ್ಫ್'(Working For Yourself) ಎಂಬ ಅಂಶವನ್ನೊಳಗೊಂಡಿರುವ ಫ್ರೀಲ್ಯಾನ್ಸಿಂಗ್(Freelancing) ಉದ್ಯೋಗ ಹೆಚ್ಚಿನವರಿಗೆ ವಿಫುಲ ಅವಕಾಶವನ್ನು ಒದಗಿಸಿದೆ. ಸ್ವತಂತ್ರ ಉದ್ಯೋಗಿಗಳು ಎಂಬ ಅರ್ಥದಲ್ಲಿ ಫ್ರೀಲ್ಯಾನ್ಸಿಂಗ್ ನಿಮ್ಮದೇ ಸ್ವಂತ ಕ್ರಿಯಾತ್ಮಕ ಅಂಶಗಳನ್ನು, ಕೌಶಲ್ಯಗಳನ್ನು(Skills) ಬಳಸಿಕೊಂಡು ಆದಾಯ(Income) ಪಡೆದುಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಫ್ರೀಲ್ಯಾನ್ಸಿಂಗ್ ಉದ್ಯೋಗಗಳಿಗೂ ಜಿಎಸ್‌ಟಿ(GST) ಪಾವತಿಸಬೇಕಾಗುತ್ತದೆಯೇ ಎಂಬ ಗೊಂದಲ ನಿಮ್ಮಲ್ಲಿದ್ದರೆ ಈ ಲೇಖನ ಸಹಕಾರಿಯಾಗಲಿದೆ.

ಸರಕಾರವು ಫ್ರೀಲ್ಯಾನ್ಸಿಂಗ್ ಉದ್ಯೋಗಿಯು ಕೂಡ ಜಿಎಸ್‌ಟಿ ಪಾವತಿಸಬೇಕಾದ ಕೆಲವೊಂದು ಸಂದರ್ಭಗಳಿವೆ ಎಂದು ನಿರ್ಧರಿಸಿದ್ದು, ನಿಮ್ಮ ಗ್ರಾಹಕರ (ಕ್ಲೈಂಟ್) ಸ್ಥಳವನ್ನು ಆಧರಿಸಿ IGST, CGST ಅಥವಾ CGST ಪಾವತಿಸಲು ಹೊಣೆಗಾರರಾಗಿರುತ್ತಾರೆ. GST ಯಿಂದ ಫ್ರೀಲ್ಯಾನ್ಸರ್‌ಗಳಿಗೆ ಯಾವುದೇ ವಿನಾಯಿತಿ ದೊರೆಯುವುದಿಲ್ಲ ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ನೀವು ಅಂತರಾಷ್ಟ್ರೀಯ ಕ್ಲೈಂಟ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ನೀವು ಜಿಎಸ್‌ಟಿ ಪಾವತಿಸಲೇಬೇಕಾಗಿದೆ.

ಪ್ರಸ್ತುತ GST ಕಾನೂನುಗಳ ಪ್ರಕಾರ ತೆರಿಗೆಗೆ ಒಳಪಡುವ ಯಾವುದೇ ವ್ಯಕ್ತಿಯು ತೆರಿಗೆಯುಕ್ತ ಸೇವೆಗಳನ್ನು ಒದಗಿಸುವ ರಾಜ್ಯದಿಂದ ನೋಂದಾಯಿಸಿಕೊಳ್ಳಬೇಕು; ಹಣಕಾಸು ವರ್ಷದಲ್ಲಿ ವ್ಯಕ್ತಿ ನಡೆಸುವ ವಹಿವಾಟು ರೂ 20 ಲಕ್ಷಕ್ಕಿಂತ ಹೆಚ್ಚಿದ್ದರೆ (ಈಶಾನ್ಯ ರಾಜ್ಯಗಳಂತಹ ಕೆಲವು ರಾಜ್ಯಗಳಲ್ಲಿ ರೂ 10 ಲಕ್ಷ) ನಿರ್ದಿಷ್ಟಗೊಳಿಸಿದ ಮಿತಿ ಮೀರಿದಲ್ಲಿ ಇದು ಫ್ರೀಲ್ಯಾನ್ಸರ್‌ಗೂ ಅನ್ವಯವಾಗುತ್ತದೆ. ಇತರ ಯಾವುದೇ ಸೇವೆ ಒದಗಿಸುವವರಿಗೆ (ಇದು ಸಾಮಾನ್ಯವಾಗಿ 18%) ಅನ್ವಯವಾಗುವ ಜಿಎಸ್‌ಟಿ ದರವು ಒದಗಿಸುವ ಸೇವೆಗಳನ್ನು ಆಧರಿಸಿ ಫ್ರೀಲ್ಯಾನ್ಸರ್‌ಗಳಿಗೂ ಅನ್ವಯವಾಗುತ್ತದೆ.

ಇದನ್ನೂ ಓದಿ:HDFC Bank Recruitment: 2,500 ಜನರಿಗೆ ಕೆಲಸ ಕೊಡೋಕೆ ಎಚ್​​ಡಿಎಫ್​ಸಿ ಸಜ್ಜು, ಬ್ಯಾಂಕಿಂಗ್​ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್

ಫ್ರೀಲ್ಯಾನ್ಸರ್‌ಗಳಿಗೆ ಬದಲಿ ಸೇವಾ ತೆರಿಗೆಯಾಗಿರುವುದರಿಂದ ಜಿಎಸ್‌ಟಿ ಶುಲ್ಕಗಳು ಒಟ್ಟು ಬಿಲ್ ಮೊತ್ತದ 18% ವಾಗಿರುತ್ತದೆ. ನೀವು ರಚಿಸುವ ಪ್ರತಿಯೊಂದು ಬಿಲ್ ಅಥವಾ ಇನ್‌ವಾಯ್ಸ್ 18% ಜಿಎಸ್‌ಟಿಯನ್ನು ಹೊಂದಿರಬೇಕಾಗುತ್ತದೆ.

ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆ ಏನು?

ಸಂಯೋಜನೆ ಸ್ಕೀಮ್ ಅನ್ನು ಆರಿಸಿದ್ದಲ್ಲಿ ಆದಾಯವನ್ನು ಆಧರಿಸಿ ತ್ರೈಮಾಸಿಕ ಅಥವಾ ಮಾಸಿಕವಾಗಿ ಜಿಎಸ್‌ಟಿ ರಿಟರ್ನ್‌ಗಳನ್ನು ಸಲ್ಲಿಸಬೇಕು. ಸಂಯೋಜನೆ (ಕಾಂಪೊಸಿಶನ್) ಮಾರಾಟಗಾರರು ಅಥವಾ ಡೀಲರ್‌ಗಳ ವಾರ್ಷಿಕ ಮಾರಾಟವು ರೂ 1.5 ಕೋಟಿಗಿಂತ ಕಡಿಮೆ ಇದ್ದಲ್ಲಿ ಅವರು ತ್ರೈಮಾಸಿಕ ರಿಟರ್ನ್‌ಗಳನ್ನು ಸಲ್ಲಿಸಬಹುದು. ನೀವು ಜಿಎಸ್‌ಟಿ ಗುರುತಿನ ಸಂಖ್ಯೆಯನ್ನು ಪಡೆದ ನಂತರ, ಜಿಎಸ್‌ಟಿ ರಿಟರ್ನ್‌ಗಳನ್ನು ಫೈಲ್ ಮಾಡುವುದು ಕಡ್ಡಾಯವಾಗಿದೆ.

ಫ್ರೀಲ್ಯಾನ್ಸರ್‌ಗಳಿಗೆ ಜಿಎಸ್‌ಟಿ ನೋಂದಣಿ ಅಗತ್ಯವೇ?

ನೀವು ಒದಗಿಸುತ್ತಿರುವ ಸೇವೆ ಯಾವುದೇ ಆಗಿರಲಿ, ಈ ಕೆಳಗಿನ ಅಂಶಗಳನ್ನು ಆಧರಿಸಿ ಫ್ರೀಲ್ಯಾನ್ಸರ್‌ಗಳಿಗೆ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದೆ:

ವಾರ್ಷಿಕ ಆದಾಯ 20ಲಕ್ಷಗಳು - ನೋಂದಣಿ ಅಗತ್ಯವಿಲ್ಲ.

-ವಾರ್ಷಿಕ ಆದಾಯ> 20ಲಕ್ಷಗಳು, ಭಾರತದಲ್ಲಿ ಗ್ರಾಹಕರ ಸ್ಥಳವನ್ನು ಪರಿಗಣಿಸದೆಯೇ- ನೋಂದಣಿ ಅಗತ್ಯವಿದೆ

ಜಿಎಸ್‌ಟಿ ಶುಲ್ಕಗಳಿಗೆ ಯಾರು ಪಾವತಿಸುತ್ತಾರೆ?

ನಿಮ್ಮ ಕ್ಲೈಂಟ್‌ಗಳು ನಿಮಗೆ ಪಾವತಿಸುತ್ತಾರೆ ಹಾಗೂ ಪ್ರತಿಯಾಗಿ ನೀವು ಇದನ್ನು ಸರಕಾರಕ್ಕೆ ಪಾವತಿಸುತ್ತೀರಿ. ಪರ್ಯಾಯವಾಗಿ, ಕ್ಲೈಂಟ್‌ಗಳು ತೆರಿಗೆ ಫೈಲ್ ಮಾಡುವಾಗ ಅದನ್ನು ತೆರಿಗೆ ಕ್ರೆಡಿಟ್‌ನಂತೆ ಕ್ಲೈಮ್ ಮಾಡಬಹುದು ಹೀಗೆ ಇದು ಪ್ರತಿಯೊಬ್ಬರಿಗೂ ಸಮಾನ ನ್ಯಾಯವನ್ನು ಒದಗಿಸುತ್ತದೆ. ನಿಮ್ಮ ಕ್ಲೈಂಟ್‌ಗಳು ರಿಯಾಯಿತಿಯನ್ನು ಕೇಳಿದರೂ ಕೂಡ ಜಿಎಸ್‌ಟಿ ಶುಲ್ಕಗಳನ್ನು ನೀವೇ ಪಾವತಿಸಬೇಡಿ ಏಕೆಂದರೆ ನೀವು ಅದನ್ನು ಪಾವತಿಸಿದರೂ ನಿಮ್ಮ ಗ್ರಾಹಕರು (ಕ್ಲೈಂಟ್) ಅದಕ್ಕಾಗಿ ತೆರಿಗೆ ಕ್ರೆಡಿಟ್ ಅನ್ನು ಪಡೆಯುತ್ತಾರೆ.

ಇದನ್ನೂ ಓದಿ:Tips for Getting Jobs: ವಿಪ್ರೋ, ಇನ್ಫೋಸಿಸ್, ಟಾಟಾ ಕಂಪನಿಗಳಲ್ಲಿ ನೇಮಕಾತಿ ಪ್ರಕ್ರಿಯೆ ಹೇಗಿರುತ್ತೆ? ಇಲ್ಲಿದೆ ಮಾಹಿತಿ

ಇನ್‌ಪುಟ್ತೆರಿಗೆ ಕ್ರೆಡಿಟ್ ಕ್ಲೈಮ್ ಮಾಡುವುದು (ಸರಕು ಮತ್ತು ಸೇವೆಗಳ ಖರೀದಿಗೆ ಪಾವತಿಸಿದ ಜಿಎಸ್‌ಟಿ ಕ್ರೆಡಿಟ್​ ಕ್ಲೈಮ್ ಮಾಡುವುದು):

ಇನ್‌ಪುಟ್ ತೆರಿಗೆ ಕ್ರೆಡಿಟ್ (ITC) ಪಡೆಯಲು ಫ್ರೀಲ್ಯಾನ್ಸರ್‌ಗಳು ಇನ್‌ವಾಯ್ಸ್ ಹೊಂದಿರಬೇಕು, ಸರಕು ಅಥವಾ ಸೇವೆಗಳನ್ನು ಸ್ವೀಕರಿಸಿರಬೇಕು ಹಾಗೂ ಸರಬರಾಜುದಾರರ ಮೂಲಕ ವಿಧಿಸಲಾದ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಲಾಗಿದೆಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ವ್ಯಕ್ತಿಯು ತಮ್ಮದೇ ರಿಟರ್ನ್ ಅನ್ನು ಸಲ್ಲಿಸಬೇಕು.

ನಕಲಿ ಇನ್‌ವಾಯ್ಸ್‌ಗಳನ್ನು ಆಧರಿಸಿ ಐಟಿಸಿಯನ್ನು ಪಡೆದುಕೊಳ್ಳುವ ಮೂಲಕ ಬಹಳಷ್ಟು ತೆರಿಗೆ ವಂಚನೆ ಪ್ರಕರಣಗಳು ನಡೆಯುವುದರಿಂದ, ವಿಭಾಗ 16(2)(aa) ಮೂಲಕ ನಿರ್ಬಂಧವನ್ನು ವಿಧಿಸಲಾಗಿದ್ದರೂ ಇದು ಇನ್ನೂ ಪರಿಣಾಮಕಾರಿಯಾಗಿಲ್ಲ. ಈ ವಿಭಾಗವು ಪ್ರಸ್ತುತ ನಿಯಮ 36(4) ಗೆ ಅಧಿಕಾರ ನೀಡುತ್ತದೆ. ಪೂರೈಕೆದಾರರು ಒದಗಿಸಿದ ಇನ್‌ವಾಯ್ಸ್ ವಿವರಗಳು ಸ್ವೀಕರಿಸುವವರ ಫಾರ್ಮ್ GSTR 2A ನಲ್ಲಿ ಕಾಣಿಸಿಕೊಂಡರೆ ಮಾತ್ರ ITC ಗೆ ಅನುಮತಿ ನೀಡುತ್ತದೆ.
Published by:Latha CG
First published: