Accenture is Hiring: ಅಸೆಂಚರ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್​ಗಳಿಗೆ ಉದ್ಯೋಗಾವಕಾಶ..!

Accenture is hiring: ಭವಿಷ್ಯದಲ್ಲಿ ಇನ್ನಷ್ಟು ಉತ್ತುಂಗ ಮಟ್ಟಕ್ಕೆ ಏರುವ ಕನಸು ಕಾಣುತ್ತಿರುವ ಕಂಪನಿಗೆ ನೀತಿ ನಿಯಮಗಳಿಗನುಗುಣವಾಗಿ ಕೈ ಜೋಡಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಸೆಂಚರ್​

ಅಸೆಂಚರ್​

  • Share this:
ಐಟಿ ಬಿಟಿ ವಲಯ(IT-BT Sector)ದಲ್ಲಿ ಖ್ಯಾತಿ ಗಳಿಸಿರುವ ಅಸೆಂಚರ್(Accenture)‌ ಅನುಭವವಿರುವ ಸಾಫ್ಟ್‌ವೇರ್‌ ಎಂಜಿನಿಯರ್(Software Engineer) ಹಾಗೂ ಹೊಸಬರಿಗೆ ಭಾರತದಾದ್ಯಂತ ಉದ್ಯೋಗವಕಾಶಕ್ಕೆ ಆಹ್ವಾನ ನೀಡಿದೆ. ಭವಿಷ್ಯದಲ್ಲಿ ಇನ್ನಷ್ಟು ಉತ್ತುಂಗ ಮಟ್ಟಕ್ಕೆ ಏರುವ ಕನಸು ಕಾಣುತ್ತಿರುವ ಕಂಪನಿಗೆ ನೀತಿ ನಿಯಮಗಳಿಗನುಗುಣವಾಗಿ ಕೈ ಜೋಡಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಯಾವ ಯಾವ ಹುದ್ದೆಗಳಿಗೆ ಆಹ್ವಾನ ನೀಡಿದೆ. ಇಲ್ಲಿದೆ ವಿವರ. ಆಸಕ್ತ ಅಭ್ಯರ್ಥಿಗಳು ಅಸೆಂಚರ್‌ ಕರಿಯರ್ ಪುಟದಲ್ಲಿ ಅರ್ಜಿ ಸಲ್ಲಿಸಬಹುದು.

1. ಸೆಕ್ಯೂರಿಟಿ ಆರ್ಕಿಟೆಕ್ಟ್(Security Architect)

• ಅನುಭವ : 6-12 ವರ್ಷಗಳು
• ಮುಖ್ಯ ಕೌಶಲ್ಯ: ಸೆಕ್ಯೂರಿಟಿ ಆರ್ಕಿಟೆಕ್ಟ್ಸ್
• ಕೌಶಲ್ಯ: ಸಲ್ಯೂಷನ್ ಆರ್ಕಿಟೆಕ್ಟ್
• ವಿದ್ಯಾಭ್ಯಾಸ: ಈ ವಲಯಕ್ಕೆ ಸಂಬಂಧಿಸಿದ ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು

ತಾಂತ್ರಿಕ ಪರಿಣತಿ

• ಎರಡು ಅಥವಾ ಹೆಚ್ಚಿನ ಸೈಬರ್ ಸೆಕ್ಯುರಿಟಿ ಡೊಮೇನ್‍ಗಳಲ್ಲಿ ಉತ್ತಮ ಜ್ಞಾನ
• ಸಂಬಂಧಿತ ಟೂಲ್ಸ್ ಮತ್ತು ಎಸ್ಟಿಮೇಟರ್‌ಗಳನ್ನು ಕಲಿಯುವ ಮತ್ತು ಬಳಸುವ ಸಾಮರ್ಥ್ಯ
• ಭದ್ರತಾ ಯೋಜನೆಗಳು ಮತ್ತು ಕಾರ್ಯಾಚರಣೆಗಳನ್ನು ನೀಡುವಲ್ಲಿ ಅನುಭವ
• ಎಸ್‍ಐಇಎಮ್ ಫೈರ್‌ವಾಲ್‍ಗಳು ಎವಿ, ಐಎಎಮ್, ಇತ್ಯಾದಿಗಳನ್ನು ಅನುಷ್ಠಾನಗೊಳಿಸುವಲ್ಲಿ ಅಥವಾ ನಿರ್ವಹಿಸುವಲ್ಲಿ ಅನುಭವ.
• ಎಕ್ಸೆಲ್‍ನಲ್ಲಿ ವ್ಯಾಪಕ ಅನುಭವ

ಜವಾಬ್ದಾರಿಗಳು

• ಮೊತ್ತ, ವೆಚ್ಚ ಮತ್ತು ಬೆಲೆಗಳನ್ನು ಅಂದಾಜಿಸಿ ಪ್ರತಿ ತಯಾರಿಸುವುದು ಮತ್ತು
• ಆರ್‌ಎಫ್‍ಪಿಗೆ ಪ್ರತಿಕ್ರಿಯಿಸುವುದು ಮತ್ತು ಪರಿಹಾರ ಯೋಜನೆ ರೂಪಿಸುವುದು
• ಕೆಲಸದ ಪ್ರಕಟಣೆಗಳನ್ನು ಸಿದ್ಧಪಡಿಸುವುದು
• ಪರಿಹಾರ/ಪ್ರಯತ್ನಗಳ ಅನುಮೋದನೆಗಾಗಿ ಡೆಲಿವರಿ ಲೀಡ್‍ಗಳೊಂದಿಗೆ ಕೆಲಸ ಮಾಡಿ ಅವಶ್ಯಕತೆಗಳನ್ನು ಸ್ಪಷ್ಟಪಡಿಸಲು ಗ್ರಾಹಕರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಂವಹನ ನಡೆಸುವುದು

2. ಅಪ್ಲಿಕೇಶನ್ ಡೆವಲಪರ್ : ಚೆನ್ನೈ

• ಅನುಭವ : 2.5-4 ವರ್ಷಗಳು
• ಪರಿಣತಿ: ಹಡೂಪ್
• ಇರಲೇಬೇಕಾದ ಕೌಶಲ್ಯ: ಅಪಾಚೆ ಸ್ಪಾರ್ಕ್
• ವಿದ್ಯಾಭ್ಯಾಸ: ಈ ವಲಯಕ್ಕೆ ಸಂಬಂಧಿಸಿದ ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು

ತಾಂತ್ರಿಕ ಪರಿಣತಿ

• ಹಡೂಪ್ ಹಾರ್ಟನ್‍ವರ್ಕ್ಸ್‌ ವಿತರಣೆಯಲ್ಲಿ ಮೂರು ವರ್ಷದ ಅನುಭವವಿರಬೇಕು
• ಪ್ರತಿದಿನ ಬಳಕೆದಾರರ ಮನವಿಗಳನ್ನು ಪರಿಹರಿಸುವ ಕೌಶಲ್ಯವಿರಬೇಕು
• ಜೆಮ್‍ಫೈರ್ ಐವಿಆರ್, ಕಫ್ಕಾ, ಸ್ಪಾರ್ಕ್ ಕುರಿತು ಅನುಭವವಿರಬೇಕು
• ಉತ್ಪಾದನಾ ಬೆಂಬಲ ಯೋಜನೆಯಲ್ಲಿ ಜೀವನಚಕ್ರದ ಸಮಸ್ಯೆ, ಪರಿಹಾರದ ಬಗ್ಗೆ ತಿಳಿದಿರಬೇಕು
• ಬ್ಯಾಚ್ ಕೆಲಸದ ವೈಫಲ್ಯಗಳನ್ನು ವಿಶ್ಲೇಷಿಸಿ ಮತ್ತು ಅಲ್ಪಾವಧಿ ಮತ್ತು ದೀರ್ಘಾವಧಿಯ ಪರಿಹಾರಗಳನ್ನು ಪಡೆದುಕೊಳ್ಳುವ ಜ್ಞಾನವಿರಬೇಕು

ಜವಾಬ್ದಾರಿಗಳು

• ಸ್ಕೇಲಿಂಗ್ ಮತ್ತು ವಿಶ್ಲೇಷಣೆ, ದೃಶ್ಯೀಕರಣ, ಡೇಟಾ ಲೋಡಿಂಗ್‍ಗೆ ಸಂಬಂಧಿಸಿದ ಸಮರ್ಪಕ ಪರಿಕರಗಳನ್ನು ನೀಡುವ ಯೋಜನೆಗಳನ್ನು ರೂಪಿಸುವುದು
• ಹಡೂಪ್ ನಿರ್ವಹಣೆ ಮತ್ತು ಬಿಗ್ ಡೇಟಾ ಎಕೋಸಿಸ್ಟಮ್‍ ನಿರ್ವಹಿಸುವುದು
• ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು, ಹಡೂಪ್ ಕ್ಲಸ್ಟರ್ ಸ್ಥಾಪನೆ/ಸಂರಚನೆಯ ಬಗ್ಗೆ ತಿಳಿದಿರಬೇಕು
• ಅಗತ್ಯವಿರುವ ಟ್ಯೂನಿಂಗ್ ಚಟುವಟಿಕೆಗಳನ್ನು ನಿರ್ವಹಿಸಬೇಕು

3. ಫುಲ್ ಸ್ಟಾಕ್ ಡೆವಲಪರ್ : ಬೆಂಗಳೂರು

• ಅನುಭವ : 4-6 ವರ್ಷಗಳು
• ಪರಿಣತಿ: ವೆಬ್ ಅಪ್ಲಿಕೇಶನ್ ಡೆವಲಪ್‍ಮೆಂಟ್
• ಇರಲೇಬೇಕಾದ ಕೌಶಲ್ಯ: ಡೇಟಾ ಅನಲಿಟಿಕ್ಸ್ ಮತ್ತು ಇಂಟರ್‌ಪ್ರಿಟೇಶನ್
• ವಿದ್ಯಾಭ್ಯಾಸ: ಈ ವಲಯಕ್ಕೆ ಸಂಬಂಧಿಸಿದ ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು

ತಾಂತ್ರಿಕ ಪರಿಣತಿ

ASPNET MVC, HTML, CSS, React js, angular js ಮುಂತಾದವುಗಳ ಬಗ್ಗೆ ತಿಳಿದಿರಬೇಕು.

ಜವಾಬ್ದಾರಿಗಳು

• ವೆಬ್ ವಿನ್ಯಾಸ ಮತ್ತು ಗ್ರಾಫಿಕ್ ವಿನ್ಯಾಸಗಳ ಬಗ್ಗೆ ಜ್ಞಾನವಿರಬೇಕು
• ವೆಬ್ ಪುಟಗಳಲ್ಲಿ ಬಳಕೆದಾರರು ಸಂವಹನ ನಡೆಸುವ ವಿನ್ಯಾಸದ ಅನುಭವವಿರಬೇಕು
• DevOps ಪರಿಸರದಲ್ಲಿ ಕೆಲಸ ಮಾಡಿದ ಅನುಭವವಿರಬೇಕು
• ವೆಬ್ ಅಪ್ಲಿಕೇಶನ್ ಮತ್ತು ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಅಬ್ರಿಸ್ಟ್ ಆಫ್ ಡೆವಲಪ್‍ಮೆಂಟ್ಸ್ ಬಗ್ಗೆ ತಿಳಿದಿರಬೇಕು
• ಎಂಡ್ ಟು ಎಂಡ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಬೇಕು

4. ಅಪ್ಲಿಕೇಶನ್ ಡೆವಲಪರ್ : ಬೆಂಗಳೂರು
• ಅನುಭವ : 8-10 ವರ್ಷಗಳು
• ಪರಿಣತಿ: ಗೂಗಲ್ ಬಿಗ್‍ಕ್ವೇರಿ

ತಾಂತ್ರಿಕ ಪರಿಣತಿ

• ಬಿಗ್‍ಕ್ವೇರಿ ಆರ್ಕಿಟೆಕ್ಚರ್, ಟೇಬಲ್ ಪಾರ್ಟಿಷನಿಂಗ್ ಬಗ್ಗೆ ಅಗಾಧವಾದ ಜ್ಞಾನ
• ಬಿಗ್‍ಕ್ವೇರಿ ಎಮ್‍ಎಲ್ ಬಗ್ಗೆ ತಿಳಿದಿರಬೇಕು
• ಸಂಸ್ಕರಿಸಿದ ಡೇಟಾದ ಪ್ರಮಾಣ ಕಡಿಮೆ ಮಾಡುವ ಮೂಲಕ ಬಿಗ್‍ಕ್ವೇರಿ ವೆಚ್ಚ ಕಡಿಮೆ ಮಾಡುವುದು ಹೇಗೆ ಎಂದು ತಿಳಿದಿರಬೇಕು
• ಬಿಗ್‍ಕ್ವೇರಿ ಬಳಸಿ ಇಟಿಎಲ್ ಉದ್ಯೋಗಗಳನ್ನು ಅನುಷ್ಠಾನಗೊಳಿಸುವುದು

ಜವಾಬ್ದಾರಿಗಳು

• ಫೈಲ್‍ಗಳನ್ನು ಬಳಸಿ ಅಥವಾ ಒಂದು ಸಮಯದಲ್ಲಿ ಒಂದು ದಾಖಲೆಯನ್ನು ಸ್ಟ್ರೀಮಿಂಗ್ ಮಾಡುವ ಮೂಲಕ ಡೇಟಾವನ್ನು ಬಿಗ್‍ಕ್ವೇರಿಗೆ ಲೋಡ್ ಮಾಡುವುದು
• ಬಿಗ್‍ಕ್ವೇರಿ ಬಳಸಿ ಇಟಿಎಲ್ ಪೈಪ್‍ಲೈನ್ ರಚಿಸಿ, ಉತ್ತಮ ಕಾರ್ಯಕ್ಷಮತೆಯ ಕೋಷ್ಟಕಗಳನ್ನು ರಚಿಸುವುದು
• ರೋಲ್ಸ್ ಮತ್ತು ಅಧಿಕೃತ ವೀಕ್ಷಣೆಗಳನ್ನು ಬಳಸಿಕೊಂಡು ಸೂಕ್ಷ್ಮ ಪ್ರವೇಶದ ನಿಯಂತ್ರಿಸುವುದು
• ಅನುಷ್ಠಾನದ ವೆಚ್ಚ ಗಮನದಲ್ಲಿಟ್ಟುಕೊಂಡು ಸಂಕೀರ್ಣ ಎಸ್‍ಕ್ಯೂಎಲ್ ಪ್ರಶ್ನೆಗಳನ್ನು ರಚಿಸುವುದು

5. ವೆಬ್ ವಿನ್ಯಾಸ : ಎಚ್‍ಟಿಎಮ್‍ಎಲ್, ಹೈದರಾಬಾದ್

• ಅನುಭವ: 3-5 ವರ್ಷಗಳು

ಜವಾಬ್ದಾರಿಗಳು
• ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಕೆಲಸದ ಮೇಲೆ ಮತ್ತು ಇತರರ ಕೆಲಸದ ಮೇಲೆ ಪರಿಣಾಮ ಬೀರಬಹುದು
• ಗ್ರಾಹಕರು ಅಥವಾ ಅಸೆಂಚರ್‌ ಮ್ಯಾನೇಜ್‍ಮೆಂಟ್ ಸೀಮಿತ ಮಾನ್ಯತೆ ಹೊಂದಬಹುದು
• ಮೌಲ್ಯ ಹೆಚ್ಚಿಸುವ ಮಾರ್ಗಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು
• ದೈನಂದಿನ ಕೆಲಸ ಕಾರ್ಯಗಳ ಮೇಲೆ ಮಧ್ಯಮ ಮಟ್ಟ ಮತ್ತು ಹೊಸ ಕಾರ್ಯಯೋಜನೆಯ ಸೂಚನೆಗಳನ್ನು ನೀಡಲಾಗುವುದು
• ಕಡಿಮೆ ಸಂಕೀರ್ಣತೆ ಸಮಸ್ಯೆಗಳನ್ನು ವಿಶ್ಲೇಷಿಸಲು ಮತ್ತು ಪರಿಹರಿಸುವ ಅಗತ್ಯವಿದೆ
• ಕೆಲಸದ ಕೇಂದ್ರೀಕೃತ ವ್ಯಾಪ್ತಿಯೊಂದಿಗೆ ತಂಡದ ಒಂದು ಭಾಗವಾಗಿರುತ್ತೀರಿ.
Published by:Latha CG
First published: