AAI Recruitment: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಕೆಲಸ ಮಾಡಬೇಕಾ; ಇಲ್ಲಿದೆ ಉತ್ತಮ ಅವಕಾಶ

ಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಬಹುದಾಗಿದೆ. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಅಕ್ಟೋಬರ್​ 31 ಆಗಿದೆ.

ವಿಮಾನ ನಿಲ್ದಾಣ ಪ್ರಾಧಿಕಾರ

ವಿಮಾನ ನಿಲ್ದಾಣ ಪ್ರಾಧಿಕಾರ

  • Share this:
    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ (Airports Authority of India) ಕೆಲಸ ಮಾಡಬೇಕು ಎಂಬ ಅಭ್ಯರ್ಥಿಗಳಿಗೆ ಇಲ್ಲಿದೆ ಉತ್ತಮ ಅವಕಾಶ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ 90 ಅಪ್ರೆಂಟಿಸ್​​​​ ಹುದ್ದೆಗಳಿಗೆ (Apprentices Posts ) ಅರ್ಜಿ ಆಹ್ವಾನಿಸಿದೆ. ಭಾರತ ಸರ್ಕಾರದ ನಿಯಂತ್ರಣದಲ್ಲಿ ಕೆಲಸ ಮಾಡುವ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಬಹುದಾಗಿದೆ. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಅಕ್ಟೋಬರ್​ 31 ಆಗಿದೆ.

































































    ಹುದ್ದೆಗಳು ಹುದ್ದೆ ಸಂಖ್ಯೆ
    ಸಿವಿಲ್​ (ಪದವೀಧರರು) 10
    ಸಿವಿಲ್​ (ಡಿಪ್ಲೋಮಾ) 7
    ಎಲೆಕ್ಟ್ರಿಕಲ್​ (ಪದವೀಧರರು) 9
    ಎಲೆಕ್ಟ್ರಿಕಲ್​ (ಡಿಪ್ಲೋಮಾ) 6
    ಎಲೆಕ್ಟ್ರಾನಿಕ್ಸ್ (ಪದವೀಧರರು) 3
    ಎಲೆಕ್ಟ್ರಾನಿಕ್ಸ್​​ (ಡಿಪ್ಲೋಮಾ)  13
    ಕಂಪ್ಯೂಟರ್​​ ಸೈನ್ಸ್​/ ಮಾಹಿತಿ ತಂತ್ರಜ್ಞಾನ (ಪದವೀಧರರು) 2
    ಕಂಪ್ಯೂಟರ್​​ ಸೈನ್ಸ್​/ ಮಾಹಿತಿ ತಂತ್ರಜ್ಞಾನ (ಡಿಪ್ಲೋಮಾ) 4
    ಆಟೋಮೊಬೈಲ್​​​/ಮ್ಯಾಕಾನಿಕಲ್​ (ಪದವೀಧರರು) 2
    ಆಟೋಮೊಬೈಲ್​​​/ಮ್ಯಾಕಾನಿಕಲ್ (ಡಿಪ್ಲೋಮಾ) 4
    ಏರೋನಾಟಿಕ್ಸ್​ / ಏರೋಸ್ಪೆಸ್​ (ಪದವೀಧರರು) 2
    ಏರೋನಾಟಿಕ್ಸ್​ / ಏರೋಸ್ಪೆಸ್​ (ಡಿಪ್ಲೋಮಾ) 2
    ಆರ್ಕಿಟೆಕ್ಟ್​ (ಪದವೀಧರರು) 4
    ಐಟಿಐ ಟ್ರೆಡ್ 24

    ವಯೋಮಿತಿ (Age limit)

    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 26 ಮೀರಿರಬಾರದು.
    ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದಂತೆ ವಯೋಮಿತಿ ಸಡಿಲಿಕೆ ಇದೆ.

    ಅರ್ಜಿ ಶುಲ್ಕ (application Fee)
    ಮೇಲ್ಕಂಡ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

    ಆಯ್ಕೆ ವಿಧಾನ (Selection Process)
    ಮೆರಿಟ್​ ಲಿಸ್ಟ್​, ಪ್ರಮಾಣ ಪತ್ರ ಪರಿಶೀಲನೆ, ಮೆಡಿಕಲ್​ ಸರ್ಟಿಫೀಕೆಟ್​ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಇದನ್ನು ಓದಿ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ; ತಿಂಗಳಿಗೆ 28,950ರವರೆಗೆ ಸಂಬಳ

    ವೇತನ (Salary)
    ಐಟಿಐ ಟ್ರೆಡ್​ ಹುದ್ದೆಗೆ 9000 ರೂ ಮಾಸಿಕ ವೇತನ, ಉಳಿದ ಹುದ್ದೆಗಳಿಗೆ 12000-15000

    ಇದನ್ನು ಓದಿ: ಮಂಡ್ಯ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನ

    ವಿಶೇಷ ಸೂಚನೆ: (special Instruction )
    ಮೇಲ್ಕಂಡ ಹುದ್ದೆಗಳು ಉತ್ತರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿದ್ದು, ದೇಶದ ಯಾವುದೇ ವಿಮಾನ ನಿಲ್ದಾಣದಲ್ಲೂ ಕಾರ್ಯ ನಿರ್ವಹಣೆ ಮಾಡಲು ಸಿದ್ದರಿರಬೇಕು.

    ಪ್ರಮುಖ ಲಿಂಕ್​ಗಳು (important link)
    ವಿಮಾನ ನಿಲ್ದಾಣ ಪ್ರಾಧಿಕಾರ ಹೊರಡಿಸಿರುವ ಪದವೀಧರರು ಮತ್ತು ಡಿಪ್ಲೋಮಾ ಅಪ್ರೆಂಟಿಸ್​ ಹುದ್ದೆ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ
    ವಿಮಾನ ನಿಲ್ದಾಣ ಪ್ರಾಧಿಕಾರ ಹೊರಡಿಸಿರುವ ಐಟಿಐ ಅಪ್ರೆಂಟಿಸ್​ ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿ
    ಪದವೀಧರರು ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್​ ಕ್ಲಿಕ್​ ಮಾಡಿ
    ಐಟಿಐ ಅಪ್ರೆಂಟಿಸ್​ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್​ ಕ್ಲಿಕ್​ ಮಾಡಿ
    Published by:Seema R
    First published: