• Home
  • »
  • News
  • »
  • jobs
  • »
  • JOBS: ಜಲಸಂಪನ್ಮೂಲ ಇಲಾಖೆ ನೇಮಕಾತಿ- 169 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ

JOBS: ಜಲಸಂಪನ್ಮೂಲ ಇಲಾಖೆ ನೇಮಕಾತಿ- 169 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 33,450-62,600 ವೇತನ ನೀಡಲಾಗುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

    Water Resources Department Karnataka Recruitment 2022: ಕರ್ನಾಟಕದ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 169 ಜೂನಿಯರ್ ಎಂಜಿನಿಯರ್(Junior Engineer) ಹುದ್ದೆಗಳಿಗೆ ಅರ್ಜಿ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಸರ್ಕಾರಿ ಉದ್ಯೋಗ(Job) ಹುಡುಕುತ್ತಿರುವವರು ಜಲಸಂಪನ್ಮೂಲ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಖಾಲಿ ಇರುವ ಎಂಜಿನಿಯರ್ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ​. ಅದರಲ್ಲೂ ಬೆಂಗಳೂರಿನಲ್ಲಿ ವೃತ್ತಿ ಮಾಡಲು ಬಯಸುವ ಉದ್ಯೋಗಾಂಕ್ಷಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಆಸಕ್ತರು ಕೂಡಲೇ ಸದುಪಯೋಗಪಡಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ https://waterresources.karnataka.gov.in/ ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಜಲಸಂಪನ್ಮೂಲ ಇಲಾಖೆ
    ಹುದ್ದೆಜೂನಿಯರ್ ಎಂಜಿನಿಯರ್
    ಒಟ್ಟು ಹುದ್ದೆ169
    ವಿದ್ಯಾರ್ಹತೆಡಿಪ್ಲೋಮಾ, ಬಿಇ, ಬಿ.ಟೆಕ್
    ಸ್ಥಳಕರ್ನಾಟಕ
    ವೇತನಮಾಸಿಕ ₹ 33,450-62,600
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ19/10/2022
    ಅರ್ಜಿ ಸಲ್ಲಿಸಲು ಕೊನೆ ದಿನ17/11/2022


    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ:
    ಜೂನಿಯರ್ ಎಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಡಿಪ್ಲೋಮಾ, ಬಿಇ/ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷದೊಳಗಿರಬೇಕು.


    ಇದನ್ನೂ ಓದಿ: NIMHANS Recruitment 2022: ನಿಮ್ಹಾನ್ಸ್​​ನಲ್ಲಿರುವ 47,000 ಸಂಬಳದ ಉದ್ಯೋಗಕ್ಕೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ


    ಹುದ್ದೆ ಕುರಿತಾದ ಅಧಿಕೃತ ನೋಟಿಫಿಕೇಶನ್ ಇಲ್ಲಿದೆ.


    KPSC-Notification


    ವೇತನ:
    ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 33,450-62,600 ವೇತನ ನೀಡಲಾಗುತ್ತದೆ.


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17/11/2022


    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:


    ಕೇಂದ್ರ ಕಚೇರಿ ಮಾಹಿತಿ ಕೇಂದ್ರ: 080-30574957/30574901


    ಪ್ರಾಂತೀಯ ಕಛೇರಿ ಮೈಸೂರು: 0821-2545956


    ಪ್ರಾಂತೀಯ ಕಛೇರಿ ಬೆಳಗಾವಿ: 0831-2475345


    ಪ್ರಾಂತೀಯ ಕಛೇರಿ ಕಲಬುರಗಿ: 08472-227944


    ಪ್ರಾಂತೀಯ ಕಛೇರಿ ಶಿವಮೊಗ್ಗ: 08182-228099


    ಸಹಾಯವಾಣಿ ಸಂಖ್ಯೆ: 18005728707

    Published by:Latha CG
    First published: