• Home
  • »
  • News
  • »
  • jobs
  • »
  • BELನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 55,000 ಸಂಬಳ- ಎಂಜಿನಿಯರಿಂಗ್ ಆಗಿದ್ರೆ ಅರ್ಜಿ ಹಾಕಿ

BELನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 55,000 ಸಂಬಳ- ಎಂಜಿನಿಯರಿಂಗ್ ಆಗಿದ್ರೆ ಅರ್ಜಿ ಹಾಕಿ

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

ನವೆಂಬರ್ 16 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

  • Share this:

    BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Electronics Limited -BEL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಇಎಲ್​ನಲ್ಲಿ(BEL) ಒಟ್ಟು 25 ಟ್ರೈನಿ ಎಂಜಿನಿಯರ್(Trainee Engineer), ಪ್ರಾಜೆಕ್ಟ್​ ಎಂಜಿನಿಯರ್(Project Engineer) ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಬಿಇ/ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 16 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 29 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಬಿಇಎಲ್(BEL)​ನ ಅಧಿಕೃತ ವೆಬ್​ಸೈಟ್​bel-india.inಗೆ ಭೇಟಿ ನೀಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
    ಹುದ್ದೆಯ ಹೆಸರುಪ್ರಾಜೆಕ್ಟ್​ ಎಂಜಿನಿಯರ್, ಟ್ರೈನಿ ಎಂಜಿನಿಯರ್
    ಒಟ್ಟು ಹುದ್ದೆ25
    ವಿದ್ಯಾರ್ಹತೆಬಿಇ/ ಬಿ.ಟೆಕ್
    ವೇತನಮಾಸಿಕ ₹ 30,000-55,000
    ಸ್ಥಳಪ್ಯಾನ್ ಇಂಡಿಯಾ
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ16/11/2022
    ಅರ್ಜಿ ಸಲ್ಲಿಸಲು ಕೊನೆ ದಿನ29/11/2022


    ಹುದ್ದೆಯ ಮಾಹಿತಿ:
    ಪ್ರಾಜೆಕ್ಟ್​ ಎಂಜಿನಿಯರ್-I: 15 ಹುದ್ದೆಗಳು
    ಟ್ರೈನಿ ಎಂಜಿನಿಯರ್-I: 10 ಹುದ್ದೆಗಳು


    ವಿದ್ಯಾರ್ಹತೆ:
    ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಟ್ರೈನಿ ಎಂಜಿನಿಯರ್, ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್/ E & T/ ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ಬಿಇ/ ಬಿ.ಟೆಕ್ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಪ್ರಾಜೆಕ್ಟ್​ ಎಂಜಿನಿಯರ್-I: 32 ವರ್ಷ
    ಟ್ರೈನಿ ಎಂಜಿನಿಯರ್-I: 28 ವರ್ಷ


    ಇದನ್ನೂ ಓದಿ: KMF Recruitment 2022: ಕೆಎಂಎಫ್​ನಲ್ಲಿರುವ 487 ಹುದ್ದೆಗಳಿಗೆ ಇಲ್ಲಿ ಅರ್ಜಿ ಹಾಕಿ, ನಾಳೆಯೇ ಕೊನೆ ದಿನ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು- 3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD ಅಭ್ಯರ್ಥಿಗಳು- 10 ವರ್ಷ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/ PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ-
    ಟ್ರೈನಿ ಎಂಜಿನಿಯರ್-150 ರೂ.
    ಪ್ರಾಜೆಕ್ಟ್​ ಎಂಜಿನಿಯರ್- 400 ರೂ.
    ಪಾವತಿಸುವ ಬಗೆ- SBI ಕಲೆಕ್ಟ್​


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ

    ಹುದ್ದೆಯ ಕುರಿತಾದ ನೋಟಿಫಿಕೇಶನ್ PDF ಇಲ್ಲಿದೆ.


    BEL Notification


    ವೇತನ:
    ಟ್ರೈನಿ ಎಂಜಿನಿಯರ್-ಮಾಸಿಕ ₹ 30,000-40,000
    ಪ್ರಾಜೆಕ್ಟ್​ ಎಂಜಿನಿಯರ್- ಮಾಸಿಕ ₹ 40,000-55,000


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 29ಕ್ಕೆ ಮುನ್ನ ಕಳುಹಿಸಬೇಕು.


    ಉಪ ವ್ಯವಸ್ಥಾಪಕರು (HR/ಮಿಲಿಟರಿ ಕಮ್ಯುನಿಕೇಷನ್ಸ್ SBU),
    ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್,
    ಜಾಲಹಳ್ಳಿ ಪೋಸ್ಟ್,
    ಬೆಂಗಳೂರು- 560013


    ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಯ ಅಪ್ಲಿಕೇಶನ್ ಫಾರಂ ಇಲ್ಲಿದೆ


    Project-Engineer-Posts-Application-Form-BEL


    ಟ್ರೈನಿ ಎಂಜಿನಿಯರ್ ಹುದ್ದೆಯ ಅಪ್ಲಿಕೇಶನ್ ಫಾರಂ ಇಲ್ಲಿದೆ


    Trainee-Engineer-Posts-Application-Form-BEL


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 29/11/2022

    Published by:Latha CG
    First published: