HAL India Recruitment 2022: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಸೆಕ್ಯುರಿಟಿ ಆಫೀಸರ್, ಆಫೀಸರ್ (Security Officer, Officer) ಪೋಸ್ಟ್ಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು, ನಾಸಿಕ್, ಕೋರಾಪುಟ್ , ಕಾಸರಗೋಡಿನಲ್ಲಿ ಕೆಲಸ ಮಾಡಲು ಸಿದ್ದರಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 24-05-2022 ರ ಮೊದಲು ಆಫ್ಲೈನ್ನಲ್ಲಿ ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು |
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL ಇಂಡಿಯಾ) |
ಹುದ್ದೆಗಳ ಸಂಖ್ಯೆ |
10 |
ಉದ್ಯೋಗ ಸ್ಥಳ |
ಬೆಂಗಳೂರು - ನಾಸಿಕ್ - ಕೋರಾಪುಟ್ - ಕಾಸರಗೋಡು |
ಹುದ್ದೆಯ ಹೆಸರು |
ಭದ್ರತಾ ಅಧಿಕಾರಿ, ಅಧಿಕಾರಿ |
ವೇತನ |
ರೂ.40000-140000/- ಪ್ರತಿ ತಿಂಗಳು |
ಹುದ್ದೆಯ ವಿವರ |
ಭದ್ರತಾ ಅಧಿಕಾರಿ 6
ಅಧಿಕಾರಿ 4 |
ಶೈಕ್ಷಣಿಕ ಅರ್ಹತೆ |
ಸ್ನಾತಕೋತ್ತರ ಪದವಿ |
ವಯೋಮಿತಿ |
35 ವರ್ಷಗಳು |
ಅರ್ಜಿ ಕಳುಹಿಸುವ ವಿಳಾಸ |
ವ್ಯವಸ್ಥಾಪಕರು (HR), ನೇಮಕಾತಿ ವಿಭಾಗ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಾರ್ಪೊರೇಟ್ ಕಚೇರಿ 15/1 ಕಬ್ಬನ್ ರಸ್ತೆ, ಬೆಂಗಳೂರು - 560001 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
24-05-2022 |
ಬೆಂಗಳೂರು, ನಾಸಿಕ್, ಕೋರಾಪುಟ್, ಕಾಸರಗೋಡಿನಲ್ಲಿ ಖಾಲಿ ಇರುವ 10 ಭದ್ರತಾ ಅಧಿಕಾರಿ, ಅಧಿಕಾರಿ ಹುದ್ದೆಗಳ ಭರ್ತಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 35 ವರ್ಷ ಒಳಗಿನ ಅಭ್ಯರ್ಥಿಗಳು ಮೇ 24ರ ಒಳಗೆ ಆಫ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.40000-140000/- ವೇತನ ನೀಡಲಾಗುತ್ತದೆ.
ಸಂಸ್ಥೆಯ ಹೆಸರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL ಇಂಡಿಯಾ)
ಹುದ್ದೆಗಳ ಸಂಖ್ಯೆ: 10
ಉದ್ಯೋಗ ಸ್ಥಳ: ಬೆಂಗಳೂರು - ನಾಸಿಕ್ - ಕೋರಾಪುಟ್ - ಕಾಸರಗೋಡು
ಹುದ್ದೆಯ ಹೆಸರು: ಭದ್ರತಾ ಅಧಿಕಾರಿ, ಅಧಿಕಾರಿ
ವೇತನ: ರೂ.40000-140000/- ಪ್ರತಿ ತಿಂಗಳು
ಹುದ್ದೆಯ ವಿವರ
ಭದ್ರತಾ ಅಧಿಕಾರಿ 6
ಅಧಿಕಾರಿ 4
ವಿದ್ಯಾರ್ಹತೆಯ ವಿವರಗಳು
ಭದ್ರತಾ ಅಧಿಕಾರಿ: HAL ಇಂಡಿಯಾ ನೇಮಕಾತಿ ನಿಯಮಗಳ ಪ್ರಕಾರ
ಅಧಿಕಾರಿ: ಸ್ನಾತಕೋತ್ತರ ಪದವಿ
ವಯಸ್ಸಿನ ಮಿತಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 24-05-2022 ರಂತೆ 35 ವರ್ಷಗಳು.
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು: 05 ವರ್ಷಗಳು
OBC (NCL) ಅಭ್ಯರ್ಥಿಗಳು: 03 ವರ್ಷಗಳು
PwBD ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ
SC/ST/PwBD ಅಭ್ಯರ್ಥಿ: ಶುಲ್ಕವಿಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.500/-
ಪಾವತಿ ವಿಧಾನ: ಚಲನ್
ಆಯ್ಕೆ ಪ್ರಕ್ರಿಯೆ
ಅರ್ಹತೆ, ಅನುಭವ ಮತ್ತು ಸಂದರ್ಶನ
ಇದನ್ನೂ ಓದಿ: ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಹಾಕಿ - ತಿಂಗಳಿಗೆ 42 ಸಾವಿರ ಸಂಬಳ
ವೆಬ್ಸೈಟ್:
hal-india.co.in
ಅರ್ಜಿ ಹಾಕುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮುಖ್ಯ ವ್ಯವಸ್ಥಾಪಕರು (HR), ನೇಮಕಾತಿ ವಿಭಾಗ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಾರ್ಪೊರೇಟ್ ಕಚೇರಿ 15/1 ಕಬ್ಬನ್ ರಸ್ತೆ, ಬೆಂಗಳೂರು - 560001 ಗೆ ಕಳುಹಿಸಬೇಕಾಗುತ್ತದೆ.
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 04-05-2022
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-05-2022
ಬೇರೆ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಕಳುಹಿಸುವ ವಿಳಾಸ
ಮುಖ್ಯ ವ್ಯವಸ್ಥಾಪಕರು (HR), ನೇಮಕಾತಿ ವಿಭಾಗ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಕಾರ್ಪೊರೇಟ್ ಕಚೇರಿ 15/1 ಕಬ್ಬನ್ ರಸ್ತೆ
ಬೆಂಗಳೂರು - 560001
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ