Amazon is Hiring: ಬಿಇ, ಬಿ ಟೆಕ್ ಆದವರಿಗೆ Amazonನಲ್ಲಿ ಉದ್ಯೋಗ, ಮಾಸಿಕ ವೇತನ ₹ 45,000

ಸಾಫ್ಟ್​​ವೇರ್ ಸಪೋರ್ಟ್​ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು. ಫ್ರೆಶರ್ಸ್​ ಕೂಡ ಅರ್ಜಿ ಸಲ್ಲಿಸಬಹುದು.

Amazon

Amazon

  • Share this:
Amazon is Hiring: ಟೆಕ್​ ದೈತ್ಯ ಅಮೆಜಾನ್(Amazon)​ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಸಾಫ್ಟ್​​ವೇರ್ ಸಪೋರ್ಟ್​ ಎಂಜಿನಿಯರ್(Software Support Engineer) ಹುದ್ದೆ ಖಾಲಿ ಇದ್ದು, ಅಮೆಜಾನ್​ನಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಹಾಕಬಹುದು ಎಂದು ತನ್ನ ಅಧಿಕೃತ ವೆಬ್​ಸೈಟ್(Website)​​ನಲ್ಲಿ ತಿಳಿಸಿದೆ. ಹೀಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅಮೆಜಾನ್​ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.













































ಸಂಸ್ಥೆಅಮೆಜಾನ್
ಹುದ್ದೆಯ ಹೆಸರುಸಾಫ್ಟ್​​ವೇರ್ ಸಪೋರ್ಟ್​ ಎಂಜಿನಿಯರ್
ಒಟ್ಟು ಹುದ್ದೆಗಳು01
ವಿದ್ಯಾರ್ಹತೆಎಂಜಿನಿಯರಿಂಗ್ (ಬಿಇ, ಬಿ.ಟೆಕ್)
ವೇತನಮಾಸಿಕ ₹ 45,000
ಅನುಭವ0-2 ವರ್ಷ
ಉದ್ಯೋಗದ ಸ್ಥಳಚೆನ್ನೈ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ24/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ31/12/2021



ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/12/2021

ಇದನ್ನೂ ಓದಿ: KPSC ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 82,400 ಸಂಬಳ

ವಿದ್ಯಾರ್ಹತೆ:
ಸಾಫ್ಟ್​​ವೇರ್ ಸಪೋರ್ಟ್​ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.

ಅನುಭವ:
ಸಾಫ್ಟ್​​ವೇರ್ ಸಪೋರ್ಟ್​ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು. ಫ್ರೆಶರ್ಸ್​ ಕೂಡ ಅರ್ಜಿ ಸಲ್ಲಿಸಬಹುದು.

ಉದ್ಯೋಗದ ಸ್ಥಳ:
ಸಾಫ್ಟ್​​ವೇರ್ ಸಪೋರ್ಟ್​ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಮಿಳುನಾಡಿನ ಚೆನ್ನೈನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಸಾಫ್ಟ್​​ವೇರ್ ಸಪೋರ್ಟ್​ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 45,000 ವೇತನ ನೀಡಲಾಗುತ್ತದೆ.

ಇದನ್ನೂ ಓದಿ: Indian Army Recruitment 2021: ತಿಂಗಳಿಗೆ ₹ 2,50,000 ಸಂಬಳ, BE, B Tech ಪಾಸಾದವರಿಗೆ ಇಂಡಿಯನ್ ಆರ್ಮಿಯಲ್ಲಿ ಉದ್ಯೋಗ

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಬಳಿಕ ಅಮೆಜಾನ್ ಮೆರಿಟ್​ ಲಿಸ್ಟ್​​ ಪ್ರಕಟ ಮಾಡುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅಭ್ಯರ್ಥಿಗಳು ಡಿಸೆಂಬರ್ 31ರೊಳಗೆ ಆನ್​ಲೈನ್​ ಮೂಲಕ ಸಾಫ್ಟ್​​ವೇರ್ ಸಪೋರ್ಟ್​ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಬೇಕು.
Published by:Latha CG
First published: