• Home
 • »
 • News
 • »
 • jobs
 • »
 • Capgemini ಕಂಪನಿಯಲ್ಲಿ ಕೆಲಸ ಮಾಡುವ ಕನಸಿದೆಯಾ? ಇಲ್ಲಿ ಅರ್ಜಿ ಸಲ್ಲಿಸಿ

Capgemini ಕಂಪನಿಯಲ್ಲಿ ಕೆಲಸ ಮಾಡುವ ಕನಸಿದೆಯಾ? ಇಲ್ಲಿ ಅರ್ಜಿ ಸಲ್ಲಿಸಿ

ಕ್ಯಾಪ್​ಜೆಮಿನಿ

ಕ್ಯಾಪ್​ಜೆಮಿನಿ

18 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳು ಈ ಕಾಂಟ್ಯಾಕ್ಟ್​ ಸಪೋರ್ಟ್​ ಗ್ರೂಪ್ ಹುದ್ದೆಗಳಿಗೆ ಅರ್ಜಿ ಹಾಕಬಹುದು.

 • Share this:

  Capgemini Recruitment 2022: ಸಾಫ್ಟ್​ವೇರ್​ ಕಂಪನಿಯಾದ ಕ್ಯಾಪ್ಜೆಮಿನಿ(Capgemini ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು. ಒಟ್ಟು 600 ಕ್ಕೂ ಹೆಚ್ಚು ಕಾಂಟ್ಯಾಕ್ಟ್​ ಸಪೋರ್ಟ್​ ಗ್ರೂಪ್(Contact Support Group) ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಈಗಲೇ ಅಪ್ಲೈ ಮಾಡಿ. ನವೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.


  ಕ್ಯಾಪ್ಜೆಮಿನಿ SE ಕಂಪನಿಯು ಇನ್ಫರ್ಮೇಶನ್ ಟೆಕ್ನಾಲಜಿ & ಕನ್ಸಲ್ಟಿಂಗ್ ಕಂಪನಿಯಾಗಿದೆ. ಇದರ ಮುಖ್ಯ ಕಚೇರಿ ಫ್ರಾನ್ಸ್​ನ ಪ್ಯಾರಿಸ್​ನಲ್ಲಿದೆ.


  ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  ಸಂಸ್ಥೆಕ್ಯಾಪ್ಜೆಮಿನಿ
  ಹುದ್ದೆಯ ಹೆಸರುಕಾಂಟ್ಯಾಕ್ಟ್​ ಸಪೋರ್ಟ್​ ಗ್ರೂಪ್
  ಒಟ್ಟು ಹುದ್ದೆ600
  ಉದ್ಯೋಗದ ಸ್ಥಳಬೆಂಗಳೂರು, ಕೊಲ್ಕತ್ತಾ, ಪುಣೆ
  ವೇತನವಾರ್ಷಿಕ ಪ್ಯಾಕೇಜ್ 2.75 LPA
  ಅರ್ಜಿ ಸಲ್ಲಿಸಲು ಕೊನೆ ದಿನ10/11/2022


  ಅರ್ಹತಾ ಮಾನದಂಡಗಳೇನು?


  ವಯೋಮಿತಿ:
  18 ವರ್ಷಕ್ಕಿಂತ ಮೇಲ್ಪಟ್ಟ ಅಭ್ಯರ್ಥಿಗಳು ಈ ಕಾಂಟ್ಯಾಕ್ಟ್​ ಸಪೋರ್ಟ್​ ಗ್ರೂಪ್ ಹುದ್ದೆಗಳಿಗೆ ಅರ್ಜಿ ಹಾಕಬಹುದು.


  ವಿದ್ಯಾರ್ಹತೆ:
  ಕಾಂಟ್ಯಾಕ್ಟ್​ ಸಪೋರ್ಟ್​ ಗ್ರೂಪ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.


  ಇದನ್ನೂ ಓದಿ: IISc Bangalore: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಜೆಕ್ಟ್​ ಅಸಿಸ್ಟೆಂಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ


  ವೇತನ:
  ಕಾಂಟ್ಯಾಕ್ಟ್​ ಸಪೋರ್ಟ್​ ಗ್ರೂಪ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಾರ್ಷಿಕ ಪ್ಯಾಕೇಜ್ 2.75 LPA ನೀಡಲಾಗುತ್ತದೆ. ಅಂದರೆ ಮಾಸಿಕ ₹ 20,000 ವೇತನ ಸಿಗಲಿದೆ.


  ಉದ್ಯೋಗದ ಸ್ಥಳ:
  ಬೆಂಗಳೂರು, ಕೊಲ್ಕತ್ತಾ, ಪುಣೆ


  ಉದ್ಯೋಗದ ಬಗೆ:
  ಫುಲ್ ಟೈಂ ಪರ್ಮನೆಂಟ್ ಜಾಬ್


  ಅನುಭವ:
  ಫ್ರೆಶರ್ಸ್​ ಕೂಡ ಅರ್ಜಿ ಸಲ್ಲಿಸಬಹುದು.


  ಆಯ್ಕೆ ಪ್ರಕ್ರಿಯೆ:
  ಸಂದರ್ಶನ
  ದಾಖಲಾತಿ ಪರಿಶೀಲನೆ


  ಇದನ್ನೂ ಓದಿ: LIC ನೇಮಕಾತಿ- ಇನ್ಶುರೆನ್ಸ್​ ಕನ್ಸಲ್ಟೆಂಟ್ ಹುದ್ದೆಗಳಿಗೆ ಇಲ್ಲಿ ಅರ್ಜಿ ಹಾಕಿ


  ಅರ್ಜಿ ಶುಲ್ಕ:
  ಯಾವುದೇ ಅರ್ಜಿ ಶುಲ್ಕ ಇಲ್ಲ


  ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


  ಪ್ರಮುಖ ದಿನಾಂಕಗಳು:
  ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/11/2022
  ಅರ್ಜಿ ಸಲ್ಲಿಸಲು ಕೊನೆ ದಿನ: 10/11/2022

  Published by:Latha CG
  First published: