AIISH Mysore Recruitment 2021: ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ ಮೈಸೂರು ( ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ & ಇಯರಿಂಗ್-All India Institute of Speech and Hearing) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನವಾಗಿದೆ. ಒಟ್ಟು 8 ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್(Library and Information Assistant), ಡೀನ್(Dean), ಮೆಡಿಕಲ್ ರೆಕಾರ್ಡ್ ಟೆಕ್ನಿಷಿಯನ್(Medical Records Technician), ನರ್ಸಿಂಗ್ ಸೂಪರಿಂಟೆಂಡೆಂಟ್(Nursing Superintendent), ಆಡೀಯೋಲಾಜಿಸ್ಟ್(Audiologist), ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್ ಗ್ರೇಡ್ II(Speech Language Pathologist grade-2), ಅಸಿಸ್ಟೆಂಟ್ ಗ್ರೇಡ್ II(Assistant grade-2), ಮಲ್ಟಿ ರಿಹಬಿಲಿಶೇಷನ್ ವರ್ಕರ್(Multi Rehabilitation Worker) ಹುದ್ದೆಗಳು ಖಾಲಿ ಇವೆ. 12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಎಂ.ಎಸ್ಸಿ, ಎಂಎಸ್ಸಿ, ಎಂಎಸ್, ಎಂಡಿ, ಪದವಿ, ಲೈಬ್ರರಿ ಸೈನ್ಸ್ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 29ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿರುವುದರಿಂದ ನಾಳೆಯೇ ಕೊನೆಯ ದಿಣಾಂಕವಾಗಿದ್ದು , ಇನ್ನೂ ಅರ್ಜಿಸದಿರುವವರು ಬೇಗ ಸಲ್ಲಿಸಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ. ಮೈಸೂರ್ |
ಹುದ್ದೆಯ ಹೆಸರು |
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್, ಡೀನ್, ಮೆಡಿಕಲ್ ರೆಕಾರ್ಡ್ ಟೆಕ್ನಿಷಿಯನ್, ನರ್ಸಿಂಗ್ ಸೂಪರಿಂಟೆಂಡೆಂಟ್, ಆಡೀಯೋಲಾಜಿಸ್ಟ್, ಸ್ಪೀಚ್ ಲಾಂಗ್ವೇಜ್ಪಾಥೋಲಾಜಿಸ್ಟ್ ಗ್ರೇಡ್ II, ಅಸಿಸ್ಟೆಂಟ್ ಗ್ರೇಡ್ II, ಮಲ್ಟಿ ರಿಹಬಿಲಿಶೇಷನ್ ವರ್ಕರ್ |
ಒಟ್ಟು ಹುದ್ದೆಗಳು |
08 |
ವಿದ್ಯಾರ್ಹತೆ |
10ನೇ ತರಗತಿ, 12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಎಂ.ಎಸ್ಸಿ, ಎಂಎಸ್ಸಿ, ಎಂಎಸ್, ಎಂಡಿ, ಪದವಿ, ಲೈಬ್ರರಿ ಸೈನ್ಸ್ ಪದವಿ |
ಸ್ಥಳ |
ಮೈಸೂರು |
ವೇತನ |
ನಿಯಮಾನುಸಾರ |
ಅರ್ಜಿ ಸಲ್ಲಿಸುವ ವಿಧಾನ |
ಆಫ್ಲೈನ್ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
07/12/2021 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/12/2021
ಹುದ್ದೆಯ ಮಾಹಿತಿ:
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-1
ಡೀನ್-1
ಮೆಡಿಕಲ್ ರೆಕಾರ್ಡ್ ಟೆಕ್ನಿಷಿಯನ್-1ನರ್ಸಿಂಗ್ ಸೂಪರಿಂಟೆಂಡೆಂಟ್-1
ಆಡೀಯೋಲಾಜಿಸ್ಟ್-1
ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್ ಗ್ರೇಡ್ II-1
ಅಸಿಸ್ಟೆಂಟ್ ಗ್ರೇಡ್ II-1
ಮಲ್ಟಿ ರಿಹಬಿಲಿಶೇಷನ್ ವರ್ಕರ್-1
ಇದನ್ನೂ ಓದಿ: Shivamogga Court Jobs: ತಿಂಗಳಿಗೆ ₹ 37,900 ಸಂಬಳ, SSLC ಪಾಸಾದವರಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ
ವಯೋಮಿತಿ:
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್- 30 ವರ್ಷದವರೆಗೆ
ಡೀನ್- 50 ವರ್ಷ
ಮೆಡಿಕಲ್ ರೆಕಾರ್ಡ್ ಟೆಕ್ನಿಷಿಯನ್-27 ವರ್ಷದವರೆಗೆ
ನರ್ಸಿಂಗ್ ಸೂಪರಿಂಟೆಂಡೆಂಟ್- 30 ವರ್ಷ
ಆಡೀಯೋಲಾಜಿಸ್ಟ್/ ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್ ಗ್ರೇಡ್ II- 30 ವರ್ಷ
ಅಸಿಸ್ಟೆಂಟ್ ಗ್ರೇಡ್ II-27 ವರ್ಷ
ಮಲ್ಟಿ ರಿಹಬಿಲಿಶೇಷನ್ ವರ್ಕರ್- 25 ವರ್ಷ
ವಿದ್ಯಾರ್ಹತೆ:
ಡೀನ್- ಸ್ನಾತಕೋತ್ತರ ಪದವಿ
ನರ್ಸಿಂಗ್ ಸೂಪರಿಂಟೆಂಡೆಂಟ್- ಎಂಎಸ್ಸಿ, ಬಿಎಸ್ಸಿ
ಆಡಿಯೋಲಾಜಿಸ್ಟ್/ಸ್ಪೀಚ್ ಲಾಂಗ್ವೇಜ್ ಫಾಥೋಲಾಜಿಸ್ಟ್ ಗ್ರೇಡ್- 2- ವಾಕ್ ಮತ್ತು ಶ್ರವಣ ಮಾಧ್ಯಮದಲ್ಲಿ ಬಿಎಸ್ಸಿ ಪದವಿ
ಲೈಬ್ರರಿ ಇನ್ಫರ್ಮೇಶನ್ ಅಸಿಸ್ಟೆಂಟ್- ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿವಿ/ಸಂಸ್ಥೆಯಲ್ಲಿ ಲೈಬ್ರರಿ & ಇನ್ಫರ್ಮೇಶನ್ ಸೈನ್ಸ್ನಲ್ಲಿ ಪದವಿ ಪಡೆದಿರಬೇಕು.
ಮೆಡಿಕಲ್ ರೆಕಾರ್ಡ್ಸ್ ಟೆಕ್ನಿಷಿಯನ್- ಮೆಡಿಕಲ್ ರೆಕಾರ್ಡ್ಸ್ನಲ್ಲಿ ಡಿಪ್ಲೋಮಾ ಮತ್ತು ಪದವಿ ಪಡೆದಿರಬೇಕು.
ಅಸಿಸ್ಟೆಂಟ್ ಗ್ರೇಡ್-2- ಯಾವುದೇ ಪದವಿಮಲ್ಟಿ ರಿಹಬಿಲಿಷನ್ ವರ್ಕರ್- ದ್ವಿತೀಯ ಪಿಯುಸಿ ಪಾಸ್
ಇದನ್ನೂ ಓದಿ: Police Recruitment 2021: ತಿಂಗಳಿಗೆ ₹ 22,000 ಸಂಬಳ, ಡಿಪ್ಲೋಮಾ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ
ವೇತನ:
ಡೀನ್- 7ನೇ ವೇತನ ಆಯೋಗದ 12ನೇ ಲೆವೆಲ್
ನರ್ಸಿಂಗ್ ಸೂಪರಿಂಟೆಂಡೆಂಟ್- 7ನೇ ವೇತನ ಆಯೋಗದ 8ನೇ ಲೆವೆಲ್ ಆಡಿಯೋಲಾಜಿಸ್ಟ್/ಸ್ಪೀಚ್ ಲಾಂಗ್ವೇಜ್ ಫಾಥೋಲಾಜಿಸ್ಟ್ ಗ್ರೇಡ್- 2- 7ನೇ ವೇತನ ಆಯೋಗದ 6ನೇ ಲೆವೆಲ್
ಲೈಬ್ರರಿ ಇನ್ಫರ್ಮೇಶನ್ ಅಸಿಸ್ಟೆಂಟ್- 7ನೇ ವೇತನ ಆಯೋಗದ 6ನೇ ಲೆವೆಲ್
ಮೆಡಿಕಲ್ ರೆಕಾರ್ಡ್ಸ್ ಟೆಕ್ನಿಷಿಯನ್- 7ನೇ ವೇತನ ಆಯೋಗದ 4ನೇ ಲೆವೆಲ್
ಅಸಿಸ್ಟೆಂಟ್ ಗ್ರೇಡ್-2- 7ನೇ ವೇತನ ಆಯೋಗದ 4ನೇ ಲೆವೆಲ್
ಮಲ್ಟಿ ರಿಹಬಿಲಿಷನ್ ವರ್ಕರ್- 7ನೇ ವೇತನ ಆಯೋಗದ 4ನೇ ಲೆವೆಲ್
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ