AIIMS Recruitment 2021: ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, MBBS ಪದವೀಧರರಿಗೆ ಅವಕಾಶ

ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿರಬೇಕು.

AIIMS

AIIMS

  • Share this:
AIIMS Mangalagiri Recruitment 2021: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(All India Institute of Medical Sciences) ಮಂಗಳಗಿರಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 24 ಜೂನಿಯರ್ ರೆಸಿಡೆಂಟ್(Junior Resident) ಹುದ್ದೆಗಳು ಖಾಲಿ ಇದ್ದು, MBBS ಪೂರ್ಣಗೊಳಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು AIIMS ಮಂಗಳಗಿರಿ(Mangalagiri) ಜನವರಿ 5ರಂದು ನಡೆಸಲಿರುವ ನೇರ ಸಂದರ್ಶನ(Walk-in-Interview)ದಲ್ಲಿ ಪಾಲ್ಗೊಳ್ಳಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.





































ಸಂಸ್ಥೆಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಂಗಳಗಿರಿ
ಹುದ್ದೆಯ ಹೆಸರುಜೂನಿಯರ್ ರೆಸಿಡೆಂಟ್
ಒಟ್ಟು ಹುದ್ದೆಗಳು24
ವಿದ್ಯಾರ್ಹತೆಎಂಬಿಬಿಎಸ್
ಉದ್ಯೋಗದ ಸ್ಥಳಗುಂಟೂರು
ವೇತನಮಾಸಿಕ ₹ 56,100
ಆಯ್ಕೆ ಪ್ರಕ್ರಿಯೆನೇರ ಸಂದರ್ಶನ
ಸಂದರ್ಶನ ನಡೆಯುವ ದಿನಾಂಕ05/01/2022



ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ದಿನಾಂಕ: 30/11/2021
ಸಂದರ್ಶನ ನಡೆಯುವ ದಿನಾಂಕ: 05/01/2022

ಇದನ್ನೂ ಓದಿ: KPSC ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 82,400 ಸಂಬಳ

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ- 1,000 ರೂ.
SC/ST- 500 ರೂ.
PWD- ಯಾವುದೇ ಶುಲ್ಕ ಇಲ್ಲ.

ವಿದ್ಯಾರ್ಹತೆ:
ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿರಬೇಕು.

ವಯೋಮಿತಿ:
ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 33 ವರ್ಷ ಮೀರಿರಬಾರದು.
SC/ST- 5 ವರ್ಷ ವಯೋಮಿತಿ ಸಡಿಲಿಕೆ
ಒಬಿಸಿ- 3 ವರ್ಷ ವಯೋಮಿತಿ ಸಡಿಲಿಕೆ
PWD- 10 ವರ್ಷ ವಯೋಮಿತಿ ಸಡಿಲಿಕೆ

ಉದ್ಯೋಗದ ಸ್ಥಳ:
ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 56,100 ರೂ. ವೇತನ ನೀಡಲಾಗುತ್ತದೆ.

ಇದನ್ನೂ ಓದಿ: Amazon is Hiring: ಬಿಇ, ಬಿ ಟೆಕ್ ಆದವರಿಗೆ Amazonನಲ್ಲಿ ಉದ್ಯೋಗ, ಮಾಸಿಕ ವೇತನ ₹ 45,000

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಸಂದರ್ಶನ ನಡೆಯುವ ದಿನಾಂಕ ಮತ್ತು ಸ್ಥಳ:
ಧರ್ಮಶಾಲಾ ಕಟ್ಟಡ,
ಏಮ್ಸ್​
ಮಂಗಳಗಿರಿ ಮೇನ್ ಕ್ಯಾಂಪಸ್
ಜನವರಿ 5, 2022ರಂದು ಬೆಳಗ್ಗೆ 8.30ಕ್ಕೆ ಹಾಜರಿರಬೇಕು.
Published by:Latha CG
First published: