• Home
  • »
  • News
  • »
  • jobs
  • »
  • JOB ALERT: ಬಾಗಲಕೋಟೆ ನಿರುದ್ಯೋಗಿಗಳಿಗೆ ಬಂಪರ್ ಉದ್ಯೋಗ, SSLC ಪಾಸಾಗಿದ್ರೆ ಈ ಕೆಲಸಕ್ಕೆ ಅರ್ಜಿ ಹಾಕಿ

JOB ALERT: ಬಾಗಲಕೋಟೆ ನಿರುದ್ಯೋಗಿಗಳಿಗೆ ಬಂಪರ್ ಉದ್ಯೋಗ, SSLC ಪಾಸಾಗಿದ್ರೆ ಈ ಕೆಲಸಕ್ಕೆ ಅರ್ಜಿ ಹಾಕಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 08354-220166 ಗೆ ಕರೆ ಮಾಡಬಹುದು.

  • Share this:

    Bagalkote Basavasri Pattina Souharda Sahakari Recruitment 2022:  ಬಾಗಲಕೋಟೆ ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದಲ್ಲಿ(Bagalkote Basavasri Pattina Souharda Sahakari ) 3 ಜೂನಿಯರ್ ಅಸಿಸ್ಟೆಂಟ್ ಹಾಗೂ ಅಟೆಂಡರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬಾಗಲಕೋಟೆಯಲ್ಲಿ(Bagalkote) ವೃತ್ತಿ ಮಾಡಬಯಸುವ ಸ್ಥಳೀಯ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ನವೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆಫ್​ಲೈನ್(Offline)​ ಮೂಲಕ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಬಾಗಲಕೋಟೆ ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ
    ಹುದ್ದೆಯ ಹೆಸರುಜೂನಿಯರ್ ಅಸಿಸ್ಟೆಂಟ್ ಹಾಗೂ ಅಟೆಂಡರ್
    ಒಟ್ಟು ಹುದ್ದೆ3
    ವಿದ್ಯಾರ್ಹತೆ10ನೇ ತರಗತಿ, ಪದವಿ
    ಸ್ಥಳಬಾಗಲಕೋಟೆ
    ವೇತನನಿಯಮಾನುಸಾರ
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ02/11/2022
    ಅರ್ಜಿ ಸಲ್ಲಿಸಲು ಕೊನೆ ದಿನ30/11/2022


    ಹುದ್ದೆಯ ಮಾಹಿತಿ:
    ಜೂನಿಯರ್ ಅಸಿಸ್ಟೆಂಟ್-2
    ಅಟೆಂಡರ್-1


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಜೂನಿಯರ್ ಅಸಿಸ್ಟೆಂಟ್-ಯಾವುದೇ ಪದವಿ
    ಅಟೆಂಡರ್- 10ನೇ ತರಗತಿ


    ಇದನ್ನೂ ಓದಿ: Kalyan Jewellers: ನೀವು PUC ಪಾಸಾಗಿದ್ರೆ ಕಲ್ಯಾಣ್​ ಜ್ಯುವೆಲರ್ಸ್​​ನಲ್ಲಿ ಕೆಲಸ ಮಾಡಬಹುದು- ಇಲ್ಲಿದೆ ಮಾಹಿತಿ


    ಅನುಭವ:
    ಅಭ್ಯರ್ಥಿಗಳು ಯಾವುದೇ ಕೋ-ಆಪರೇಟಿವ್ ಬ್ಯಾಂಕ್ ಅಥವಾ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.


    ವಯೋಮಿತಿ:
    ಬಾಗಲಕೋಟೆ ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    ಒಬಿಸಿ ಅಭ್ಯರ್ಥಿಗಳು-3 ವರ್ಷ


    ಅರ್ಜಿ ಶುಲ್ಕ:
    ಎಲ್ಲಾ ಅಭ್ಯರ್ಥಿಗಳಿಗೆ 400 ರೂ. ಅರ್ಜಿ ಶುಲ್ಕ
    ಪಾವತಿಸುವ ಬಗೆ: ಆನ್​ಲೈನ್​


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 30, 2022ರೊಳಗೆ ಕಳುಹಿಸಬೇಕು.


    ಮುಖ್ಯ ಕಾರ್ಯನಿರ್ವಾಹಕ
    ಬಾಗಲಕೋಟೆ ಬಸವಶ್ರೀ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ
    ವಾಲಿ ಕಟ್ಟಡ
    ಕಾಲೇಜು ರಸ್ತೆ
    ಬಸವೇಶ್ವರ ವೃತ್ತ
    ಬಾಗಲಕೋಟೆ-587101

    ಇದನ್ನೂ ಓದಿ: SSLC, PUC ಪಾಸಾಗಿದ್ರೆ ಸರ್ಕಾರಿ ಕೆಲಸ- 25 ಸಾವಿರ ಸಂಬಳ, ಅರ್ಜಿ ಸಲ್ಲಿಸಲು ಹೀಗೆ ಮಾಡಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 30/11/2022


    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 08354-220166 ಗೆ ಕರೆ ಮಾಡಬಹುದು.

    Published by:Latha CG
    First published: