• Home
  • »
  • News
  • »
  • jobs
  • »
  • JOB ALERT: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 250 ಜೂನಿಯರ್ ವೆಟರಿನರಿ ಇನ್ಸ್​ಪೆಕ್ಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

JOB ALERT: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 250 ಜೂನಿಯರ್ ವೆಟರಿನರಿ ಇನ್ಸ್​ಪೆಕ್ಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ವೆಟರಿನರಿ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 21,400-42,000 ರೂ. ವೇತನ ಕೊಡಲಾಗುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

    KEA Recruitment 2022: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(Karnataka Examinations Authority) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 250 ಜೂನಿಯರ್ ವೆಟರಿನರಿ ಇನ್ಸ್​ಪೆಕ್ಟರ್(ವೆಟರಿನರಿ ಅಸಿಸ್ಟೆಂಟ್) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕ ಸರ್ಕಾರದ ಉದ್ಯೋಗ(Government Job) ಮಾಡಬಯಸುವವರಿಗೆ ಹಾಗೂ ಬೆಂಗಳೂರಿನಲ್ಲಿ ವೃತ್ತಿ ಜೀವನ ನಡೆಸಲು ಮುಂದಾಗಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 26, 2022 ಕೊನೆಯ ದಿನ(Last Date)ವಾಗಿದ್ದು, ಅಭ್ಯರ್ಥಿಗಳು ಕೂಡಲೇ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ
    ಹುದ್ದೆಯ ಹೆಸರುಜೂನಿಯರ್ ವೆಟರಿನರಿ ಇನ್ಸ್​ಪೆಕ್ಟರ್
    ಒಟ್ಟು ಹುದ್ದೆ250
    ವಿದ್ಯಾರ್ಹತೆಡಿಪ್ಲೋಮಾ
    ವೇತನಮಾಸಿಕ ₹ 21,400-42,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ05/10/2022
    ಅರ್ಜಿ ಸಲ್ಲಿಸಲು ಕೊನೆ ದಿನ26/11/2022


    ಅರ್ಜಿ ಶುಲ್ಕ:
    ಸಾಮಾನ್ಯ/ ಪ್ರವರ್ಗ-2ಎ/2ಬಿ/ 3ಎ & 3ಬಿ ಅಭ್ಯರ್ಥಿಗಳು- 750 ರೂ.
    ಎಸ್​​ಸಿ/ಎಸ್​ಟಿ/ಪ್ರವರ್ಗ-1/ ವಿಶೇಷ ಚೇತನ ಅಭ್ಯರ್ಥಿಗಳು-500 ರೂ.


    ಇದನ್ನೂ ಓದಿ: Central Government Job: ರೈಲ್ವೆ ಇಲಾಖೆಯಲ್ಲಿ ಗ್ರೂಪ್​ ಸಿ, ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ


    ಶೈಕ್ಷಣಿಕ ಅರ್ಹತೆ:
    ಅಭ್ಯರ್ಥಿಯು ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರ ನಡೆಸುವ ಡೈರಿಗೆ ಸಂಬಂಧಿಸಿದ ಎರಡು ವರ್ಷಗಳ ವೃತ್ತಿಪರ ಶಿಕ್ಷಣ ನಿರ್ದೇಶಕರು ನೀಡುವ ಪಶು ಆರೋಗ್ಯ (ಪಶುಸಂಗೋಪನೆ) ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.


    ವಯೋಮಿತಿ:
    ಸಾಮಾನ್ಯ ಅಭ್ಯರ್ಥಿಗಳಿಗೆ -18ರಿಂದ 35 ವರ್ಷ
    ಪ್ರವರ್ಗ 2ಎ/ 2ಬಿ/ 3ಎ & 3ಬಿ ಅಭ್ಯರ್ಥಿಗಳಿಗೆ- 18ರಿಂದ 38 ವರ್ಷ
    ಎಸ್​​ಸಿ/ಎಸ್​ಟಿ/ ಪ್ರವರ್ಗ-1/ ವಿಶೇಷ ಚೇತನ ಅಭ್ಯರ್ಥಿಗಳಿಗೆ- 18ರಿಂದ 40 ವರ್ಷ


    ಉದ್ಯೋಗದ ಸ್ಥಳ:
    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ವೆಟರಿನರಿ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.


    ವೇತನ:
    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ವೆಟರಿನರಿ ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 21,400-42,000 ರೂ. ವೇತನ ಕೊಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ದಾಖಲಾತಿ ಪರಿಶೀಲನೆ
    ವೈಯಕ್ತಿಕ ಸಂದರ್ಶನ


    ಇದನ್ನೂ ಓದಿ: Banking Job: ಕರ್ನಾಟಕ ಬ್ಯಾಂಕ್​ನಲ್ಲಿ ಕಂಪನಿ ಸೆಕ್ರೆಟರಿ ಹುದ್ದೆ ಖಾಲಿ-ಮಂಗಳೂರಿನಲ್ಲಿ ಉದ್ಯೋಗ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 26/11/2022

    Published by:Latha CG
    First published: