• Home
  • »
  • News
  • »
  • jobs
  • »
  • Karnataka Jobs: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇಲ್ಲಿ Apply ಮಾಡಿ, ಇವತ್ತೇ ಕೊನೆ ದಿನ

Karnataka Jobs: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇಲ್ಲಿ Apply ಮಾಡಿ, ಇವತ್ತೇ ಕೊನೆ ದಿನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ರೇಂಜ್ ಫಾರೆಸ್ಟ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 40,900-78,200 ರೂ ವೇತನ ನೀಡಲಾಗುತ್ತದೆ.

  • News18 Kannada
  • Last Updated :
  • Karnataka, India
  • Share this:

    KFD Recruitment 2022: ಕರ್ನಾಟಕ ಅರಣ್ಯ ಇಲಾಖೆ(Karnataka Forest Department)ಯಲ್ಲಿ ಖಾಲಿ ಇರುವ 10 ರೇಂಜ್ ಫಾರೆಸ್ಟ್ ಆಫೀಸರ್(Range Forest Officer) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇವತ್ತೇ ಕೊನೆಯ ದಿನ(Last Date)ವಾಗಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ಇಂತಹ ಬಂಪರ್ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕರ್ನಾಟಕ ಸರ್ಕಾರದ ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕರ್ನಾಟಕ ಅರಣ್ಯ ಇಲಾಖೆ
    ಹುದ್ದೆಯ ಹೆಸರುರೇಂಜ್ ಫಾರೆಸ್ಟ್ ಆಫೀಸರ್
    ಒಟ್ಟು ಹುದ್ದೆ10
    ವಿದ್ಯಾರ್ಹತೆಬಿಎಸ್ಸಿ, ಬಿಇ/ ಬಿ.ಟೆಕ್
    ವೇತನಮಾಸಿಕ ₹ 40,900-78,200
    ಸ್ಥಳಕರ್ನಾಟಕ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ20/10/2022
    ಅರ್ಜಿ ಸಲ್ಲಿಸಲು ಕೊನೆ ದಿನ19/11/2022


    ಹುದ್ದೆಯ ಮಾಹಿತಿ:
    ಬಿಎಸ್ಸಿ(ಫಾರೆಸ್ಟ್​) ಗ್ರಾಜುಯೇಟ್ ಅಭ್ಯರ್ಥಿಗಳು- 5 ಹುದ್ದೆಗಳು
    ಬಿಎಸ್ಸಿ (ಸೈನ್ಸ್​)/ ಎಂಜಿನಿಯರಿಂಗ್ ಅಭ್ಯರ್ಥಿಗಳು- 5 ಹುದ್ದೆಗಳು

    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ:
    ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ರೇಂಜ್ ಫಾರೆಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಬಿಎಸ್ಸಿ, ಬಿಇ/ ಬಿ.ಟೆಕ್ ಪೂರ್ಣಗೊಳಿಸಿರಬೇಕು.


    ಹುದ್ದೆಯ ಕುರಿತಾದ ನೋಟಿಫಿಕೇಶನ್ ಪಿಡಿಎಫ್  ಇಲ್ಲಿದೆ


    Range-Forest-Officer-RFO-Posts-Advt-Details-KFD


    ವಯೋಮಿತಿ:
    ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ರೇಂಜ್ ಫಾರೆಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 15, 2022ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 28 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಎಸ್​​ಸಿ/ಎಸ್​ಟಿ/ ಪ್ರವರ್ಗ-1 ಅಭ್ಯರ್ಥಿಗಳು-5 ವರ್ಷ
    ಪ್ರವರ್ಗ 2ಎ/ 2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ


    ಇದನ್ನೂ ಓದಿ: NIMHANS Recruitment 2022: ನಿಮ್ಹಾನ್ಸ್​​ನಲ್ಲಿ 34 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ 1.10 ಲಕ್ಷ


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/ ಪ್ರವರ್ಗ-1 ಅಭ್ಯರ್ಥಿಗಳು- 100 ರೂ. ಅರ್ಜಿ ಶುಲ್ಕ + 20 ರೂ. ಸೇವಾಶುಲ್ಕ
    ಸಾಮಾನ್ಯ, ಪ್ರವರ್ಗ 2ಎ/ 2ಬಿ/3ಎ & 3ಬಿ ಅಭ್ಯರ್ಥಿಗಳು- 200 ರೂ. ಅರ್ಜಿ ಶುಲ್ಕ + 20 ರೂ. ಸೇವಾಶುಲ್ಕ
    ಅರ್ಜಿ ಶುಲ್ಕ ಪಾವತಿಸುವ ಬಗೆ- ಆನ್​ಲೈನ್


    ಆಯ್ಕೆ ಪ್ರಕ್ರಿಯೆ:


    ಸ್ಪರ್ಧಾತ್ಮಕ ಪರೀಕ್ಷೆ
    ದೈಹಿಕ ಸಾಮರ್ಥ್ಯ
    ದೈಹಿಕ ಸಹಿಷ್ಣುತೆ ಪರೀಕ್ಷೆ
    ದೈಹಿಕ ದಕ್ಷತೆ ಪರೀಕ್ಷೆ
    ವೈದ್ಯಕೀಯ ಪರೀಕ್ಷೆ

    ಅರ್ಜಿ ಸಲ್ಲಿಸುವುದು ಹೇಗೆ?


    ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

    ವೇತನ:
    ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ರೇಂಜ್ ಫಾರೆಸ್ಟ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 40,900-78,200 ರೂ ವೇತನ ನೀಡಲಾಗುತ್ತದೆ.


    ಇದನ್ನೂ ಓದಿ: UIDAI Recruitment 2022: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಕೆಲಸ ಖಾಲಿ ಇದೆ, ಡಿಗ್ರಿ ಆದವರು Apply ಮಾಡಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 19/11/2022
    ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ: 23/11/2022

    Published by:Latha CG
    First published: