Indian Coast Guard Recruitment 2021: ಭಾರತೀಯ ಕೋಸ್ಟ್ ಗಾರ್ಡ್(Indian Coast Guard ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 322 ಯಾಂತ್ರಿಕ, ನಾವಿಕ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, 12ನೇ ತರಗತಿ ಮತ್ತು ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹುದು. ಜನವರಿ 4ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ joinindiancoastguard.gov.in ಗೆ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಭಾರತೀಯ ಕೋಸ್ಟ್ ಗಾರ್ಡ್ |
ಹುದ್ದೆಯ ಹೆಸರು |
ಯಾಂತ್ರಿಕ, ನಾವಿಕ |
ಒಟ್ಟು ಹುದ್ದೆಗಳು |
322 |
ವಿದ್ಯಾರ್ಹತೆ |
10ನೇ ತರಗತಿ, 12ನೇ ತರಗತಿ ಮತ್ತು ಡಿಪ್ಲೋಮಾ |
ಉದ್ಯೋಗದ ಸ್ಥಳ |
ಚೆನ್ನೈ |
ವೇತನ |
ನಿಯಮಾನುಸಾರ |
ಅರ್ಜಿ ಸಲ್ಲಿಕೆ ವಿಧಾನ |
ಆನ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ |
04/01/2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
14/02/2021 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/02/2021
ಇದನ್ನೂ ಓದಿ: BMRCL Recruitment 2021: ತಿಂಗಳಿಗೆ ₹ 63,490 ಸಂಬಳ, SSLC, ಡಿಪ್ಲೊಮಾ ಪಾಸಾದವರಿಗೆ ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ
ಅರ್ಜಿ ಶುಲ್ಕ:
ಭಾರತೀಯ ಕೋಸ್ಟ್ ಗಾರ್ಡ್ನಲ್ಲಿ ಖಾಲಿ ಇರುವ ಯಾಂತ್ರಿಕ, ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 250 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್ಟಿ/ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆನ್ಲೈನ್ ಮೋಡ್ನಲ್ಲಿ ಶುಲ್ಕ ಕಟ್ಟಬೇಕು.
ಹುದ್ದೆಯ ಮಾಹಿತಿ:
ನಾವಿಕ(ಜನರಲ್ ಡ್ಯೂಟಿ/ಡೊಮೆಸ್ಟಿಕ್ ಬ್ರಾಂಚ್)- 295
ಯಾಂತ್ರಿಕ(ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್)- 27
ಒಟ್ಟು 322 ಹುದ್ದೆಗಳು
ವಿದ್ಯಾರ್ಹತೆ:
ಭಾರತೀಯ ಕೋಸ್ಟ್ ಗಾರ್ಡ್ನಲ್ಲಿ ಖಾಲಿ ಇರುವ ಯಾಂತ್ರಿಕ, ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್/ಶಿಕ್ಷಣ ಸಂಸ್ಥೆಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ ಮತ್ತು ಡಿಪ್ಲೋಮಾ ಪಾಸಾಗಿರಬೇಕು.
ವಯೋಮಿತಿ:
ಭಾರತೀಯ ಕೋಸ್ಟ್ ಗಾರ್ಡ್ನಲ್ಲಿ ಖಾಲಿ ಇರುವ ಯಾಂತ್ರಿಕ, ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-22 ವರ್ಷದೊಳಗಿರಬೇಕು.
ಇದನ್ನೂ ಓದಿ: Government Job: ಪೋಸ್ಟ್ ಆಫೀಸ್ನಲ್ಲಿ ಕೆಲಸ ಖಾಲಿ ಇದೆ, SSLC, PUC ಪಾಸಾದವರು ಇಂದೇ ಅರ್ಜಿ ಸಲ್ಲಿಸಿ
ಉದ್ಯೋಗದ ಸ್ಥಳ:
ಭಾರತೀಯ ಕೋಸ್ಟ್ ಗಾರ್ಡ್ನಲ್ಲಿ ಖಾಲಿ ಇರುವ ಯಾಂತ್ರಿಕ, ನಾವಿಕ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಮಿಳುನಾಡಿನ ಚೆನ್ನೈನಲ್ಲಿ ಉದ್ಯೋಗ ನೀಡಲಾಗುತ್ತದೆ.
ವೇತನ:
ಭಾರತೀಯ ಕೋಸ್ಟ್ ಗಾರ್ಡ್ನಲ್ಲಿ ಖಾಲಿ ಇರುವ ಯಾಂತ್ರಿಕ, ನಾವಿಕ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.
ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ