Job Alert: ಅಗ್ನಿ ಸ್ಟೀಲ್ಸ್​ ಕಂಪನಿಯಲ್ಲಿದೆ ಡಿಗ್ರಿ ಓದಿದವರಿಗೆ ಉದ್ಯೋಗ; ಮೈಸೂರಿನಲ್ಲಿ ವಾಕ್​ ಇನ್​ ಇಂಟರ್​ವ್ಯೂ

ಮಂಡ್ಯ, ರಾಮನಗರ, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ಕಡೆ ಮಾರಾಟ ಅಧಿಕಾರಿಗಳು ಮತ್ತು ಬ್ಯುಸಿನೆಸ್​ ಡೆವಲಪ್​ಮೆಂಟ್​ ಎಕ್ಸೂಕ್ಯುಟಿವ್​ಗಳ ನೇಮಕಾತಿಗೆ ಮುಂದಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಅಗ್ನಿ ಸ್ಟೀಲ್ಸ್​ ಪ್ರೈವೇಟ್​ ಲಿಮಿಟೆಡ್ (Agni Steel Private Limited)​ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಈ ಸಂಬಂಧ ಸಂಸ್ಥೆ ಉದ್ಯೋಗ ಪ್ರಕಟಣೆ ಹೊರಡಿಸಿದೆ. ಮಂಡ್ಯ, ರಾಮನಗರ, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ಕಡೆ ಮಾರಾಟ ಅಧಿಕಾರಿಗಳು ಮತ್ತು ಬ್ಯುಸಿನೆಸ್​ ಡೆವಲಪ್​ಮೆಂಟ್​ ಎಕ್ಸೂಕ್ಯುಟಿವ್​ಗಳ ನೇಮಕಾತಿಗೆ ಮುಂದಾಗಿದೆ. ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಜೊತೆಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಈ ಹುದ್ದೆಗಳಿಗೆ ಆಗಸ್ಟ್​ 27ರ ಶನಿವಾರ ವಾಕ್​ ಇನ್​ ಇಂಟರ್​ವ್ಯೂ ನಡೆಯಲಿದೆ.

    ಸಂಸ್ಥೆ: ಅಗ್ನಿ ಸ್ಟೀಲ್​ ಪ್ರೈವೇಟ್​ ಲಿಮಿಟೆಡ್​
    ಹುದ್ದೆಗಳು: ಮಾರ್ಕೆಟಿಂಗ್​ ಮ್ಯಾನೇಜರ್​, ಸೇಲ್ಸ್​ ಆಫೀಸರ್​, ಬ್ಯುಸಿನೆಟ್​ ಡೆವಲಪ್​ಮೆಂಟ್​ ಎಕ್ಸೂಕ್ಯೂಟಿವ್​
    ಒಟ್ಟು ಹುದ್ದೆಗಳ ಸಂಖ್ಯೆ: ನಿರ್ಧಿಷ್ಟ ಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ನಗರ
    ವೇತನ: ಸಂಸ್ಥೆಯ ನಿಯಮ ಅನುಸಾರ



























    ಹುದ್ದೆವಿದ್ಯಾರ್ಹತೆವಯೋಮಿತಿಅನುಭವ
    ಮಾರ್ಕೆಂಟಿಕ್​ ಮ್ಯಾನೇಜರ್​ಯಾವುದೇ ವಿಷಯದಲ್ಲಿ ಪದವಿಗರಿಷ್ಟ 40 ವರ್ಷ7-10 ವರ್ಷ ಕಾರ್ಯ ನಿರ್ವಹಣೆ ಅನುಭವ
    ಸೇಲ್ಸ್​ ಆಫೀಸರ್​ಯಾವುದೇ ವಿಷಯದಲ್ಲಿ ಪದವಿಗರಿಷ್ಟ 35 ವರ್ಷ3-5 ಕಾರ್ಯ ನಿರ್ವಹಣೆ ಅನುಭವ
    ಬ್ಯುಸಿನೆಟ್​ ಡೆವಲಪ್​ಮೆಂಟ್​ ಎಕ್ಸಿಕ್ಯೂಟಿವ್​ಯಾವುದೇ ವಿಷಯದಲ್ಲಿ ಪದವಿ ಅಥವಾ ಡಿಪ್ಲೊಮಾಗರಿಷ್ಟ 25 ವರ್ಷ0-3 ಕಾರ್ಯ ನಿರ್ವಹಣೆ ಅನುಭವ

    ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ

    ನೇರ ಸಂದರ್ಶನ ನಡೆಯುವ ಸ್ಥಳ: ಹೋಟೇಲ್​ ಪೈ ವಿಸ್ತಾ, ಬೆಂಗಳೂರು ನೀಲಿಗಿರಿ ರಸ್ತೆ. ಮೈಸೂರು.

    ಇದನ್ನು ಓದಿ: ಚಿತ್ರದುರ್ಗ ಜಿಲ್ಲಾ ಪಂಚಾಯತ್​ನಲ್ಲಿದೆ ಉದ್ಯೋಗಾವಕಾಶ; ಪಿಯುಸಿ, ಡಿಗ್ರಿ ಆದವರಿಗೆ ಅವಕಾಶ

    ಪ್ರಮುಖ ದಿನಾಂಕ 

    ಅಧಿಸೂಚನೆ ಬಿಡುಗಡೆ ದಿನಾಂಕ: 22 ಆಗಸ್ಟ್​ 2022
    ನೇರ ಸಂದರ್ಶನ ದಿನಾಂಕ 27 ಆಗಸ್ಟ್​ ಬೆಳಗ್ಗೆ 10 ಕ್ಕೆ

    ಇದನ್ನು ಓದಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ; 320 ಹುದ್ದೆಗಳಿಗೆ ಅರ್ಜಿ ಆಹ್ವಾನ

    ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

    ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ಅರ್ಜಿಯನ್ನು ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
    ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
    ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
    ಜಾತಿ ಪ್ರಮಾಣ ಪತ್ರ
    ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
    ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ

    ಹೆಚ್ಚಿನ ಮಾಹಿತಿಗೆ 9686667664, 7094470026 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
    Published by:Seema R
    First published: