• Home
  • »
  • News
  • »
  • jobs
  • »
  • Bengaluru Jobs: ಬೆಂಗಳೂರಿನಲ್ಲಿ ಯೋಗ ಹೇಳಿಕೊಡುವ ಕೆಲಸಕ್ಕೆ ₹ 30,000 ಸಂಬಳ, ಈಗಲೇ Apply ಮಾಡಿ

Bengaluru Jobs: ಬೆಂಗಳೂರಿನಲ್ಲಿ ಯೋಗ ಹೇಳಿಕೊಡುವ ಕೆಲಸಕ್ಕೆ ₹ 30,000 ಸಂಬಳ, ಈಗಲೇ Apply ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 30, 2022ಕ್ಕೆ ಮುನ್ನ ಕಳುಹಿಸಬೇಕು.

  • Share this:

    NIMHANS Recruitment 2022: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು(National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಡಿಜಿಟಲ್ ಆರ್ಟಿಸ್ಟ್​(Digital Artist), ಯೋಗ ಥೆರಪಿಸ್ಟ್(Yoga Therapist)​​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 30, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅಪ್ಲೈ(Apply) ಮಾಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನಿಮ್ಹಾನ್ಸ್​
    ಹುದ್ದೆಡಿಜಿಟಲ್ ಆರ್ಟಿಸ್ಟ್​, ಯೋಗ ಥೆರಪಿಸ್ಟ್
    ಒಟ್ಟು ಹುದ್ದೆ2
    ವಿದ್ಯಾರ್ಹತೆಬಿಎಸ್ಸಿ, ಎಂಎಸ್ಸಿ
    ವೇತನಮಾಸಿಕ₹ 30,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ09/11/2022
    ಅರ್ಜಿ ಸಲ್ಲಿಸಲು ಕೊನೆ ದಿನ30/11/2022


    ಹುದ್ದೆಯ ಮಾಹಿತಿ:
    ಯೋಗ ಥೆರಪಿಸ್ಟ್​-1
    ಡಿಜಿಟಲ್ ಆರ್ಟಿಸ್ಟ್​-1


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಯೋಗ ಥೆರಪಿಸ್ಟ್​- ಎಂಎಸ್ಸಿ
    ಡಿಜಿಟಲ್ ಆರ್ಟಿಸ್ಟ್​-ಬಿಎಸ್ಸಿ, ಎಂಎಸ್ಸಿ


    ವಯೋಮಿತಿ:
    ಯೋಗ ಥೆರಪಿಸ್ಟ್​- ಗರಿಷ್ಠ 40 ವರ್ಷ
    ಡಿಜಿಟಲ್ ಆರ್ಟಿಸ್ಟ್​- ಗರಿಷ್ಠ 40 ವರ್ಷ


    ಇದನ್ನೂ ಓದಿ: Government Job: SSLC, ಪಿಯುಸಿ ಪಾಸಾದವರಿಗೆ ಸರ್ಕಾರಿ ನೌಕರಿ, ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ


    ವಯೋಮಿತಿ ಸಡಿಲಿಕೆ:
    ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಸ್ಕಿಲ್ ಟೆಸ್ಟ್
    ಸಂದರ್ಶನ


    ಹುದ್ದೆಯ ಕುರಿತಾದ ಅಧಿಕೃತ ನೋಟಿಫಿಕೇಶನ್ ಇಲ್ಲಿದೆ:


    NIMHANS Notification


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 30, 2022ಕ್ಕೆ ಮುನ್ನ ಕಳುಹಿಸಬೇಕು.


    ನಿರ್ದೇಶಕರು,
    ನಿಮ್ಹಾನ್ಸ್,
    P.B.No.2900,
    D.R. ಕಾಲೇಜು ಅಂಚೆ,
    ಹೊಸೂರು ರಸ್ತೆ,
    ಬೆಂಗಳೂರು-560029


    ಅರ್ಜಿಯ ಸಾಫ್ಟ್​ ಕಾಪಿಯನ್ನು ಇ-ಮೇಲ್ ಐಡಿ csp.nimhans@gmail.com ಗೆ ಕಳುಹಿಸಬಹುದು.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 30/11/2022

    Published by:Latha CG
    First published: