SSLC, PUC ಪಾಸಾದವರಿಗೆ ಪೋಸ್ಟ್​ ಆಫೀಸ್​​ನಲ್ಲಿ ಬಂಪರ್ ಉದ್ಯೋಗ, ಮಾಸಿಕ ವೇತನ ₹ 81,000

ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​, ಪೋಸ್ಟಲ್​ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ, ಪಿಯುಸಿ ಪೂರ್ಣಗೊಳಿಸಿರಬೇಕು.

ಭಾರತೀಯ ಅಂಚೆ

ಭಾರತೀಯ ಅಂಚೆ

  • Share this:
Postal Circle Recruitment 2021: ಹಿಮಾಚಲ ಪ್ರದೇಶ ಪೋಸ್ಟಲ್ ಸರ್ಕಲ್(Madhya Pradesh Postal Circle) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 18 ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff)​, ಪೋಸ್ಟ್​​ಮ್ಯಾನ್(Postman)​, ಪೋಸ್ಟಲ್​ ಅಸಿಸ್ಟೆಂಟ್(Postal Assistant), ಸಾರ್ಟಿಂಗ್ ಅಸಿಸ್ಟೆಂಟ್(Sorting Assistant) ಹುದ್ದೆಗಳು ಖಾಲಿ ಇದ್ದು, SSLC, PUC ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 25ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್​(ಪೋಸ್ಟಲ್-Offline) ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಿಮಾಚಲ ಪ್ರದೇಶ ಪೋಸ್ಟಲ್ ಸರ್ಕಲ್​ನ ಅಧಿಕೃತ ವೆಬ್​ಸೈಟ್​​ indiapostgdsonline.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಹಿಮಾಚಲ ಪ್ರದೇಶ ಪೋಸ್ಟಲ್ ಸರ್ಕಲ್
ಹುದ್ದೆಯ ಹೆಸರುಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​, ಪೋಸ್ಟಲ್​ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು18
ವಿದ್ಯಾರ್ಹತೆSSLC, PUC
ಉದ್ಯೋಗದ ಸ್ಥಳಹಿಮಾಚಲ ಪ್ರದೇಶ
ವೇತನಮಾಸಿಕ ₹ 18,000-81,000
ಅರ್ಜಿ ಸಲ್ಲಿಕೆ ವಿಧಾನಆಫ್​​​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ25/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15 /12/2021



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 25/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 /12/2021

ಇದನ್ನೂ ಓದಿ: KPSC ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 82,400 ಸಂಬಳ

ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ/ EWS ಅಭ್ಯರ್ಥಿಗಳು- 400 ರೂ.
SC/ST/PWD/ಮಹಿಳಾ ಅಭ್ಯರ್ಥಿಗಳು-100 ರೂ.

ಹುದ್ದೆಯ ಮಾಹಿತಿ:

ಮಲ್ಟಿ ಟಾಸ್ಕಿಂಗ್ ಸ್ಟಾಫ್​- 03
ಪೋಸ್ಟ್​​ಮ್ಯಾನ್​- 02
ಪೋಸ್ಟಲ್​ ಅಸಿಸ್ಟೆಂಟ್/ ಸಾರ್ಟಿಂಗ್ ಅಸಿಸ್ಟೆಂಟ್ -13

ವಿದ್ಯಾರ್ಹತೆ:
ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​, ಪೋಸ್ಟಲ್​ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ, ಪಿಯುಸಿ ಪೂರ್ಣಗೊಳಿಸಿರಬೇಕು.

ಪೋಸ್ಟಲ್​ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ PUC ಪಾಸಾಗಿರಬೇಕು.
ಪೋಸ್ಟ್​ಮ್ಯಾನ್​- ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ PUC ಪಾಸಾಗಿರಬೇಕು.
ಮಲ್ಟಿ ಟಾಸ್ಕಿಂಗ್ ಸ್ಟಾಫ್​- 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:
ಪೋಸ್ಟಲ್​ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್: 18-27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್- 18-25 ವರ್ಷ

ಇದನ್ನೂ ಓದಿ: AIIMS Recruitment 2021: ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, MBBS ಪದವೀಧರರಿಗೆ ಅವಕಾಶ

ಉದ್ಯೋಗದ ಸ್ಥಳ:
ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​, ಪೋಸ್ಟಲ್​ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹಿಮಾಚಲ ಪ್ರದೇಶದಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ - ಮಾಸಿಕ ₹ 25,500-81,100
ಪೋಸ್ಟ್‌ಮ್ಯಾನ್ - ಮಾಸಿಕ ₹ 21,700-69,100
ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ- ಮಾಸಿಕ ₹ 18,000-56,900

ಆಯ್ಕೆ ಪ್ರಕ್ರಿಯೆ:
ಶಾರ್ಟ್​ ಲಿಸ್ಟಿಂಗ್
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

O/o ಚೀಫ್ ಪೋಸ್ಟ್​ಮಾಸ್ಟರ್ ಜನರಲ್
ಹಿಮಾಚಲ ಪ್ರದೇಶ ಸರ್ಕಲ್
ಕಸುಂಪತಿ
ಶಿಮ್ಲಾ​-171009
Published by:Latha CG
First published: