• Home
  • »
  • News
  • »
  • jobs
  • »
  • Job Alert: 438 ಹುದ್ದೆಗಳಿಗೆ ಅರ್ಜಿ ಆಹ್ವಾನ, ಕನ್ನಡ ಮಾತನಾಡೋಕೆ ಬಂದ್ರೆ ಸಾಕು 30 ಸಾವಿರ ಸಿಗುತ್ತೆ!

Job Alert: 438 ಹುದ್ದೆಗಳಿಗೆ ಅರ್ಜಿ ಆಹ್ವಾನ, ಕನ್ನಡ ಮಾತನಾಡೋಕೆ ಬಂದ್ರೆ ಸಾಕು 30 ಸಾವಿರ ಸಿಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಾಗಲಕೋಟೆ (Bagalkote) ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ(Urban Local Body) ಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಅಧಿಕೃತ ಅಧಿಸೂಚನೆ ಅಥವಾ ನಾವು ನೀಡಿರುವ ವಿಳಾಸಕ್ಕೆ ಸ್ವತಃ ತೆರಳಿ ಅರ್ಜಿ ಹಾಕಬಹುದು.

  • News18 Kannada
  • 2-MIN READ
  • Last Updated :
  • Bagalkot, India
  • Share this:

ಬಾಗಲಕೋಟೆ (Bagalkote) ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ(Urban Local Body) ಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆ (Civil Servants) ಗಳಿಗೆ ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ (Application) ಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಅಧಿಕೃತ ಅಧಿಸೂಚನೆ ಅಥವಾ ನಾವು ನೀಡಿರುವ ವಿಳಾಸಕ್ಕೆ ಸ್ವತಃ ತೆರಳಿ ಅರ್ಜಿ ಹಾಕಬಹುದು. ಈ ಹುದ್ದೆಗೆ ಸಂಬಂಧಪಟ್ಟಂತೆ ವೇತನ, ವಯೋಮಿತಿ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ, ಹುದ್ದೆ ಸಂಖ್ಯೆ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಇಲಾಖೆ : ಬಾಗಲಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ


ಹುದ್ದೆಗಳ ಹೆಸರು: ಪೌರಕಾರ್ಮಿಕ


ಹುದ್ದೆಗಳ ಸಂಖ್ಯೆ: 438


ವಿದ್ಯಾರ್ಹತೆ: ಯಾವುದೇ ಶೈಕ್ಷಣಿಕ ಅರ್ಹತೆ ಇರುವುದಿಲ್ಲ. ಕನ್ನಡ ಭಾಷೆ ಬಂದರೆ ಸಾಕು.


ವೇತನ ಶ್ರೇಣಿ: ಮಾಸಿಕ ₹ 17,000 ರಿಂದ ₹ 28,950 ಸಾವಿರ ಹಾಗೂ ವಿವಿಧ ಭತ್ಯೆಗಳು


ವಯಸ್ಸು: ಕನಿಷ್ಠ 18 ವರ್ಷ ತುಂಬಿರಬೇಕು, ಗರಿಷ್ಠ 55 ವರ್ಷಗಳು ಮೀರಿರಬಾರದು


ಅನುಭವ: ಬಾಗಲಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಠ 2 ವರ್ಷಗಳ ಕಾಲ ಕೆಲಸ ಮಾಡಿರಬೇಕು.


ಆಯ್ಕೆ ವಿಧಾನ: ವಯಸ್ಸು ಹಾಗೂ ಅನುಭವದ ಜೇಷ್ಠತೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.


ಕೆಲಸದ ಸ್ಥಳ: ಬಾಗಲಕೋಟೆ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕೆಲಸ ಮಾಡಲು ಸಿದ್ಧರಿರಬೇಕು.


ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು


1) ನಿಗಧಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು


2)  ಅರ್ಜಿ ಜೊತೆ ಆಧಾರ್‌ ಕಾರ್ಡ್‌, ಜಾತಿ ಪ್ರಮಾಣಪತ್ರದ ಜೆರಾಕ್ಸ್‌ ಪ್ರತಿಗಳನ್ನು ಸಲ್ಲಿಸಬೇಕು.


ಅರ್ಜಿ ಸಲ್ಲಿಸುವ ವಿಧಾನ: ಜಿಲ್ಲಾಧಿಕಾರಿಗಳು, ಪೌರಕಾರ್ಮಿಕ ನೇರ ನೇಮಕಾತಿ (ವಿಶೇಷ) ಪ್ರಾಧಿಕಾರ, ಬಾಗಲಕೋಟೆ ಅಥವಾ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಸಲ್ಲಿಸಬೇಕು.


ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 13-02-2023


ಹೆಚ್ಚಿನ ಮಾಹಿತಿಗೆ ದೂರವಾಣಿ: 08354 –235776

ಹುದ್ದೆಗಳ ಸಂಖ್ಯೆ438
ಇಲಾಖೆಬಾಗಲಕೋಟೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ
ಹುದ್ದೆಗಳ ಹೆಸರುಪೌರಕಾರ್ಮಿಕ
ವಿದ್ಯಾರ್ಹತೆಯಾವುದೇ ಶೈಕ್ಷಣಿಕ ಅರ್ಹತೆ ಇರುವುದಿಲ್ಲ
ವೇತನ ಶ್ರೇಣಿಮಾಸಿಕ ₹ 17,000 ರಿಂದ ₹ 28,950 ಸಾವಿರ ಹಾಗೂ ವಿವಿಧ ಭತ್ಯೆಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ13-02-2023
ಹೆಚ್ಚಿನ ಮಾಹಿತಿಗೆ ದೂರವಾಣಿ08354 –235776

Published by:ವಾಸುದೇವ್ ಎಂ
First published: