Jobs in Accenture: ಆಕ್ಸೆಂಚರ್​ನಲ್ಲಿ ಭರ್ಜರಿ ನೇಮಕಾತಿ; ಬಿಇ, ಎಂಎಸ್ಸಿ ಆದವರಿಗೆ ಅವಕಾಶ

job in Accenture: ಹೊಸಬರು ಸೇರಿದಂತೆ ಅನುಭವಿ ಉದ್ಯೋಗಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೂಲಕ ಈ ಕಂಪನಿಯಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದ ಅಭ್ಯರ್ಥಿಗಳು ಇದೊಂದು ಸುವರ್ಣ ಅವಕಾಶ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾದ ಆಕ್ಸೆಂಚರ್ (Accenture) ವಿವಿಧ ಪದವೀಧರ ಅಭ್ಯರ್ಥಿಗಳ​ ನೇಮಕಾತಿಗೆ ಮುಂದಾಗಿದೆ. ಬೆಂಗಳೂರು (Bangalore) ಸೇರಿದಂತೆ ದೇಶದಲ್ಲಿ ವಿವಿಧ ನಗರಗಳಲ್ಲಿ ಈ ನೇಮಕಾತಿ ನಡೆಯಲಿದೆ. ಹೊಸಬರು ಸೇರಿದಂತೆ ಅನುಭವಿ ಉದ್ಯೋಗಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೂಲಕ ಈ ಕಂಪನಿಯಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದ ಅಭ್ಯರ್ಥಿಗಳು ಇದೊಂದು ಸುವರ್ಣ ಅವಕಾಶ ಆಗಿದೆ.

    ಸಂಸ್ಥೆಯಲ್ಲಿ ಅಸೋಸಿಯೇಟ್​ ಸಾಫ್ಟ್​ವೇರ್​ ಇಂಜಿನಿಯರ್ (Associate Software Engineer) ಹುದ್ದೆಗೆ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಬಿಇ, ಬಿಟೆಕ್​, ಎಂಸಿಎ ಮತ್ತು ಎಂಎಸ್ಸಿ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ಆಯ್ಕೆ ಪ್ರಕ್ರಿಯೆ, ನೇಮಕಾತಿ ಮತ್ತು ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ವಿವರ ಈ ಕೆಳಗಿನಂತಿದೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಆಕ್ಸೆಂಚರ್​ (Accenture)
    ಹುದ್ದೆಅಸೋಸಿಯೇಟ್​ ಸಾಫ್ಟ್​ವೇರ್​ ಇಂಜಿನಿಯರ್​​
    ಒಟ್ಟು ಹುದ್ದೆನಿಗದಿಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ, ಚೆನ್ನೈ, ಗುರ್ಗಾಂವ್, ಕೋಲ್ಕತ್ತಾ
    ವೇತನ450000 ರೂ ಮಾಸಿಕ

    ಶೈಕ್ಷಣಿಕ ಅರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಅಧಿಕೃತ ವಿಶ್ವ ವಿದ್ಯಾಲಯ ಅಥವಾ ಮಂಡಳಿಯಿಂದ ಬಿಇ, ಬಿಟೆಕ್​, ಎಂಇ, ಎಂಟೆಕ್​, ಎಂಸಿಎ ಅಥವಾ ಎಂಎಸ್ಸಿ ಪದವಿಯನ್ನು ಪಡೆದಿರಬೇಕು.

    ಇದನ್ನು ಓದಿ: ಪ್ರವಾಸೋದ್ಯಮ ಸಂಸ್ಥೆಯಲ್ಲಿದೆ ವಿವಿಧ ಮ್ಯಾನೇಜರ್​ ಹುದ್ದೆ; ಮಾಸಿಕ 50000 ರೂ ವೇತನ

    ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ

    ವಯೋಮಿತಿ: ಆಕ್ಸೆಂಚರ್​​​ ನಿಯಮದ ಅನುಸಾರ

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಹುದ್ದೆ ಕುರಿತ ವಿವರ
    -ಪೈಥಾನ್, ಪರ್ಲ್, ಗೋ, ನೋಡ್, ಜಾವಾ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ಪ್ರವೇಶ ಮಟ್ಟದ ಕೋಡಿಂಗ್ ಪರಿಣತಿ ಹೊಂದಿರಬೇಕು.

    -ಅಲ್ಗಾರಿದಮ್‌ಗಳು, ಡೇಟಾ ರಚನೆಗಳು, ಸ್ಕ್ರಿಪ್ಟಿಂಗ್ ಮತ್ತು ಸಾಫ್ಟ್‌ವೇರ್ ವಿನ್ಯಾಸ ಅಭ್ಯಾಸಗಳನ್ನು ಬರೆಯುವುದು, ಅರ್ಥಮಾಡಿಕೊಳ್ಳಬೇಕು.

    -ಅಭ್ಯರ್ಥಿಯು 11 ತಿಂಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರಬಾರದು
    -ಅಭ್ಯರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು.

    ವಿಶೇಷ ಸೂಚನೆ:
    ಈ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಳೆದ ಮೂರು ತಿಂಗಳೊಳಗೆ ಸಂಸ್ಥೆ ನಡೆಸಿದ ಯಾವುದೇ ನೇಮಕಾತಿ, ಸಂದರ್ಶನಕ್ಕೆ ಹಾಜರಾಗಿರಬಾರದು.

    ಇದನ್ನು ಓದಿ: ಪದವೀಧರರಿಗೆ ಅರ್ಜಿ ಆಹ್ವಾನಿಸಿದ ಇನ್ಫೋಸಿಸ್​​; ಇಲ್ಲಿದೆ ಹುದ್ದೆ ಸಂಪೂರ್ಣ ಮಾಹಿತಿ

    ಅರ್ಜಿ ಸಲ್ಲಿಕೆ ವಿಧಾನ:
    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: https://www.accenture.com/

    ಅರ್ಜಿ ಸಲ್ಲಿಸುವ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ

    - ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

    ಅರ್ಜಿ ಸಲ್ಲಿಸುವವರು ಈ ಲಿಂಕ್ ಕ್ಲಿಕ್​ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು.
    Published by:Seema R
    First published: