Jobs for Women: ಶೀಘ್ರದಲ್ಲೇ 10 ಸಾವಿರ ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಓಲಾ ಕಂಪನಿ..!

Ola Futurefactory: ಆತ್ಮನಿರ್ಭರ್ ಭಾರತ್ ನಿರ್ಮಾಣಕ್ಕೆ ಆತ್ಮನಿರ್ಭರ್ ಮಹಿಳೆಯರ ಅವಶ್ಯಕತೆ ಇದೆ ಎಂದು ಓಲಾ ಸಿಇಒ ಭವೀಶ್​​ ಅಗರ್​ವಾಲ್ ಹೇಳಿದ್ದಾರೆ.

ಮಹಿಳಾ ಉದ್ಯೋಗಿಗಳೊಂದಿಗೆ ಓಲಾ ಸಿಇಒ  ಭವೀಶ್ ಅಗರ್​ವಾಲ್

ಮಹಿಳಾ ಉದ್ಯೋಗಿಗಳೊಂದಿಗೆ ಓಲಾ ಸಿಇಒ ಭವೀಶ್ ಅಗರ್​ವಾಲ್

  • Share this:
Ola Futurefactory: ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂಬುದು ಸದ್ಯ ಇರುವ ಚಿಂತನೆ. ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಇರುವ ಬದಲು ತಮಗಿರುವ ಸಾಮರ್ಥ್ಯದಿಂದ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗಟ್ಟಿಯಾಗಿ ನಿಲ್ಲಬೇಕು. ಈಗ ಕಾಲ ಹಿಂದಿನಂತೆ ಇಲ್ಲ, ತುಂಬಾ ಬದಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ತನ್ನದೇಯಾದ ಛಾಪು ಮೂಡಿಸುತ್ತಿದ್ದಾಳೆ. ಆದಾಗ್ಯೂ ಕೆಲ ಮಹಿಳೆಯರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ಓಲಾ ಕಂಪನಿ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ಓಲಾ ಫ್ಯೂಚರ್ ಫ್ಯಾಕ್ಟರಿ(Ola Futurefactory) ಕೇವಲ ಮಹಿಳೆಯರಿಂದಲೇ ಮುನ್ನಡೆಯಲಿದೆ. ಹೌದು, ಆತ್ಮನಿರ್ಭರ್ ಭಾರತ್(Aatmanirbhar Bharat) ಚಿಂತನೆಯಡಿಯಲ್ಲಿ ಓಲಾ ಕಂಪನಿಯ ಚೇರ್​ಮನ್ ಹಾಗೂ ಸಿಇಒ ಭವೀಶ್ ಅಗರ್​ವಾಲ್(Chairman and Group CEO Bhavish Aggarwal) ಇಂತಹ ಮಹತ್ವದ ಘೋಷಣೆಯೊಂದನ್ನು ಇಂದು ಮಾಡಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಲಿದ್ದು, ಇಡೀ ಕಂಪನಿಯಲ್ಲಿ ಬರೀ ಮಹಿಳಾ ಉದ್ಯೋಗಿಗಳೇ ಇರಲಿದ್ದಾರೆ.

ತಮಿಳುನಾಡಿನಲ್ಲಿರುವ ಓಲಾದ ಉತ್ಪಾದನಾ ಘಟಕವಾದ ಓಲಾ ಫ್ಯೂಚರ್​ಫ್ಯಾಕ್ಟರಿಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆತ್ಮನಿರ್ಭರ್ ಭಾರತ್ ನಿರ್ಮಾಣಕ್ಕೆ ಆತ್ಮನಿರ್ಭರ್ ಮಹಿಳೆಯರ ಅವಶ್ಯಕತೆ ಇದೆ ಎಂದು ಓಲಾ ಸಿಇಒ ಭವೀಶ್​​ ಅಗರ್​ವಾಲ್ ಹೇಳಿದ್ದಾರೆ.

ಇದನ್ನೂ ಓದಿ:JEE Advanced 2021 Registrations: ಜೆಇಇ ಅಡ್ವಾನ್ಸ್​ ಪರೀಕ್ಷೆಗೆ ಹೀಗೆ ರಿಜಿಸ್ಟ್ರೇಶನ್ ಮಾಡಿ..!







ಓಲಾ ಫ್ಯೂಚರ್ ಫ್ಯಾಕ್ಟರಿಯು ಸುಮಾರು 500 ಎಕರೆ ವಿಸ್ತೀರ್ಣದಲ್ಲಿದೆ. ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯನ್ನು ವೇಗಗೊಳಿಸಿದಾಗ 10 ಸಾವಿರಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದ್ದೇವೆ. ಆ ಮೂಲಕ ಇದು ವಿಶ್ವದ ಅತಿದೊಡ್ಡ ಮಹಿಳಾ ಕಾರ್ಖಾನೆ ಎಂಬ ಹೆಗ್ಗಳಿಕೆ ಪಡೆಯಲಿದೆ ಎಂದರು.

ಓಲಾ ತನ್ನ ಮೊದಲ ಎಲೆಕ್ಟ್ರಿಕ್​ ಸ್ಕೂಟರ್ ಫ್ಯಾಕ್ಟರಿಯನ್ನು ತಮಿಳುನಾಡಿನಲ್ಲಿ ಶುರು ಮಾಡಿದಾಗ, ಕಳೆದ ವರ್ಷ 2,400 ಕೋಟಿ ಬಂಡವಾಳ ಹೂಡಿತ್ತು.

ಕಂಪನಿಯು ಆರಂಭದಲ್ಲಿ 10 ಲಕ್ಷ ವಾರ್ಷಿಕ ಉತ್ಪಾದನಾ ಸಾಮರ್ಥ್ಯದೊಂದಿಗೆ ಆರಂಭಿಸಿ, ಬಳಿಕ ಅದನ್ನು 20 ಲಕ್ಷಕ್ಕೆ ಏರಿಸುವುದಾಗಿ ಹೇಳಿದೆ. ಎಲ್ಲವೂ ಮಾರುಕಟ್ಟೆ ಬೇಡಿಕೆ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ:UPSC is Hiring: ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC; ಅರ್ಜಿ ಸಲ್ಲಿಸಲು ಅ.1 ಕೊನೆಯ ದಿನಾಂಕ

ನಿರೀಕ್ಷಿತ ಬೇಡಿಕೆ ಮಟ್ಟ ತಲುಪಿದ ಬಳಿಕ, ಓಲಾ ಎಲೆಕ್ಟ್ರಿಕ್ ಕಂಪನಿ 1 ಕೋಟಿ ಯೂನಿಟ್​​ಗಳ ವಾರ್ಷಿಕ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಿಕೊಂಡಿತ್ತು. ಇದು ವಿಶ್ವದ ಒಟ್ಟು ದ್ವಿಚಕ್ರ ವಾಹನ ಉತ್ಪಾದನೆಯ ಶೇ.15ರಷ್ಟಾಗುತ್ತದೆ.

ಓಲಾ ಮಹಿಳೆಯರಿಗೆ ಆರ್ಥಿಕ ಅವಕಾಶಗಳನ್ನು ಒದಗಿಸುವುದು ಮಾತ್ರವಲ್ಲದೇ, ಅವರ ಕುಟುಂಬ ಹಾಗೂ ಇಡೀ ಸಮುದಾಯವನ್ನು ಸುಧಾರಿಸುತ್ತದೆ ಎಂದು ಓಲಾ ಸಿಇಓ ಭರವಸೆ ನೀಡಿದ್ದಾರೆ.
Published by:Latha CG
First published: