ಉದ್ಯೋಗ (Job) ಎಂಬುದು ಮನುಷ್ಯನಿಗೆ ಹಣಗಳಿಸುವ (Money) ಒಂದು ದಾರಿ ಎಂಬುದು ಮಾತ್ರವಲ್ಲದೆ ಸಮಾಜದಲ್ಲಿ ಸ್ಥಾನಮಾನವನ್ನು (Social Status) ಒದಗಿಸುತ್ತದೆ. ಉದ್ಯೋಗ ಯಾವುದಾಗಿದ್ದರೂ ಅದನ್ನು ನಿರ್ವಹಿಸುವ ಕುಶಾಗ್ರತೆ, ತೀಕ್ಷ್ಣತೆ, ಪಕ್ವತೆ ನಮ್ಮಲ್ಲಿರಬೇಕಾಗುತ್ತದೆ. ಏಕೆಂದರೆ ಕೆಲವೊಂದು ಉದ್ಯೋಗಗಳು ತುಂಬಾ ಮಹತ್ವದ್ದಾಗಿದ್ದು ಅದರದ್ದೇ ಆದ ಜವಾಬ್ದಾರಿಗಳನ್ನು ಹೊಂದಿದೆ. ಹೊರದೇಶಗಳಲ್ಲಿ ಹೆಚ್ಚು ಜನಪ್ರಿಯ (Popular) ಪಡೆದುಕೊಂಡಿರುವ ಉದ್ಯೋಗ ಎಂದರೆ ಡಾಗ್ ಸಿಟ್ಟಿಂಗ್ (Dog-Sitting Job) ಆಗಿದ್ದು, ಯುಎಸ್ (United States) ಹಾಗೂ ಯುಕೆಗಳಲ್ಲಿ (United Kingdom) ಡಾಗ್ ಸಿಟ್ಟಿಂಗ್ (Dog Sitting) ಜನರಿಗೆ ಹೆಚ್ಚುವರಿ ಹಣ ಗಳಿಸುವ ಉದ್ಯೋಗ ಎಂದೆನಿಸಿದೆ.
ಹೆಚ್ಚಿನ ನಿವಾಸಿಗಳು ಈ ಉದ್ಯೋಗದಿಂದ ಹೆಚ್ಚುವರಿ ಹಣ ಗಳಿಸುತ್ತಿದ್ದು ಸಂಬಳದೊಂದಿಗೆ ಈ ಉದ್ಯೋಗ ಉಪವೃತ್ತಿಯಾಗಿ ಖ್ಯಾತಿಗಳಿಸಿದೆ. 33 ವರ್ಷದ ಇಂಗ್ಲೆಂಡ್ ನಿವಾಸಿ ಫ್ರಾನ್ಸೆಸ್ಕಾ, ಡಾಗ್ ಸಿಟ್ಟಿಂಗ್ ಉದ್ಯೋಗದಿಂದ ರೂ. 9.96 ಲಕ್ಷ ಪಾವತಿಸಿದ್ದಾರೆ ಎಂದರೆ ಈ ಉದ್ಯೋಗಕ್ಕಿರುವ ಮಹತ್ವವನ್ನು ಅರಿತುಕೊಳ್ಳಬಹುದಾಗಿದೆ.
ಇಂಗ್ಲೆಂಡಿನ ಗ್ಲೌಸೆಸ್ಟರ್‌ಶೈರ್‌ನ ಫ್ರಾನ್ಸೆಸ್ಕಾ ಒಂದು ಮಗುವಿನ ತಾಯಿ ಕೂಡ ಆಗಿದ್ದು, ಡಾಗ್ ಸಿಟ್ಟಿಂಗ್ ಉದ್ಯೋಗದಿಂದ ಒಂದೂವರೆ ವರ್ಷದಲ್ಲಿ 2.98 ಲಕ್ಷ ರೂಪಾಯಿ ಹಣ ಸಂಪಾದಿಸಿದ್ದಾರೆ. ನಾಯಿಗಳನ್ನು ನೋಡಿಕೊಳ್ಳುವ ತನ್ನ ಅರೆಕಾಲಿಕ ಕೆಲಸದ ಮೂಲಕ ಸಾಲದ ಮೂರನೇ ಒಂದು ಭಾಗವನ್ನು ಪಾವತಿಸಿದ್ದಾರೆ ಎಂದು ತಿಳಿಸಿದ್ದಾರೆ.
ಡಾಗ್ ಸಿಟ್ಟಿಂಗ್ ಎಂದರೇನು?
ತಮಗಾಗಿ ಹಾಗೂ ಮಗಳ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಉದ್ಯೋಗ ಹುಡುಕುವ ಸನ್ನಾಹದಲ್ಲಿದ್ದಾಗ ಫ್ರಾನ್ಸಿಸ್ಕಾ ಈ ಉದ್ಯೋಗವನ್ನು ಗೂಗಲ್‌ನಲ್ಲಿ ಕಂಡುಕೊಂಡಿದ್ದಾರೆ ಅಂತೆಯೇ ಡಾಗ್ ಸಿಟ್ಟಿಂಗ್ ಕೆಲಸ ಗಮನಸೆಳೆಯಿತು ಎಂದು ತಿಳಿಸಿದ್ದಾರೆ.
ಡಾಗ್ ಸಿಟ್ಟಿಂಗ್ ಎಂಬುದು ಯಾರದ್ದಾದರೂ ನಾಯಿಯನ್ನು ನೋಡಿಕೊಳ್ಳುವ ಕೆಲಸವಾಗಿದೆ. ನಾಯಿ ನೋಡಿಕೊಳ್ಳುವವರು ನಾಯಿಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ನಾಯಿಯ ಮಾಲೀಕರು ಬರುವವರೆಗೆ ನೋಡಿಕೊಳ್ಳಬೇಕಾಗುತ್ತದೆ.
ಫ್ರಾನ್ಸೆಸ್ಕಾ 2016 ರಲ್ಲಿ ವೃತ್ತಿಯನ್ನು ಆರಂಭಿಸಿದರು ಹಾಗೂ ಈ ಉದ್ಯೋಗವನ್ನು ನಿರಾಯಾಸವಾಗಿ ಮಾಡಬಹುದು ಎಂದು ಫ್ರಾನ್ಸೆಸ್ಕಾ ತಿಳಿಸಿದ್ದಾರೆ. ನನ್ನ ಮಗಳು ನಾಯಿ ಸಾಕಬೇಕೆಂದು ಕೇಳುತ್ತಿರುವಾಗಲೇ ಈ ಉದ್ಯೋಗ ನನಗಾಗಿಯೇ ಹೇಳಿ ಮಾಡಿಸಿದಂತೆ ದೊರಕಿತು. ಏಕೆಂದರೆ ಆ ಸಮಯದಲ್ಲಿ ನಾಯಿಯನ್ನು ಖರೀದಿಸುವಷ್ಟು ಹಣ ನನ್ನ ಬಳಿ ಇರಲಿಲ್ಲ ಎಂದು ಫ್ರಾನ್ಸೆಸ್ಕಾ ತಿಳಿಸಿದ್ದಾರೆ.
ತುಂಬಾ ಉಲ್ಲಾಸದಾಯಕ ಕೆಲಸ
ಫ್ರಾನ್ಸೆಸ್ಕಾ ಚಿಕ್ಕವರಿದ್ದಾಗ ಅವರ ಬಳಿ ನಾಯಿ ಇತ್ತು ಹಾಗಾಗಿ ನಾಯಿಯನ್ನು ನೋಡಿಕೊಳ್ಳುವುದು ನನಗೇನೂ ಕಷ್ಟಕರವಲ್ಲ ಎಂದು ತಿಳಿಸಿದ್ದಾರೆ. ಈ ಉದ್ಯೋಗದಿಂದ ನನ್ನ ಮಗಳಿಗೂ ನಾಯಿಯೊಂದಿಗೆ ಆಡಬಹುದಾಗಿದೆ ಹಾಗೂ ಇದಕ್ಕಾಗಿ ಹೆಚ್ಚುವರಿ ಶುಲ್ಕ ನೀಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ನಾಯಿಯನ್ನು ನೋಡಿಕೊಳ್ಳುವ ಟೈಲ್‌ಸ್ಟರ್ ವೆಬ್‌ಸೈಟ್‌ಗೆ ಫ್ರಾನ್ಸೆಸ್ಕಾ ಭೇಟಿ ನೀಡಿದ್ದು ಅನೇಕ ನಾಯಿ ಮಾಲೀಕರ ಬಳಿ ಫ್ರಾನ್ಸೆಸ್ಕಾ ಕೆಲಸ ಮಾಡಿದ್ದಾರೆ.
ಡಾಗ್ ಸಿಟ್ಟಿಂಗ್ ಉದ್ಯೋಗದ ಪ್ರಕ್ರಿಯೆ ಹೇಗೆ?
ಈ ಉದ್ಯೋಗದ ಪ್ರಕ್ರಿಯೆ ಹೇಗೆ ಎಂಬುದನ್ನು ವಿವರಿಸಿರುವ ಫ್ರಾನ್ಸಿಸ್ಕಾ, ನಾಯಿಯ ಮಾಲೀಕರು ಲ್ಯಾಬ್ರಡಾರ್‌ನಂತಹ ನಾಯಿಯನ್ನು ಹೊಂದಿದ್ದಾರೆಂದು ಸೈಟ್‌ನಲ್ಲಿ ಹಾಕುತ್ತಾರೆ ಹಾಗೂ ತಮ್ಮ ನಾಯಿಯನ್ನು ಈ ದಿನಾಂಕಗಳಂದು ನೋಡಿಕೊಳ್ಳಬೇಕು ಎಂದು ನಮೂದಿಸುತ್ತಾರೆ. ಆ ಸಮಯದಲ್ಲಿ ಇದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ನಾವು ಉಲ್ಲೇಖಿಸಬೇಕು. ಅವರಿಗೆ ಯಾವುದು ಸೂಕ್ತ ಎಂದೆನ್ನಿಸುತ್ತದೆಯೋ ಆ ವೆಚ್ಚವನ್ನು ಮಾಲೀಕರು ಆಯ್ಕೆಮಾಡುತ್ತಾರೆ ಎಂದು ಫ್ರಾನ್ಸೆಸ್ಕಾ ತಿಳಿಸಿದ್ದಾರೆ.
ಹೆಚ್ಚುವರಿ ಹಣ ಸಂಪಾದನೆಯ ಮಾರ್ಗ
ಈ ಉದ್ಯೋಗದಲ್ಲಿ ತನ್ನ ಅಚ್ಚುಮೆಚ್ಚಿನ ಕೆಲಸ ಅವುಗಳನ್ನು ವಾಕಿಂಗ್ ಮಾಡಿಸುವುದಾಗಿದೆ ಎಂದು ಫ್ರಾನ್ಸೆಸ್ಕಾ ತಿಳಿಸಿದ್ದಾರೆ. ವೃತ್ತಿ ಆರಂಭಿಸಿದ ಒಂದೂವರೆ ವರ್ಷದಲ್ಲಿ 20 ನಾಯಿಗಳನ್ನು ನೋಡಿಕೊಂಡಿರುವುದಾಗಿ ಫ್ರಾನ್ಸೆಸ್ಕಾ ತಿಳಿಸಿದ್ದು, ಇದರಿಂದ ಬಂದ ಹಣದಿಂದಲೇ ಸಾಲಗಳನ್ನೆಲ್ಲಾ ತೀರಿಸಿ 2017 ರ ವೇಳೆಗೆ ಸಾಲ ಮುಕ್ತರಾದರು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ