• Home
  • »
  • News
  • »
  • jobs
  • »
  • Work From Home ಬೇಕು ಅನ್ನೋರು ಇಲ್ಲಿ ಅರ್ಜಿ ಸಲ್ಲಿಸಿ, Flipkart ನೀಡ್ತಿದೆ ಬಂಪರ್ ಉದ್ಯೋಗ

Work From Home ಬೇಕು ಅನ್ನೋರು ಇಲ್ಲಿ ಅರ್ಜಿ ಸಲ್ಲಿಸಿ, Flipkart ನೀಡ್ತಿದೆ ಬಂಪರ್ ಉದ್ಯೋಗ

ಫ್ಲಿಪ್​ಕಾರ್ಟ್​

ಫ್ಲಿಪ್​ಕಾರ್ಟ್​

Flipkart is Hiring: ಕಾಪಿ ರೈಟರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.

  • Share this:

    Flipkart Recruitment 2022: ವರ್ಕ್​ ಫ್ರಂ ಹೋಂ (Work From Home) ಮಾಡ ಬಯಸುವ ಉದ್ಯೋಗಿಗಳಿಗೆ ಫ್ಲಿಪ್​ ​ಕಾರ್ಟ್ ಪ್ರೈವೇಟ್ ಲಿಮಿಟೆಡ್​​​​ ಕಂಪನಿ ಒಂದು ಶುಭಸುದ್ದಿ ನೀಡುತ್ತಿದೆ. ಯಾರು ಮನೆಯಿಂದ ಕೆಲಸ ಮಾಡಲು ಇಚ್ಛಿಸುವರೋ ಅವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಪರ್ಮನೆಂಟ್(Permanent) ವರ್ಕ್​ ಫ್ರಂ ಹೋಂ ಆಫರ್​ನ್ನು ಫ್ಲಿಪ್ ​ಕಾರ್ಟ್​​ ಉದ್ಯೋಗಿಗಳಿಗೆ ನೀಡುತ್ತಿದೆ. ಕಂಪನಿಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಫ್ಲಿಪ್​ ಕಾರ್ಟ್ ಪ್ರೈವೇಟ್​ ಲಿಮಿಟೆಡ್​​ ಭಾರತದ ಇ-ಕಾಮರ್ಸ್ ಕಂಪನಿಯಾಗಿದೆ. ಇದರ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಫ್ಲಿಪ್ ಕಾರ್ಟ್​ ಫ್ರೈವೇಟ್ ಲಿಮಿಟೆಡ್
    ಹುದ್ದೆಕಾಪಿ ರೈಟರ್, ಅಸಿಸ್ಟೆಂಟ್ ಮ್ಯಾನೇಜರ್
    ಒಟ್ಟು ಹುದ್ದೆ800
    ಸ್ಥಳವರ್ಕ್​ ಫ್ರಂ ಹೋಂ
    ವೇತನವಾರ್ಷಿಕ ಪ್ಯಾಕೇಜ್ 3.45 ಲಕ್ಷ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ06/11/2022
    ಅರ್ಜಿ ಸಲ್ಲಿಸಲು ಕೊನೆ ದಿನ15/12/202


    ಒಟ್ಟು ಹುದ್ದೆ- 800


    ಹುದ್ದೆಯ ಹೆಸರು & ವಿಭಾಗ
    ಕಾಪಿ ರೈಟರ್- ವರ್ಕ್ ಫ್ರಂ ಹೋಂ
    ಅಸಿಸ್ಟೆಂಟ್ ಮ್ಯಾನೇಜರ್-ನೋಯ್ಡಾ ಉತ್ತರ ಪ್ರದೇಶ


    ಇದನ್ನೂ ಓದಿ: JOBS: ಅಮೇಜಾನ್​ನಲ್ಲಿ ಪರ್ಮನೆಂಟ್ ವರ್ಕ್​ ಫ್ರಂ ಹೋಂ, ಸಂಬಳ 45 ಸಾವಿರ-ಈಗಲೇ ಅರ್ಜಿ ಸಲ್ಲಿಸಿ


    ಅರ್ಹತಾ ಮಾನದಂಡಗಳೇನು?


    ವಯೋಮಿತಿ:
    ಕಾಪಿ ರೈಟರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ದಾಟಿರಬೇಕು.


    ವಿದ್ಯಾರ್ಹತೆ:
    ಕಾಪಿ ರೈಟರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.


    ವೇತನ: ವಾರ್ಷಿಕ ಪ್ಯಾಕೇಜ್-3.45 ಲಕ್ಷ


    ಸ್ಥಳ: ವರ್ಕ್​ ಫ್ರಂ ಹೋಮ್


    ಉದ್ಯೋಗದ ವಿಧ: ಫುಲ್ ಟೈಂ ಪರ್ಮನೆಂಟ್ ಜಾಬ್


    ಅನುಭವ: ಫ್ರೆಶರ್ಸ್​ ಕೂಡ ಅಪ್ಲೈ ಮಾಡಬಹುದು.


    ಆಯ್ಕೆ ಪ್ರಕ್ರಿಯೆ:
    ಸಂದರ್ಶನ
    ದಾಖಲಾತಿ ಪರಿಶೀಲನೆ


    ಅರ್ಜಿ ಶುಲ್ಕ:
    ಜನರಲ್/ಒಬಿಸಿ/EWS- ಅರ್ಜಿ ಶುಲ್ಕ ಇಲ್ಲ
    ಎಸ್​ಸಿ/ಎಸ್​ಟಿ/PH- ಅರ್ಜಿ ಶುಲ್ಕ ಇಲ್ಲ


    ಇದನ್ನೂ ಓದಿ: KEA Jobs: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 21 ಹುದ್ದೆಗಳು ಖಾಲಿ, 1.50 ಲಕ್ಷ ಸಂಬಳ-ಇಂದೇ ಅರ್ಜಿ ಸಲ್ಲಿಸಿ


    ಅರ್ಜಿ ಸಲ್ಲಿಸುವುದು ಹೇಗೆ?
    ಅರ್ಹ ಅಭ್ಯರ್ಥಿಗಳು ಫ್ಲಿಪ್​ ಕಾರ್ಟ್ ನೇಮಕಾತಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಹಾಕಬೇಕು. ಅಧಿಕೃತ ಅಧಿಸೂಚನೆಯಲ್ಲಿ ಮೊದಲು ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಯಶಸ್ವಿಯಾಗಿ ಸಲ್ಲಿಸಿದ ನಂತರ ದಯವಿಟ್ಟು ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ.


    ಕಾಪಿ ರೈಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 15/12/2022

    Published by:Latha CG
    First published: