ಕಲಬುರಗಿ, ಅಫಜಲಪುರ: ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲೇ ಇರುವ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಇಲ್ಲೊಂದು ಸುವರ್ಣಾವಕಾಶ (Best Job Opportunity) ಹುಡುಕಿಕೊಂಡು ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆ (Anganwadi Jobs) ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರು | ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು |
ಕೆಲಸದ ಸ್ಥಳ | ಅಫಜಲಪುರ |
ಎಲ್ಲಿ ಸಿಗುತ್ತೆ ಅರ್ಜಿ? | ಅಫಜಲಪುರ ಶಿಶು ಅಭಿವೃದ್ಧಿ ಯೋಜನಾ ಕಚೇರಿ |
ಅರ್ಜಿ ಸಲ್ಲಿಸಲು ಕೊನೆ ದಿನ | ಏಪ್ರಿಲ್ 24ರ ಸಂಜೆ 5:30ರ ಒಳಗಾಗಿ |
ಹೆಚ್ಚಿನ ಮಾಹಿತಿಗಾಗಿ | ಶಿಶು ಅಭಿವೃದ್ಧಿ ಯೋಜನೆ ಕಚೇರಿ ಅಥವಾ ದೂರವಾಣಿ ಸಂಖ್ಯೆ- 08470-283073 |
ಎಲ್ಲಿ ಸಿಗುತ್ತೆ ಅರ್ಜಿ?
ಆಸಕ್ತ ಅಭ್ಯರ್ಥಿಗಳು ಅಫಜಲಪುರ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಅರ್ಜಿಯನ್ನು ಪಡೆದು ನಿಗದಿತ ಸಮಯದ ಒಳಗೆ ಸಲ್ಲಿಸಬೇಕಿದೆ. ಈ ಕುರಿತು ಅಫಜಲಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
ಅರ್ಜಿ ಸಲ್ಲಿಸಲು ಕೊನೆ ದಿನ
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 24ರ ಸಂಜೆ 5:30ರ ಒಳಗಾಗಿ ಅಫಜಲಪುರ ಶಿಶು ಅಭಿವೃದ್ಧಿ ಯೋಜನೆಯ ಕಚೇರಿಗೆ ಸಲ್ಲಿಸಬೇಕಿದೆ.
ಇದನ್ನೂ ಓದಿ: UPSC Recruitment: ಡಿಗ್ರಿ ಆಗಿದ್ಯಾ? ಯೂತ್ ಆಫೀಸರ್ ಪೋಸ್ಟ್ಗೆ ಅಪ್ಲೈ ಮಾಡಿ
ಜೊತೆಗೆ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ ಕಚೇರಿ ಅಥವಾ ದೂರವಾಣಿ ಸಂಖ್ಯ 08470-283073 ಗೆ ಕರೆ ಮಾಡಲು ಕೋರಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ