UST Company: ಬೆಂಗಳೂರು, ಹೈದ್ರಾಬಾದ್ ಶಾಖೆಗಳಿಗೆ ಶೀಘ್ರದಲ್ಲೇ 7,000 ಉದ್ಯೋಗಿಗಳ ನೇಮಕ 

ಯುಎಸ್‍ಟಿ ಹೈದರಾಬಾದ್ ಇತ್ತೀಚೆಗೆ 1000 ಉದ್ಯೋಗಿಗಳ ಸೇರ್ಪಡೆಯ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿತು. ಮುಂದಿನ ಎರಡು ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು 2000 ಸಾವಿರಕ್ಕೆ ಏರಿಸುವ ಯೋಜನೆಯನ್ನು ಅದು ಘೋಷಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಯುಎಸ್‍ಟಿ(UST Company) ಕಂಪೆನಿಯು ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸಲು ಭಾರತ(India)ದಲ್ಲಿ ತನ್ನ ಸ್ಥಳೀಯ ಅಸ್ಥಿತ್ವವನ್ನು ವಿಸ್ತರಿಸಲು ಯೋಜನೆ ನಡೆಸುತ್ತಿದೆ. ತನ್ನ ಬೆಂಗಳೂರು ಕೇಂದ್ರದ ಉದ್ಯೋಗಿಗಳ(Employees) ಸಂಖ್ಯೆಯನ್ನು 2023 ರ ವೇಳೆಗೆ 6,000 ದಿಂದ 12 ಸಾವಿರಕ್ಕೆ ಏರಿಸಲು ನಿರ್ಧರಿಸಿದೆ.


ಐಟಿ ಉದ್ಯೋಗಗಳು:


ಗ್ಲೋಬಲ್ ಟೆಕ್ ಕಂಪೆನಿ ಯುಎಸ್‍ಟಿ , ಉದ್ಯಮ ಮತ್ತು ಗ್ರಾಹಕರ ವಿಸ್ತರಣೆಯಲ್ಲಿನ ಬೇಡಿಕೆಯ ಉಲ್ಬಣವನ್ನು ಹೆಚ್ಚಿಸಲು, ತನ್ನ ಬೆಂಗಳೂರು ಕೇಂದ್ರದ ಉದ್ಯೋಗಿಗಳ ಸಂಖ್ಯೆಯನ್ನು 2023 ರ ವೇಳೆಗೆ 6,000 ದಿಂದ 12 ಸಾವಿರಕ್ಕೆ ಏರಿಸಲು ಯೋಜನೆ ರೂಪಿಸಿದೆ. ಫೆಬ್ರವರಿ 2020 ರಿಂದ ಈ ವರೆಗೆ ಕಂಪೆನಿಯು 2000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಯುಎಸ್‍ಟಿ ಕಂಪೆನಿಯು ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸಲು ಭಾರತದಲ್ಲಿ ತನ್ನ ಸ್ಥಳೀಯ ಅಸ್ಥಿತ್ವವನ್ನು ವಿಸ್ತರಿಸಲು ಯೋಜನೆ ನಡೆಸುತ್ತಿದೆ. “ಮುಂದಿನ 18-24 ತಿಂಗಳುಗಳಲ್ಲಿ, ಬೆಂಗಳೂರು ಕೇಂದ್ರವು ಹೆಲ್ತ್‍ಕೇರ್, ತಂತ್ರಜ್ಞಾನ, ಲಾಜಿಸ್ಟಿಕ್ಸ್, ಸೆಮಿಕಂಡಕ್ಟರ್‍ಗಳು ಮತ್ತು ಬಿಎಫ್‍ಎಸ್‍ಐ( ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆ ಹಾಗೂ ವಿಮೆ) ಗ್ರಾಹಕರ, ಉತ್ಪನ್ನಗಳು ಮತ್ತು ಸೇವೆಗಳ ಕೇಂದ್ರೀಕರಿಸುವ ವಿವಿಧ ಕೆಲಸಗಳಿಗಾಗಿ ಪ್ರೆಶರ್ ಮತ್ತು ಅನುಭವಿ ಎಂಜಿನಿಯರ್‍ಗಳನ್ನು ನೇಮಿಸಿಕೊಳ್ಳಲಿದೆ” ಎಂದು ಕಂಪೆನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಇದನ್ನೂ ಓದಿ:ESIC Kalaburgi Recruitment 2021: ತಿಂಗಳಿಗೆ 1 ಲಕ್ಷ ರೂ. ಸಂಬಳ, ESIC ಕಲಬುರ್ಗಿಯಲ್ಲಿ ಪ್ರೊಫೆಸರ್ ಹುದ್ದೆಗಳು ಖಾಲಿ

2 ವರ್ಷಗಳಲ್ಲಿ 2 ಸಾವಿರಕ್ಕೆ ಉದ್ಯೋಗಿಗಳ ಸಂಖ್ಯೆ ಏರಿಕೆ

ಯುಎಸ್‍ಟಿ ಹೈದರಾಬಾದ್ ಇತ್ತೀಚೆಗೆ 1000 ಉದ್ಯೋಗಿಗಳ ಸೇರ್ಪಡೆಯ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿತು. ಮುಂದಿನ ಎರಡು ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು 2000 ಸಾವಿರಕ್ಕೆ ಏರಿಸುವ ಯೋಜನೆಯನ್ನು ಅದು ಘೋಷಿಸಿದೆ.


25 ರಾಷ್ಟ್ರಗಳಲ್ಲಿ 35 ಕ್ಕೂ ಹೆಚ್ಚು ಕಚೇರಿ ಹೊಂದಿರುವ UST ಕಂಪನಿ

ಯುಎಸ್, ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಯುಎಸ್‍ಟಿ ಕಂಪೆನಿ, 25 ರಾಷ್ಟ್ರಗಳಲ್ಲಿ ಮತ್ತು 35 ಕ್ಕೂ ಹೆಚ್ಚು ಕಚೇರಿಗಳನ್ನು ಹೊಂದಿದ್ದು, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಚೆನ್ನೈ, ತಿರುವನಂತಪುರಂ, ಕೊಚ್ಚಿ, ಪುಣೆ, ಕೊಯಂಬತ್ತೂರು, ಹೊಸೂರು ಮತ್ತು ದೆಹಲಿ ಎನ್‍ಸಿಆರ್‍ನಲ್ಲಿ ಸಾಫ್ಟ್‍ವೇರ್ ವಿತರಣಾ ಕೇಂದ್ರಗಳನ್ನು ಮೀಸಲಿಟ್ಟಿದೆ.


ಬೆಂಗಳೂರಿನಲ್ಲಿ ಉದ್ಯೋಗಿಗಳ ನೇಮಕಕ್ಕೆ ಹೆಚ್ಚು ಒತ್ತು

“ ಕಂಪೆನಿಯ ಜಾಗತಿಕ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ನಮ್ಮ ಭಾರತದ ಕಾರ್ಯಚರಣೆಯನ್ನು ವಿಸ್ತರಿಸಲು, ನಾವು ಉತ್ಸುಕರಾಗಿದ್ದೇವೆ. ಯುಎಸ್‍ಟಿಯಲ್ಲಿ, ಉತ್ತಮ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದೇವೆ, ಏಕೆಂದರೆ ಅವರು ಕಂಪೆನಿಗೆ ಅತ್ಯುತ್ತಮವಾದ ಡಿಜಿಟಲ್ ಕ್ರಾಂತಿಯನ್ನು ವಿಸ್ತರಿಸಲು ಮತ್ತು ಬೆಂಗಳೂರಿನಲ್ಲಿ ಉತ್ತಮ ಐಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಾಗ ನಮ್ಮ ಗ್ರಾಹಕರನ್ನು ಬೆಂಬಲಿಸಲು ಕಂಪೆನಿಗೆ ಅವಕಾಶವನ್ನು ಒದಗಿಸುತ್ತಾರೆ” ಎಂದು ಯುಎಸ್‍ಟಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮತ್ತು ಭಾರತ – ದೇಶೀಯ ಮುಖ್ಯಸ್ಥ ಅಲೆಕ್ಸಾಂಡರ್ ವರ್ಗೀಸ್ ಅವರು ಹೇಳಿದ್ದಾರೆ.



“ಬೆಂಗಳೂರು ಮತ್ತು ಭಾರತದ ವಿವಿಧ ಶ್ರೇಣಿ 1 ಮತ್ತು 2 ನಗರಗಳಲ್ಲಿ ನಮ್ಮ ಬೆಳವಣಿಗೆಯು ಇದಕ್ಕೆ ಸಾಕ್ಷಿಯಾಗಿದೆ. ಹೆಚ್ಚುವರಿಯಾಗಿ, ನಮ್ಮ ಸಾಮರ್ಥ್ಯಗಳ ಮಧ್ಯಭಾಗದಲ್ಲಿರುವ ಡಿಜಿಟಲ್‍ನೊಂದಿಗೆ, ನಾವು ಉದ್ಯಮದ ಪ್ರಮುಖ ಕಲಿಕೆಯ ಅವಕಾಶಗಳು, ಉದ್ಯಮಶೀಲತೆಯ ಕೆಲಸದ ಸಂಸ್ಕೃತಿ ಮತ್ತು ನಮ್ಮ ಉದ್ಯೋಗಿಗಳಿಗೆ ಮಾಕ್ರ್ಯೂ ಗ್ರಾಹಕರ ಪ್ರವೇಶವನ್ನು ಒದಗಿಸುತ್ತದೆ” ಎಂದು ಯುಎಸ್‍ಟಿ ಬೆಂಗಳೂರಿನ ಕೇಂದ್ರ ಮುಖ್ಯಸ್ಥ ಮತ್ತು ಭಾರತ, ಜಿಸಿಸಿ, ಈಶಾನ್ಯ, ಏಷ್ಯಾ ಉದ್ಯಮ ಘಟಕದ ಜನರಲ್ ಮ್ಯಾನೇಜರ್ ಹಾಗೂ ಮುಖ್ಯಸ್ಥ ಮಂಜು ಶಿವರಾಜನ್ ಹೇಳಿದ್ದಾರೆ.


ಇದನ್ನು ಓದಿ: India Post Recruitment 2021: PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ; ಮಾಸಿಕ ವೇತನ ₹ 81,100

ಈ ವರ್ಷ ವಿಶ್ವಾದ್ಯಂತ 10 ಸಾವಿರ ಉದ್ಯೋಗಿಗಳ ನೇಮಕ

ಯುಎಸ್‍ಟಿಯು ಈ ವರ್ಷ ಜಗತ್ತಿನಾದ್ಯಂತ, ಡಿಜಿಟಲ್ ಟ್ರಾನ್ಸ್‍ಫಮೇಶನ್, ಸೈಬರ್ ಸೆಕ್ಯುರಿಟಿ, ಕ್ಲೌಡ್ ಇನ್‍ಫ್ರಾಸ್ಟ್ರಕ್ಚರ್, ಜಾವಾ, ಡೇಟಾ ಸೈನ್ಸ್ ಮತ್ತು ಇಂಜಿನಿಯರಿಂಗ್ ಅಪ್ಲಿಕೇಸನ್ ಡೆವಲಪ್‍ಮೆಂಟ್ ಮತ್ತು ಮಾರ್ಡನೈಸೇಶನ್ ,ಎಐ/ಎಂಎಲ್, ಆಟೋಮೇಶನ್ (ಆರ್‍ಪಿಎ/ಐಪಿಎ)ನಲ್ಲಿ ಡಿಜಿಟಲ್ ಪ್ರಾವಿಣ್ಯತೆಗಳು ಹಾಗೂ ನಿರ್ಣಾಯಕ ಕೌಶಲ್ಯಗಳನ್ನು ಹೊಂದಿರುವ 10,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಪ್ರಕಟಿಸಿದೆ.

Published by:Latha CG
First published: