• Home
  • »
  • News
  • »
  • jobs
  • »
  • Government Job: ಬಿಎಸ್ಸಿ ಆಗಿದ್ರೆ ಸರ್ಕಾರಿ ಉದ್ಯೋಗ, ತಿಂಗಳಿಗೆ 40 ಸಾವಿರ ಸಂಬಳ

Government Job: ಬಿಎಸ್ಸಿ ಆಗಿದ್ರೆ ಸರ್ಕಾರಿ ಉದ್ಯೋಗ, ತಿಂಗಳಿಗೆ 40 ಸಾವಿರ ಸಂಬಳ

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

AHVS Karnataka recruitment 2022: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 4, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಇರಬೇಕು.

  • Share this:

    AHVS Karnataka recruitment 2022: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ-ಕರ್ನಾಟಕ ಸರ್ಕಾರ(Animal Husbandry & Veterinary Services Karnataka) ಖಾಲಿ ಇರುವ 250 ಪಶು ವೈದ್ಯಕೀಯ ಸಹಾಯಕರ(Veterinary Assistant) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ(Application) ಆಹ್ವಾನಿಸಿದೆ. ಸರ್ಕಾರಿ ಉದ್ಯೋಗ ಪಡೆಯಲು ಕನಸು ಕಾಣುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ನವೆಂಬರ್ 4, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಆನ್​ಲೈನ್​ (Online) ಮೂಲಕ ಅರ್ಜಿ ಹಾಕಿ ರಾಜ್ಯ ಸರ್ಕಾರದ ಉದ್ಯೋಗ ಗಿಟ್ಟಿಸಿಕೊಳ್ಳಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ-ಕರ್ನಾಟಕ ಸರ್ಕಾರ
    ಹುದ್ದೆಯ ಹೆಸರುಪಶು ವೈದ್ಯಕೀಯ ಸಹಾಯಕ
    ಒಟ್ಟು ಹುದ್ದೆ250
    ವಿದ್ಯಾರ್ಹತೆಬಿಎಸ್ಸಿ, ಬಿವಿಎಸ್ಸಿ
    ಸ್ಥಳಕರ್ನಾಟಕ
    ವೇತನಮಾಸಿಕ ₹ 21,400-42,000
    ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ05/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನ04/11/2022


    ಅರ್ಹತಾ ಮಾನದಂಡಗಳು:


    ಶೈಕ್ಷಣಿಕ ಅರ್ಹತೆ:
    ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ವಿ.ಎಸ್ಸಿ, ಬಿ.ವಿ.ಎಸ್ಸಿ(ಎಎಚ್​), ಬಿಎಸ್ಸಿ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ:Karnataka Jobs: ತಿಂಗಳಿಗೆ 20,000 ಸಂಬಳ, ದಕ್ಷಿಣ ಕನ್ನಡದಲ್ಲಿ ಉದ್ಯೋಗ, B.Sc ಆದವರಿಗೆ ಅವಕಾಶ


    ವಯೋಮಿತಿ:
    ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 4, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಇರಬೇಕು.


    ವಯೋಮಿತಿ ಸಡಿಲಿಕೆ:
    2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 3ವರ್ಷ
    ಎಸ್​​ಸಿ/ಎಸ್​ಟಿ/ ಪ್ರವರ್ಗ-1 ಅಭ್ಯರ್ಥಿಗಳು-5 ವರ್ಷ


    ಅರ್ಜಿ ಶುಲ್ಕ:
    ಸಾಮಾನ್ಯ/ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 750 ರೂ.
    ಎಸ್​ಸಿ/ಎಸ್​ಟಿ/ ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳು- 500 ರೂ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ (ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ)
    ಸ್ಪರ್ಧಾತ್ಮಕ ಪರೀಕ್ಷೆ


    ಪ್ರಶ್ನೆ ಪತ್ರಿಕೆ-1
    ಪ್ರಶ್ನೆಗಳ ಸಂಖ್ಯೆ 100, ಅಂಕಗಳು 100
    ಪರೀಕ್ಷಾ ಅವಧಿ- 2 ಗಂಟೆ
    ಬಹುಆಯ್ಕೆ ಮಾದರಿ


    ಇದನ್ನೂ ಓದಿ: IISc Recruitment 2022: ಮಾಸಿಕ ವೇತನ 1 ಲಕ್ಷ, ಬೆಂಗಳೂರಿನಲ್ಲಿ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04/11/2022

    Published by:Latha CG
    First published: