Indian Railway: ಆಗ್ನೇಯ ಮಧ್ಯೆ ರೈಲ್ವೆ ಇಲಾಖೆಯಲ್ಲಿ 1044 ಹುದ್ದೆಗೆ ಅರ್ಜಿ ಆಹ್ವಾನ - ಬೇಗ ಅಪ್ಲೈ ಮಾಡಿ

Job News: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

1044 ಹುದ್ದೆಗೆ ಅರ್ಜಿ ಹಾಕಿ

1044 ಹುದ್ದೆಗೆ ಅರ್ಜಿ ಹಾಕಿ

  • Share this:
South East Central Railway Recruitment 2022: ಆಗ್ನೇಯ ಮಧ್ಯೆ ರೈಲ್ವೆ (South East Central Railway) ಖಾಲಿ ಇರುವ ಅಪ್ರೆಂಟಿಸ್ (Apprentice) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು. ಒಟ್ಟು 1044 ಅಪ್ರೆಂಟಿಸ್ ಪೋಸ್ಟ್ಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಅರ್ಜಿ ಸಲ್ಲಿಸಲು ಜೂನ್ 03 ಕೊನೆಯ ದಿನವಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕುವ ಮುನ್ನ ಶಿಕ್ಷಣ ಅರ್ಹತೆ, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಹೆಚ್ಚಿನ ಮಾಹಿತಿ ತಿಳಿದಿರುವುದು ಸಹಾಯ ಮಾಡುತ್ತದೆ.ಹಾಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.











































ಇಲಾಖೆಆಗ್ನೇಯ ಮಧ್ಯೆ ರೈಲ್ವೆ (ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆ)
ಹುದ್ದೆಅಪ್ರೆಂಟಿಸ್
ಒಟ್ಟು ಹುದ್ದೆ1044
ಸ್ಟೈಫಂಡ್​ನಿಯಮ ಪ್ರಕಾರ
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 03-06-2022 ರಾತ್ರಿ 11-59 ರವರೆಗೆ.
ವಯೋಮಿತಿಕನಿಷ್ಠ 15 ವರ್ಷ  ಹಾಗೂ ಗರಿಷ್ಠ 24 ವರ್ಷ
ಶೈಕ್ಷಣಿಕ ಅರ್ಹತೆಎಸ್‌ಎಸ್‌ಎಲ್‌ಸಿ
ಹುದ್ದೆಯ ವಿವರನಾಗ್ಪುರ್ ಡಿವಿಷನ್ : 980
ವರ್ಕ್‌ಶಾಪ್‌ ಮೊತಿಭಾಗ್ : 64
ವೆಬ್​ಸೈಟ್​ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಹಾಕುವ ಲಿಂಕ್​ಇಲ್ಲಿ ನೇರವಾಗಿ ಅರ್ಜಿ ಹಾಕಿ

ಭಾರತದಾದ್ಯಂತ ಖಾಲಿ ಇರುವ 1044 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಆಗ್ನೇಯ ಮಧ್ಯೆ ರೈಲ್ವೆ ಇಲಾಖೆ ಅರ್ಜಿ ಆಹ್ವಾನಿಸಿದ್ದು, ಎಸ್ಎಸ್ಎಲ್ಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಅರ್ಜಿ ಹಾಕಲು ಜೂನ್ 3ರ ತನಕ ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸ್ಟೈಫಂಡ್ ನೀಡಲಾಗುತ್ತದೆ.

ಇಲಾಖೆ: ಆಗ್ನೇಯ ಮಧ್ಯೆ ರೈಲ್ವೆ (ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆ)
ಹುದ್ದೆ: ಅಪ್ರೆಂಟಿಸ್
ಒಟ್ಟು ಹುದ್ದೆ: 1044
ಸ್ಟೈಫಂಡ್: ನಿಯಮಗಳ ಪ್ರಕಾರ

ಪ್ರಮುಖ ದಿನಾಂಕಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ: 04-05-2022
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 03-06-2022 ರಾತ್ರಿ 11-59 ರವರೆಗೆ.

ವಯೋಮಿತಿ ವಿವರಗಳು
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ
ಈ ಹುದ್ದೆಗೆ ಭಾರತೀಯ ರೈಲ್ವೆ ಇಲಾಖೆ ನಿಯಮಗಳ ಪ್ರಕಾರ ವರ್ಗಾವಾರು ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ
ಅಭ್ಯರ್ಥಿಗಳು ಕೇಂದ್ರ , ರಾಜ್ಯ ಸರ್ಕಾರದ ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ಎಸ್ಎಸ್ಎಲ್ಸಿ ಪಾಸಾಗಿರಬೇಕು. ಜತೆಗೆ ಐಟಿಐ ಅನ್ನು ಸಂಬಂಧಿತ ಟ್ರೇಡ್ನಲ್ಲಿ ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ
ನಾಗ್ಪುರ್ ಡಿವಿಷನ್ : 980
ವರ್ಕ್ಶಾಪ್ ಮೊತಿಭಾಗ್ : 64

ಇದನ್ನೂ ಓದಿ: ಪದವಿ ಆಗಿದಿಯಾ? ಹಾಗಾದ್ರೆ 15 ಟ್ರೈನಿಂಗ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ

ಸೂಚನೆ:
ಐಟಿಐ ಟ್ರೇಡ್ ಗಳಾದ ಫಿಟ್ಟರ್, ಪೇಂಟರ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಇಲೆಕ್ಟ್ರೀಷಿಯನ್, ಟ್ರೇಡ್ಸ್ಮನ್, ವೆಲ್ಡರ್ ಅನುಭವವಿರುವವರು ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಪ್ರೆಂಟಿಸ್ ಇಂಡಿಯಾ ಅಧಿಕೃತ ವೆಬ್ಸೈಟ್ https://www.apprenticeshipindia.gov.in/ ನಲ್ಲಿ ಅಥವಾ ನಾವು ನೀಡುವ ನೇರ ಲಿಂಕ್​ ಮೂಲಕ ಸಹ ಅರ್ಜಿ ಹಾಕಬಹುದಾಗಿದೆ.

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ : https://secr.indianrailways.gov.in/

ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
Published by:Sandhya M
First published: