Good News: ಕೇಂದ್ರ ಸರಕಾರಿ ಉದ್ಯೋಗಿಗಳ ಸಂಬಳದಲ್ಲಿ ಪುನಃ ಏರಿಕೆ ಸಂಭವ; ತುಟ್ಟಿಭತ್ಯೆಯಲ್ಲೂ ಹೆಚ್ಚಳ ಸಂಪೂರ್ಣ ವಿವರ ಇಲ್ಲಿದೆ..

ಪ್ರಸ್ತುತ ತುಟ್ಟಿಭತ್ಯೆಯುಶೇ 28ರಷ್ಟಿದೆ. ಮತ್ತೆ ಸರಕಾರವು 3% ಏರಿಕೆಯನ್ನು ಮಾಡಿದಲ್ಲಿ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ ಮೂಲ ವೇತನದಲ್ಲಿ 31% ಏರಿಕೆಯಾಗಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಹಬ್ಬದ ಕೊಡುಗೆಯಾಗಿ ಕೇಂದ್ರ ಸರಕಾರವು ತನ್ನ ಉದ್ಯೋಗಿಗಳಿಗೆ ಸಂತಸಕರ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರಕಾರದ ಉದ್ಯೋಗಿಗಳು ಹಾಗೆಯೇ ಪಿಂಚಣಿದಾರರು ತಮ್ಮ ತುಟ್ಟಿಭತ್ಯೆ (Dearness Allowance) ಹಾಗೂ ತುಟ್ಟಿ ಪರಿಹಾರ ಭತ್ಯೆ (Dearness Relief) ನಲ್ಲಿ ಮತ್ತೊಮ್ಮೆ ಹೆಚ್ಚಳವನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಸರಕಾರ ಘೋಷಿಸಿದ್ದು, ಸರಕಾರವು ಇತ್ತೀಚೆಗೆ ತಾನೇ ಉದ್ಯೋಗಿಗಳಿಗಾಗಿ ತುಟ್ಟಿಭತ್ಯೆಯನ್ನು ಮರುಸ್ಥಾಪಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಹಿಂದೆ 17% ರಷ್ಟಿದ್ದ ತುಟ್ಟಿ ಭತ್ಯೆಯು ಹೆಚ್ಚಳದ ನಂತರ ಪ್ರಸ್ತುತ 28% ವಾಗಿದೆ. ಈ ಏರಿಕೆಯನ್ನು ಜುಲೈ 2021 ನಂತರದ ವೇತನಗಳಿಗೆ ಜಾರಿಗೆ ತರಲಾಯಿತು.

ಸರಕಾರವು ಈ ಏರಿಕೆಯನ್ನು ಇಲ್ಲಿಗೆ ನಿಲ್ಲಿಸದೆಯೇ ಕೇಂದ್ರ ಸರಕಾರಿ ಉದ್ಯೋಗಿಗಳು ಹೌಸ್ ರೆಂಟ್ ಅಲೊವೆನ್ಸ್ (ಮನೆ ಬಾಡಿಗೆ ಭತ್ಯೆ) ಯಲ್ಲಿ 24% ದಿಂದ 27% ಕ್ಕೆ ಹೋಗುವ ಸಂಭವವಿದೆ. ಇದಲ್ಲದೆ ಕೇಂದ್ರ ಸರಕಾರಿ ಉದ್ಯೋಗಿಗಳು ಹೆಚ್ಚುವರಿ 3% ಏರಿಕೆಯನ್ನು ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರ ಭತ್ಯೆಯಲ್ಲಿ ಪಡೆಯುವ ನಿರೀಕ್ಷೆ ಇದೆ. ಬಹಳ ಹಿಂದಿನಿಂದಲೂ ಈ ಹೆಚ್ಚಳವು ಊಹಾಪೋಹ ಹಾಗೂ ಹೆಚ್ಚು ನಿರೀಕ್ಷೆಯ ಸುದ್ದಿಮೂಲವಾಗಿದೆ. ತುಟ್ಟಿಭತ್ಯೆಯಲ್ಲಿ 3% ಹೆಚ್ಚಳ ಎಂದರೆ ಮೂಲ ವೇತನದಲ್ಲಿ ಒಟ್ಟು 31% ಏರಿಕೆಯಾದಂತೆ.

ತುಟ್ಟಿಭತ್ಯೆ ಏರಿಕೆ ಯಾವಾಗ ಸಾಧ್ಯತೆ:

ಈ ಕುರಿತು ಸರಕಾರವು ಅಧಿಕೃತ ಘೋಷಣೆಯನ್ನು ಶೀಘ್ರದಲ್ಲಿಯೇ ಮಾಡಲಿದೆ ಎಂದು ನೌಕರರ ಸಂಘಗಳು ನಿರೀಕ್ಷಿಸುತ್ತಿವೆ. ಅಂತಿಮ ಸಂಖ್ಯೆ 121.7 ಕ್ಕೆ ಬಿಟ್ಟಿದ್ದು, ಜೂನ್ 2021 ರ ಇಂಡೆಕ್ಸ್ ದರವನ್ನು 1.1 ಪಾಯಿಂಟ್‌ಗಳಿಗೆ ಹೆಚ್ಚಿಸಿರುವುದರಿಂದ ತುಟ್ಟಿ ಭತ್ಯೆಯನ್ನು 31% ದಲ್ಲಿ ಪಾವತಿಸಬೇಕಾಗುತ್ತದೆ ಎಂದು AICPI ಡೇಟಾ ಸಲಹೆ ಮಾಡಿರುವುದನ್ನು ತಳ್ಳಿಹಾಕುವಂತಿಲ್ಲ. ತುಟ್ಟಿಭತ್ಯೆಯ ಏರಿಕೆಯನ್ನು ವರ್ಷದ ಮೊದಲಾರ್ಧದಲ್ಲಿ ಅಂದರೆ ಸಪ್ಟೆಂಬರ್‌ನಲ್ಲಿ ಘೋಷಿಸಲಾಗುತ್ತದೆ ಎಂಬುದಾಗಿ ನಿರೀಕ್ಷಿಸಲಾಗಿದೆ. ಸರಕಾರವು ಏರಿಕೆಯನ್ನು ಯಾವಾಗ ಘೋಷಿಸಲಿದೆ ಎಂಬುದನ್ನು ಕುರಿತು ಯಾವುದೇ ವಿವರಗಳಿಲ್ಲ.

ಸಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದಲ್ಲಿ, ಅಕ್ಟೋಬರ್ ವೇತನದಲ್ಲಿ ನಂತರದ ಹೆಚ್ಚಳವು ಬರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಇನ್ನು ನೌಕರರ ಸಂಘವು ತುಟ್ಟಿಭತ್ಯೆ ಹೆಚ್ಚಳವನ್ನು ಸಪ್ಟೆಂಬರ್ ವೇತನದಲ್ಲಿ ಸೇರಿಸಬೇಕೆಂದು ಭಾವಿಸುತ್ತದೆ.

ಇದನ್ನು ಓದಿ: ಹಾಸನದಲ್ಲಿ ಕಂಪಿಸಿದ ಭೂಮಿ; ಆತಂಕ ಬೇಡ ಎಂದ ಅಧಿಕಾರಿಗಳು

ರಾಜ್ಯಗಳು ಏರಿಕೆಯನ್ನು ಹೇಗೆ ಮಾಡಿವೆ:

ಸರಕಾರವು ವೇತನದಲ್ಲಿ 28% ಏರಿಕೆಯನ್ನು ಮಾಡುವುದಾಗಿ ಘೋಷಿಸಿದ ನಂತರ ಹಲವಾರು ರಾಜ್ಯಗಳು ಈ ನಿಟ್ಟಿನಲ್ಲಿ ಮುಂದೆ ಬಂದು ತಮ್ಮ ಸರಕಾರಿ ಉದ್ಯೋಗಿಗಳಿಗೂ ತುಟ್ಟಿಭತ್ಯೆಯನ್ನು ಏರಿಸಿದವು. ಉತ್ತರ ಪ್ರದೇಶ, ಜಮ್ಮು ಹಾಗೂ ಕಾಶ್ಮೀರ, ಅಸ್ಸಾಂ, ಜಾರ್ಖಂಡ್, ಹರಿಯಾಣ, ಕರ್ನಾಟಕ ಮತ್ತು ರಾಜಸ್ಥಾನದಂತಹ ರಾಜ್ಯಗಳು ಕಾರ್ಮಿಕರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಿಸುವುದಾಗಿ ಹೇಳಿವೆ. ಕೆಲವು ರಾಜ್ಯಗಳು ಕೇಂದ್ರ ಸರಕಾರದ ಏರಿಕೆಗೆ ಸರಿಹೊಂದುವಂತೆ 28% ಕ್ಕೆ ಏರಿಸಿದರೂ ಕೆಲವೊಂದು ವಿನಾಯಿತಿಗಳನ್ನು ನೀಡಿವೆ. ಉದಾ ಕರ್ನಾಟಕ ತುಟ್ಟಿಭತ್ಯೆಯನ್ನು 21.5% ಮಾತ್ರವೇ ಏರಿಸಿದ್ದು ಕೋವಿಡ್ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ನಷ್ಟಗಳ ಹಿನ್ನಲೆಯಿಂದ ಈ ಹಿಂದೆ ತುಟ್ಟಿಭತ್ಯೆಯನ್ನು ಸ್ಥಗಿತಗೊಳಿಸಿತ್ತು.

ತುಟ್ಟಿಭತ್ಯೆ ಏರಿಕೆಯ ವಿವರ ಹೀಗಿದೆ:

ಪ್ರಸ್ತುತ ತುಟ್ಟಿಭತ್ಯೆಯುಶೇ 28ರಷ್ಟಿದೆ. ಮತ್ತೆ ಸರಕಾರವು 3% ಏರಿಕೆಯನ್ನು ಮಾಡಿದಲ್ಲಿ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ ಮೂಲ ವೇತನದಲ್ಲಿ 31% ಏರಿಕೆಯಾಗಲಿದೆ. ಈ ಅಂಶವನ್ನು ಗಮನಲ್ಲಿಟ್ಟುಕೊಂಡ ಲೆಕ್ಕಹಾಕಿದಾಗ ಉದಾಹರಣೆಗೆ ಪ್ರತೀ ತಿಂಗಳಿಗೆ ಮಾಸಿಕ ವೇತನವು ರೂ 20,00 ವಾಗಿದ್ದಲ್ಲಿ 3% ಏರಿಕೆ ಎಂದರೆ ರೂ 600 ಆಗುತ್ತದೆ. ಹಾಗಾಗಿ ಉದ್ಯೋಗಿಯು ಮೂಲ ವೇತನದಲ್ಲಿ ರೂ 600 ಅನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತಾರೆ. ನಾವು 31% ಏರಿಕೆಯನ್ನು ಪರಿಗಣಿಸಿದಲ್ಲಿ ಸಂಬಳದಲ್ಲಿ ಏರಿಕೆಯು ರೂ 6,200 ಆಗುತ್ತದೆ ಈ ಮೊತ್ತವನ್ನು ಉದ್ಯೋಗಿ ಹಾಗೂ ಪಿಂಚಣಿದಾರರು ಪಡೆಯುತ್ತಾರೆ. ಈ ಹಬ್ಬದ ಸಮಯದಲ್ಲಿ ಸರಕಾರಿ ನೌಕರರಿಗೆ ಭರ್ಜರಿ ಉಡುಗೊರೆ ದೊರೆಯುವುದಂತೂ ನಿಜವಾಗಿದೆ.
First published: