AFMS Recruitment 2021: ಎಂಜಿನಿಯರಿಂಗ್, MBBS, PG ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ

ನವೆಂಬರ್ 3ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಇದೇ ನವೆಂಬರ್ 30, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

AFMS

AFMS

  • Share this:
AFMS Recruitment 2021: ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 200 ಶಾರ್ಟ್​ ಸರ್ವೀಸ್​ ಕಮಿಷನ್ಡ್​ ಆಫೀಸರ್ ಹುದ್ದೆಗಳು ಖಾಲಿ ಇವೆ. ಎಂಬಿಬಿಎಸ್, ಎಂ.ಎಸ್ಸಿ, ಎಂಜಿನಿಯರಿಂಗ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 3ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಇದೇ ನವೆಂಬರ್ 30, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು http://www.amcsscentry.gov.in ಗೆ ಭೇಟಿ ನೀಡಬಹುದು. ಆಸಕ್ತರು ಆನ್​ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.









































ಸಂಸ್ಥೆಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ
ಹುದ್ದೆಯ ಹೆಸರುಶಾರ್ಟ್​ ಸರ್ವೀಸ್​ ಕಮಿಷನ್
ಒಟ್ಟು ಹುದ್ದೆಗಳು200
ವಿದ್ಯಾರ್ಹತೆಎಂಬಿಬಿಎಸ್, ಎಂಎಸ್ಸಿ, ಎಂಜಿನಿಯರಿಂಗ್
ಉದ್ಯೋಗದ ಸ್ಥಳನವದೆಹಲಿ
ವೇತನನಿಯಮಾನುಸಾರ
ಅರ್ಜಿ ಸಲ್ಲಿಸುವ ಬಗೆಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ13/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30/11/2021



ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2021



ಇದನ್ನೂ ಓದಿ:India Post Recruitment 2021: ಮಾಸಿಕ ವೇತನ ₹ 81,100, ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ



ಹುದ್ದೆಯ ಮಾಹಿತಿ:

  • ಶಾರ್ಟ್​ ಸರ್ವೀಸ್ ಕಮಿಷನ್ಡ್ ಆಫೀಸರ್-ಪುರುಷರಿಗೆ 180 ಹುದ್ದೆಗಳು

  • ಶಾರ್ಟ್​ ಸರ್ವೀಸ್ ಕಮಿಷನ್ಡ್ ಆಫೀಸರ್- ಮಹಿಳೆಯರಿಗೆ 20 ಹುದ್ದೆಗಳು


ವಿದ್ಯಾರ್ಹತೆ

ಶಾರ್ಟ್​ ಸರ್ವೀಸ್ ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್/ ಸ್ನಾತಕೋತ್ತರ ಪದವಿ/ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.

ವಯೋಮಿತಿ:

ಶಾರ್ಟ್​ ಸರ್ವೀಸ್ ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್​ ಪದವಿ/ ಎಂಜಿನಿಯರಿಂಗ್​ ಪೂರ್ಣಗೊಳಿಸಿದ್ದರೆ, ವಯಸ್ಸು 30 ವರ್ಷ ಮೀರಿರಬಾರದು. ಸ್ನಾತಕೋತ್ತರ ಪದವಿ ಮಾಡಿದ್ದರೆ, 35 ವರ್ಷ ಮೀರಿರಬಾರದು.

ಇದನ್ನೂ ಓದಿ:KAPL Recruitment 2021: ತಿಂಗಳಿಗೆ ₹ 65,000 ಸಂಬಳ, ಕರ್ನಾಟಕ ಆ್ಯಂಟಿಬಯೋಟಿಕ್ಸ್​ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್​​ನಲ್ಲಿ ಉದ್ಯೋಗ

ಆಯ್ಕೆ ಪ್ರಕ್ರಿಯೆ:

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ




ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
Published by:Latha CG
First published: