• Home
  • »
  • News
  • »
  • jobs
  • »
  • LIC ನೇಮಕಾತಿ- ಇನ್ಶುರೆನ್ಸ್​ ಕನ್ಸಲ್ಟೆಂಟ್ ಹುದ್ದೆಗಳಿಗೆ ಇಲ್ಲಿ ಅರ್ಜಿ ಹಾಕಿ

LIC ನೇಮಕಾತಿ- ಇನ್ಶುರೆನ್ಸ್​ ಕನ್ಸಲ್ಟೆಂಟ್ ಹುದ್ದೆಗಳಿಗೆ ಇಲ್ಲಿ ಅರ್ಜಿ ಹಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನವೆಂಬರ್ 12, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

  • Share this:

    LIC Recruitment 2022: ಭಾರತೀಯ ಜೀವ ವಿಮಾ ನಿಗಮ(Life Insurance Corporation)ದಲ್ಲಿ 75 ಇನ್ಶುರೆನ್ಸ್​ ಕನ್ಸಲ್ಟೆಂಟ್/ ಅಡ್ವೈಸರ್(Insurance Consultant) ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನವೆಂಬರ್ 12, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ಜೀವ ವಿಮಾ ನಿಗಮ
    ಹುದ್ದೆಯ ಹೆಸರುಇನ್ಶುರೆನ್ಸ್​ ಕನ್ಸಲ್ಟೆಂಟ್/ ಅಡ್ವೈಸರ್
    ಒಟ್ಟು ಹುದ್ದೆ75
    ವಿದ್ಯಾರ್ಹತೆ10ನೇ ತರಗತಿ, ಪಿಯುಸಿ, ಪದವಿ
    ವೇತನನಿಯಮಾನುಸಾರ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ03/11/2022
    ಅರ್ಜಿ ಸಲ್ಲಿಸಲು ಕೊನೆ ದಿನ12/11/2022


    ಹುದ್ದೆಯ ಮಾಹಿತಿ:
    ಇನ್ಶುರೆನ್ಸ್​ ಕನ್ಸಲ್ಟೆಂಟ್/ ಅಡ್ವೈಸರ್- 75 ಹುದ್ದೆಗಳು


    ಇದನ್ನೂ ಓದಿ: JOBS: ಅಮೇಜಾನ್​ನಲ್ಲಿ ಪರ್ಮನೆಂಟ್ ವರ್ಕ್​ ಫ್ರಂ ಹೋಂ, ಸಂಬಳ 45 ಸಾವಿರ-ಈಗಲೇ ಅರ್ಜಿ ಸಲ್ಲಿಸಿ


    ವಿದ್ಯಾರ್ಹತೆ:
    ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಪಿಯಸಿ ಹಾಗೂ ಪದವಿ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 60 ವರ್ಷ ಮೀರಿರಬಾರದು.


    ವೇತನ:
    ಇನ್ಶುರೆನ್ಸ್​ ಕನ್ಸಲ್ಟೆಂಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ. ಜೊತೆಗೆ ಮೆಡಿಕಲ್ ಬೆನಿಫಿಟ್ಸ್ ಕೂಡ ಲಭ್ಯವಿರುತ್ತದೆ.


    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

    ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗುವಾಗ ಎಲ್ಲಾ ಅಗತ್ಯ ದಾಖಲೆಗಳ ಮೂಲ ಪ್ರತಿಗಳನ್ನು ಸಲ್ಲಿಸಬೇಕು.


    ಇದನ್ನೂ ಓದಿ: JOB ALERT: ಬಾಗಲಕೋಟೆ ನಿರುದ್ಯೋಗಿಗಳಿಗೆ ಬಂಪರ್ ಉದ್ಯೋಗ, SSLC ಪಾಸಾಗಿದ್ರೆ ಈ ಕೆಲಸಕ್ಕೆ ಅರ್ಜಿ ಹಾಕಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 12/11/2022

    Published by:Latha CG
    First published: