Job Alert: ಪಂಚಾಯತ್ ರಾಜ್ ಇಲಾಖೆಯಲ್ಲಿ ಒಂಬುಡ್ಸ್‌ಮನ್ ಹುದ್ದೆ ಖಾಲಿ- ಹೀಗೆ ಅರ್ಜಿ ಸಲ್ಲಿಸಿ

Job Alert: ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿಗಳನ್ನು rdpr.karnataka.gov.in ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಸಹಿತ ಸಲ್ಲಿಕೆ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು (Rural Development Commission) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (Department of rural and panchayat raj) ಒಂಬುಡ್ಸ್‌ಮನ್ (Ombudsman) ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದ್ದು, ಅರ್ಜಿಗಳನ್ನು(Application) ಆಹ್ವಾನಿಸಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಶಿವಮೊಗ್ಗ, ಚಿತ್ರದುರ್ಗ, ಬೀದರ್, ಹಾಸನ, ಕೊಡಗು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಂಬುಡ್ಸ್‌ಮನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆಇಲಾಖೆಗ್ರಾಮೀಣಾಭಿವೃದ್ಧಿ ಆಯುಕ್ತಾಲಯ
ಹುದ್ದೆಒಂಬುಡ್ಸ್‌ಮನ್
ಎಲ್ಲೆಲ್ಲಿ ಹುದ್ದೆಗಳು ಖಾಲಿಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಶಿವಮೊಗ್ಗ, ಚಿತ್ರದುರ್ಗ, ಬೀದರ್, ಹಾಸನ, ಕೊಡಗು, ಕೊಪ್ಪಳ ಮತ್ತು ವಿಜಯನಗರ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ14 -01-2022
ಅರ್ಜಿ ಅಲ್ಲಿಸುವ ವಿಧಾನಆನ್​ಲೈನ್​​ ಮತ್ತು ಆಫ್​​ಲೈನ್​
ಅರ್ಜಿ ಸಲ್ಲಿಸುವ ಲಿಂಕ್ https://rdpr.karnataka.gov.in/

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -14 -01-2022

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿಗಳನ್ನು rdpr.karnataka.gov.in ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಸಹಿತ ಸಲ್ಲಿಕೆ ಮಾಡಬಹುದು.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ, ಮಾಸಿಕ ವೇತನ ₹ 45,000

ಅರ್ಜಿ ಕಳುಹಿಸುವ ವಿಳಾಸ;

ಆಯುಕ್ತರು ಗ್ರಾಮೀಣಾಭಿವೃದ್ದಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 5ನೇ ಮಹಡಿ, ಪ್ಲಾಟ್ ನಂಬರ್ 1234, ಕೆ. ಎಸ್. ಐ. ಐ. ಡಿ. ಸಿ. ಕಟ್ಟಡ, ಐಟಿ ಪಾರ್ಕ್, ಸೌತ್ ಬ್ಲಾಕ್, ರಾಜಾಜಿನಗರ ಇಂಡಸ್ಟ್ರಿಯಯಲ್ ಎಸ್ಟೇಟ್, ಬೆಂಗಳೂರು 560044.

ಕೆಲಸ ಹುಡುಕುತ್ತಿದ್ದೀರಾ? ಎಲ್ಲಾ ಬಗೆಯ ಕೆಲಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ 

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ  ಸಹಾಯಕ ನಿರ್ದೇಶಕರು (ಆಡಳಿತ), ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.

ದೂರವಾಣಿ ಸಂಖ್ಯೆ 080-22342163.
Published by:Sandhya M
First published: