ಕೋಲಾರ (kolar) ತಾಲೂಕಿನಲ್ಲಿರುವ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತರ ನೇಮಕಕ್ಕೆ ಕರ್ನಾಟಕ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ ಅಂಗನವಾಡಿ ನೇಮಕಾತಿ 2021 (anganwadi Recruitment) ಕ್ಕೆ ಅಧಿಸೂಚನೆ ಅಡಿ 171 ಹುದ್ದೆಗೆ ಅರ್ಜಿ ಕರೆಯಲಾಗಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆ 13 ಆಗಿದೆ. ಕರ್ನಾಟಕ ಅಂಗನವಾಡಿ ನೇಮಕಾತಿಯ ಅಧಿಕೃತ ವೆಬ್‌ಸೈಟ್ anganwadirecruit.kar.nic.in ಜಾಲತಾಣದಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಕೋಲಾರದ ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬಂಗಾರಪೇಟೆ, ಬೇತಮಂಗಲ, ಕೋಲಾರ, ಮಾಲೂರು, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲೂಕಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ
ತಾಲೂಕುಗಳು | ಅಂಗನವಾಡಿ ಕಾರ್ಯಕರ್ತರು | ಅಂಗನವಾಡಿ ಸಹಾಯಕ ಕಾರ್ಯಕರ್ತರು |
ಬಂಗಾರಪೇಟೆ | 6 | 16 |
ಬೇತಮಂಗಲ | 4 | 14 |
ಕೋಲಾರ | 5 | 26 |
ಮಾಲೂರು | 7 | 21 |
ಮುಳಬಾಗಿಲು | 8 | 32 |
ಶ್ರೀನಿವಾಸಪುರ | 8 | 24 |
ಅಂಗನವಾಡಿ ನೇಮಕಾತಿ 2021 ಸಂಬಳ:
ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಸಹಾಯಕ ಕಾರ್ಯಕರ್ತೆಯ ಹುದ್ದೆಗಳಿಗೆ ತಿಂಗಳಿಗೆ ಕ್ರಮವಾಗಿ 4000 ಮತ್ತು 6000 ಮಾಸಿಕ ವೇತನ ನಿಗದಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯ ಮಾಸಿಕ ವೇತನ 8000 ಆಗಿರುತ್ತದೆ.
ಸಂದರ್ಶನದ ಮೂಲಕ ಆಯ್ಕೆ
ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ನೇರವಾಗಿ ಮೇಲ್ಕಂಡ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲ, ಅಭ್ಯರ್ಥಿಗಳು ಸೂಚಿಸಿದ ಲಿಂಕ್‌ನಲ್ಲಿ ಅಂಗನವಾಡಿ ನೇಮಕಾತಿಯ ಅಧಿಕೃತ ಅಧಿಸೂಚನೆಯ ಮೂಲಕವೂ ಹೋಗಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಇದನ್ನು ಓದಿ: PSI ನೇಮಕಾತಿ: ಲಿಖಿತ ಪರೀಕ್ಷೆಗೆ ತರಬೇತಿ ಪಡೆಯಲು ಇಲ್ಲಿ ನೋಂದಾಯಿಸಿಕೊಳ್ಳಿ
ಸ್ಥಳೀಯರಾಗಿರಬೇಕು
ಅಂಗನವಾಡಿ ಕಾರ್ಯಕರ್ತರು ಅಥವಾ ಸಹಾಯಕಿಯರಿಗೆ ಅರ್ಜಿ ಸಲ್ಲಿಸುವವರು ಅಲ್ಲಿಯೇ ಸ್ಥಳೀಯರಾಗಿರಬೇಕು. ನೀವು ಸ್ಥಳೀಯರು ಎಂಬ ದಾಖಲಾತಿಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ದಿನಾಂಕದಿಂದ ಕಳೆದೊಂದು ವರ್ಷದಿಂದ ಅಲ್ಲಿಯೇ ವಾಸಿಸುತ್ತೀದ್ದೀರಾ ಎಂದು ತಹಶೀಲ್ದಾರ್ ಅಥವಾ ಉಪ ತಹಶೀಲ್ದಾರರಿಂದ ವಾಸಸ್ಥಳ ದೃಢೀರಣ ಪತ್ರವನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು.
ಇನ್ನು ಈ ಹುದ್ದೆಗೆ ಮಾಜಿ ದೇವದಾಸಿಯರ ಮಗಳು, ಯೋಜನಾ ನಿರಾಶ್ರಿತರು, ವಿಚ್ಛೇದಿತ ಮಹಿಳೆಯರು, ಪರಿತ್ಯಕ್ತೆಯರಿಗೆ ಐದು ಬೋನಸ್ ಅಂಕ ಸಿಕ್ಕು ಅವರಿ ಆದ್ಯತೆ ಸಿಗಲಿದೆ
ಆಯ್ಕೆ ವಿಧಾನ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಕೊನೆಯ ದಿನಾಂಕದ ನಂತರ ಮುಂದಿನ 7 ಕೆಲಸದ ದಿನಗಳೊಳಗೆ ಸಮಿತಿ ಸಭೆಗೆ ಬರಬೇಕು
ಆಯ್ಕೆ ಸಮಿತಿಯಲ್ಲಿಯೇ ಅಭ್ಯರ್ಥಿಗಳ ಆನ್ಲೈನ್ ಅರ್ಜಿಗಳನ್ನು ದಾಖಲೆಗಳ ಪರಿಶೀಲನೆ ನಡೆಸಲಾಗುವುದು
ಈ ವೇಳೆ ಅರ್ಜಿಗದಾರರ ವಿದ್ಯಾರ್ಹತೆ, ಪಡೆದ ಅಂಕ, ಮತ್ತಿ ಬೋನಸ್ ಸೇರಿದಂತೆ ಇತರೆ ಅಂಶ ಪರಿಗಣಿಸಿ ಅಂದೇ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ