• Home
 • »
 • News
 • »
 • jobs
 • »
 • Job Alert: ಚಿಕ್ಕಬಳ್ಳಾಪುರ ಡಿಸಿ ಆಫೀಸ್​ನಲ್ಲಿ ಪಿಜಿ ಆದವರಿಗೆ ಬಂಪರ್ ಉದ್ಯೋಗ, ತಿಂಗಳಿಗೆ ₹ 48,000 ಸಂಬಳ

Job Alert: ಚಿಕ್ಕಬಳ್ಳಾಪುರ ಡಿಸಿ ಆಫೀಸ್​ನಲ್ಲಿ ಪಿಜಿ ಆದವರಿಗೆ ಬಂಪರ್ ಉದ್ಯೋಗ, ತಿಂಗಳಿಗೆ ₹ 48,000 ಸಂಬಳ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ವಿಪತ್ತು ನಿರ್ವಹಣಾ ಸಲಹೆಗಾರ ಹುದ್ದೆಗೆ ಆಯ್ಕೆಯಾಗುವ ವ್ಯಕ್ತಿಗೆ ಮಾಸಿಕ 48,400 ರೂ. ವೇತನ ನೀಡಲಾಗುತ್ತದೆ

 • Share this:

  Chikkaballapur DC Office Recruitment 2022: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಸಲಹೆಗಾರ(Disaster Management Consultant) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಹುಡುಕುತ್ತಿರುವ ಸ್ಥಳೀಯ ಅಭ್ಯರ್ಥಿಗಳು(Local Candidates) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನವೆಂಬರ್ 28, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಹಾಕಿ.


  ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ
  ಹುದ್ದೆವಿಪತ್ತು ನಿರ್ವಹಣಾ ಸಲಹೆಗಾರ
  ವಿದ್ಯಾರ್ಹತೆಸ್ನಾತಕೋತ್ತರ ಪದವಿ
  ವೇತನಮಾಸಿಕ ₹ 48,400
  ಸ್ಥಳಚಿಕ್ಕಬಳ್ಳಾಪುರ
  ಆಯ್ಕೆ ಪ್ರಕ್ರಿಯೆಲಿಖಿತ ಪರೀಕ್ಷೆ, ಸಂದರ್ಶನ
  ಅರ್ಜಿ ಸಲ್ಲಿಕೆ ಬಗೆಆನ್​ಲೈನ್
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ14/11/2022
  ಅರ್ಜಿ ಸಲ್ಲಿಸಲು ಕೊನೆ ದಿನ28/11/2022


  ಅರ್ಹತಾ ಮಾನದಂಡಗಳೇನು?


  ಶೈಕ್ಷಣಿಕ ಅರ್ಹತೆ:
  ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ವಿಪತ್ತು ನಿರ್ವಹಣಾ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ವಿಜ್ಞಾನ/ಸಮಾಜ ವಿಜ್ಞಾನ/ಗ್ರಾಮೀಣಾಭಿವೃದ್ಧಿ/ಪರಿಸರ ವಿಜ್ಞಾನ/ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.


  ವಯೋಮಿತಿ:
  ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ವಿಪತ್ತು ನಿರ್ವಹಣಾ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ನಿಯಾವಳಿಗಳ ಪ್ರಕಾರ ಇರಬೇಕು.


  ಇದನ್ನೂ ಓದಿ: Government Job: SSLC, ಪಿಯುಸಿ ಪಾಸಾದವರಿಗೆ ಸರ್ಕಾರಿ ನೌಕರಿ, ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ


  ವಯೋಮಿತಿ ಸಡಿಲಿಕೆ:
  ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ವಿಪತ್ತು ನಿರ್ವಹಣಾ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


  ವೇತನ:


  ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ವಿಪತ್ತು ನಿರ್ವಹಣಾ ಸಲಹೆಗಾರ ಹುದ್ದೆಗೆ ಆಯ್ಕೆಯಾಗುವ ವ್ಯಕ್ತಿಗೆ ಮಾಸಿಕ 48,400 ರೂ. ವೇತನ ನೀಡಲಾಗುತ್ತದೆ


  ಹುದ್ದೆ ಕುರಿತಾದ ಅಧಿಕೃತ ನೋಟಿಫಿಕೇಶನ್ ಇಲ್ಲಿದೆ.


  DC-Office-Chikkaballapur-Notification


  ಅರ್ಜಿ ಶುಲ್ಕ
  ಯಾವುದೇ ಅರ್ಜಿ ಶುಲ್ಕ ಇಲ್ಲ


  ಆಯ್ಕೆ ಪ್ರಕ್ರಿಯೆ:
  ಲಿಖಿತ ಪರೀಕ್ಷೆ
  ಸಂದರ್ಶನ


  ಅರ್ಜಿ ಸಲ್ಲಿಸುವುದು ಹೇಗೆ?


  ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/11/2022
  ಅರ್ಜಿ ಸಲ್ಲಿಸಲು ಕೊನೆ ದಿನ: 28/11/2022


  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08156-277001 ಗೆ ಕರೆ ಮಾಡಿ.

  Published by:Latha CG
  First published: