• Home
  • »
  • News
  • »
  • jobs
  • »
  • JOBS: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ-ನಾಳೆಯೇ ಕೊನೆ ದಿನ

JOBS: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ-ನಾಳೆಯೇ ಕೊನೆ ದಿನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಎಂಇ/ಎಂಟೆಕ್, ಎಂಎಸ್ಸಿ, ಎಂಸಿಎ ಪೂರ್ಣಗೊಳಿಸಿರಬೇಕು.

  • Share this:

    KEA Recruitment 2022: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examinations Authority)ದಲ್ಲಿ ಖಾಲಿ ಇರುವ  21 ಟೆಕ್ನಿಕಲ್ ಹೆಡ್(Technical Head) ಮತ್ತು ಸೀನಿಯರ್ ಪ್ರೋಗ್ರಾಮರ್(Senior Programmer) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕ ಸರ್ಕಾರದ ಉದ್ಯೋಗ(Government Job) ಮಾಡಬಯಸುವವರಿಗೆ ಹಾಗೂ ಬೆಂಗಳೂರಿನಲ್ಲಿ ವೃತ್ತಿ ಜೀವನ ನಡೆಸಲು ಮುಂದಾಗಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ.  ಅಭ್ಯರ್ಥಿಗಳು ಕೂಡಲೇ ಇ-ಮೇಲ್ ಮಾಡಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕರ್ನಾಟಕ ಪರೀಕ್ಷಾ ಪ್ರಾಧಿಕಾರ
    ಹುದ್ದೆಯ ಹೆಸರುಟೆಕ್ನಿಕಲ್ ಹೆಡ್, ಸೀನಿಯರ್ ಪ್ರೋಗ್ರಾಮರ್
    ಒಟ್ಟು ಹುದ್ದೆ21
    ವಿದ್ಯಾರ್ಹತೆಬಿಇ/ಬಿ.ಟೆಕ್, ಎಂಇ/ಎಂಟೆಕ್, ಎಂಎಸ್ಸಿ, ಎಂಸಿಎ
    ವೇತನಮಾಸಿಕ ₹20,000-1,50,000
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ05/11/2022
    ಅರ್ಜಿ ಸಲ್ಲಿಸಲು ಕೊನೆ ದಿನ14/11/2022


    ಹುದ್ದೆಯ ಮಾಹಿತಿ:
    ಟೆಕ್ನಿಕಲ್ ಹೆಡ್- ಕಂಪ್ಯೂಟರ್ ಸೆಕ್ಷನ್-1
    ಸೀನಿಯರ್ ಪ್ರೋಗ್ರಾಮರ್-3
    ಪ್ರೋಗ್ರಾಮರ್-8
    ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್-2
    ಡೇಟಾ ಅನಾಲಿಸ್ಟ್​-4
    ಟ್ರೇನಿ/ಅಪ್ರೆಂಟಿಸ್-3


    ವಿದ್ಯಾರ್ಹತೆ:
    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಎಂಇ/ಎಂಟೆಕ್, ಎಂಎಸ್ಸಿ, ಎಂಸಿಎ ಪೂರ್ಣಗೊಳಿಸಿರಬೇಕು.


    ಅನುಭವ:
    ಸೀನಿಯರ್ ಪ್ರೋಗ್ರಾಮರ್: ಅಭ್ಯರ್ಥಿಗಳು ASP.NET, C#, SQL ಸರ್ವರ್, PHP ನಲ್ಲಿ 3 ವರ್ಷ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.
    ಡೇಟಾ ಅನಾಲಿಸ್ಟ್​: ಅಭ್ಯರ್ಥಿಗಳು RDBMS, SQL ಸರ್ವರ್, ಒರಾಕಲ್‌ನಲ್ಲಿ 1 ವರ್ಷದ ಅನುಭವವನ್ನು ಹೊಂದಿರಬೇಕು.
    ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್: ಅಭ್ಯರ್ಥಿಗಳು RDBMS, SQL ಸರ್ವರ್, ಒರಾಕಲ್‌ನಲ್ಲಿ 3 ವರ್ಷಗಳ ಅನುಭವವನ್ನು ಹೊಂದಿರಬೇಕು.
    ಪ್ರೋಗ್ರಾಮರ್: ಅಭ್ಯರ್ಥಿಗಳು ASP.NET, C#, SQL ಸರ್ವರ್, PHP ನಲ್ಲಿ 1 ವರ್ಷದ ಅನುಭವವನ್ನು ಹೊಂದಿರಬೇಕು.
    ತರಬೇತುದಾರ/ಅಪ್ರೆಂಟಿಸ್: ಅಭ್ಯರ್ಥಿಗಳು ASP.NET, C#, JAVA, SQL ಸರ್ವರ್, PHP ಯಲ್ಲಿ ಪ್ರಾಯೋಗಿಕ ಅನುಭವದೊಂದಿಗೆ ಫ್ರೆಶರ್ ಆಗಿರಬೇಕು.


    ವಯೋಮಿತಿ:
    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ವಯಸ್ಸು ಇರಬೇಕು.


    ವಯೋಮಿತಿ ಸಡಿಲಿಕೆ:
    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಪ್ರಾಯೋಗಿಕ ಪರೀಕ್ಷೆ
    ಸಂದರ್ಶನ


    ವೇತನ:
    ಟೆಕ್ನಿಕಲ್ ಹೆಡ್-ಕಂಪ್ಯೂಟರ್ ವಿಭಾಗ: ರೂ.125000-150000/-
    ಹಿರಿಯ ಪ್ರೋಗ್ರಾಮರ್ ರೂ.75000-100000/-
    ಪ್ರೋಗ್ರಾಮರ್ ರೂ.40000-50000/-
    ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್ ರೂ.70000-95000/-
    ಡೇಟಾ ವಿಶ್ಲೇಷಕ ರೂ.40000-65000/-
    ಟ್ರೈನಿ/ಅಪ್ರೆಂಟಿಸ್ ರೂ.20000-25000/-


    ಅರ್ಜಿ ಸಲ್ಲಿಸುವುದು ಹೇಗೆ?
    ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ keaopportunities@gmail.com ಗೆ ನವೆಂಬರ್ 14, 2022ಕ್ಕೆ ಮುನ್ನ ಕಳುಹಿಸಬೇಕು.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 14/11/2022

    Published by:Latha CG
    First published: