AAI Recruitment: ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ; ಕರ್ನಾಟಕ ವೃಂದ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಕಿರಿಯ ಮತ್ತು ಹಿರಿಯ ಸಹಾಯಕ ಸೇರಿದಂತೆ ಒಟ್ಟು 156 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ

  • Share this:
    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ (Airports Authority of India) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕಿರಿಯ ಮತ್ತು ಹಿರಿಯ ಸಹಾಯಕ ಸೇರಿದಂತೆ ಒಟ್ಟು 156 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಪುದುಚೇರಿ, ಲಕ್ಷದ್ವೀಪದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಕೇಂದ್ರ ಸರ್ಕಾರದ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 30 ಆಗಿದೆ.

    ಸಂಸ್ಥೆಯ ಹೆಸರು: ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI)
    ಹುದ್ದೆಯ ಹೆಸರು: ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್
    ಹುದ್ದೆಗಳ ಸಂಖ್ಯೆ: 156
    ಉದ್ಯೋಗ ಸ್ಥಳ: ಅಖಿಲ ಭಾರತ
    ವೇತನ: 31000-110000 ರೂ. ಪ್ರತಿ ತಿಂಗಳು

































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ)132ಮೆಕಾನಿಕಲ್​, ಆಟೋಮೊಬೈಲ್​ನಲ್ಲಿ ಡಿಪ್ಲೊಮಾ31000-92000 ರೂ ಮಾಸಿಕ
    ಕಿರಿಯ ಸಹಾಯಕ (ಕಚೇರಿ)10ಪದವಿ31000-92000 ರೂ ಮಾಸಿಕ
    ಹಿರಿಯ ಸಹಾಯಕ (ಖಾತೆಗಳು) 1313ಬಿಕಾಂ36000-110000 ರೂ ಮಾಸಿಕ
    ಹಿರಿಯ ಸಹಾಯಕ (ಅಧಿಕೃತ ಭಾಷೆ) 11ಸ್ನಾತಕೋತ್ತರ ಪದವಿ36000-110000

    ವಯೋಮಿತಿ: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.

    ಇದನ್ನು ಓದಿ: ಆರ್ಮಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ; ಕರ್ನಾಟಕ ವಲಯದಲ್ಲೂ ಇದೆ ಹುದ್ದೆ

    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

    ಅರ್ಜಿ ಶುಲ್ಕ:
    ಆರೋಗ್ಯ ಮತ್ತು ನೈರ್ಮಲ್ಯ ವ್ಯವಸ್ಥೆ ಕೋವಿಡ್​ 19ಗೆ ಎಲ್ಲಾ ವಿದ್ಯಾರ್ಥಿಗಳು 90 ರೂ ಕಟ್ಟಬೇಕು.
    ಮಹಿಳೆಯರು, ಪ.ಜಾ, ಪ.ಪಂ ಮಾಜಿ ಸೈನಿಕರು, ವಿಕಲ ಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಒಬಿಸಿ ಮತ್ತು ಇತರೆ ಅಭ್ಯರ್ಥಿಗಳು: 1000 ರೂ

    ಪಾವತಿ ವಿಧಾನ: ಆನ್‌ಲೈನ್

    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ವ್ಯಾಪಾರ ಪರೀಕ್ಷೆ, ಟೈಪಿಂಗ್ ಪರೀಕ್ಷೆ

    ಇದನ್ನು ಓದಿ: ಕೊಪ್ಪಳದಲ್ಲಿದೆ 72 ಅಂಗನವಾಡಿ ಹುದ್ದೆ; ಇಲ್ಲಿದೆ ನೇಮಕಾತಿ ವಿವರ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01 ಸೆಪ್ಟೆಂಬರ್​​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್​​ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: aai.aero

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: