• Home
  • »
  • News
  • »
  • jobs
  • »
  • AAI Recruitment 2022: AAI ಉದ್ಯೋಗಾವಕಾಶ, ತಿಂಗಳಿಗೆ 1 ಲಕ್ಷಕ್ಕೂ ಅಧಿಕ ವೇತನ

AAI Recruitment 2022: AAI ಉದ್ಯೋಗಾವಕಾಶ, ತಿಂಗಳಿಗೆ 1 ಲಕ್ಷಕ್ಕೂ ಅಧಿಕ ವೇತನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

AAI Recruitment 2022: ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ. ಜೂನಿಯರ್ ಹಾಗೂ ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

  • Share this:

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ( Airports Authority of India ) ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. ಅರ್ಹ ಅಭ್ಯರ್ಥಿಗಳು AAI ನ ಅಧಿಕೃತ ವೆಬ್‌ಸೈಟ್ aai.aero ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು . ಅರ್ಜಿ (Application)  ಸಲ್ಲಿಸಲು ಕೊನೆಯ ದಿನಾಂಕ (Last Date) ಸೆಪ್ಟೆಂಬರ್ 30, 2022. ಈ ನೇಮಕಾತಿ (Recruitment) ಮೂಲಕ ಒಟ್ಟು 156 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

ಹುದ್ದೆಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್
ಸಂಸ್ಥೆಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
ವಿದ್ಯಾರ್ಹತೆ ಪದವಿ, ಸ್ನಾತಕೋತ್ತರ ಪದವಿ
ಸಂಬಳ36000-110000
ಅರ್ಜಿ ಸಲ್ಲಿಕೆಇಲ್ಲಿ ಕ್ಲಿಕ್ ಮಾಡಿ
ಕೊನೆ ದಿನಾಂಕಸೆಪ್ಟೆಂಬರ್ 30, 2022
ಆರಂಭಿಕ ದಿನಾಂಕಸೆಪ್ಟೆಂಬರ್ 01, 2022
ಖಾಲಿ ಹುದ್ದೆಗಳ ಸಂಖ್ಯೆ156
ಅರ್ಜಿ ಶುಲ್ಕ1000 ರೂ (SC, ST - ಯಾವುದೆ ಶುಲ್ಕವಿಲ್ಲ)

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ. ಜೂನಿಯರ್ ಹಾಗೂ ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಒಟ್ಟು 156 ಹುದ್ದೆಗೆ ಅವಕಾಶವಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


ಪ್ರಮುಖ ದಿನಾಂಕಗಳು
ಅರ್ಜಿಯ ಆನ್‌ಲೈನ್ ನೋಂದಣಿಗೆ ಆರಂಭಿಕ ದಿನಾಂಕ: ಸೆಪ್ಟೆಂಬರ್ 01, 2022
ಡೆಬಿಟ್/ಕ್ರೆಡಿಟ್ ಕಾರ್ಡ್/UPI/ನೆಟ್ ಬ್ಯಾಂಕಿಂಗ್ ಇತ್ಯಾದಿಗಳ ಮೂಲಕ ಶುಲ್ಕ ಪಾವತಿಸಬಹುದು.
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ: ಸೆಪ್ಟೆಂಬರ್ 30, 2022


ಖಾಲಿ ಹುದ್ದೆಗಳು:


ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆ) NE-4: 132 ಪೋಸ್ಟ್‌ಗಳು
ಜೂನಿಯರ್ ಅಸಿಸ್ಟೆಂಟ್ (ಕಚೇರಿ) NE-4: 10 ಪೋಸ್ಟ್‌ಗಳು
ಹಿರಿಯ ಸಹಾಯಕ (ಖಾತೆಗಳು) NE-6: 13 ಪೋಸ್ಟ್‌ಗಳು
ಹಿರಿಯ ಸಹಾಯಕ (ಅಧಿಕೃತ ಭಾಷೆ)NE-6: 01 ಹುದ್ದೆಗಳು
ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಸಂಬಳ
ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆ) NE-4 : 31000-92000
ಜೂನಿಯರ್ ಅಸಿಸ್ಟೆಂಟ್ (ಕಚೇರಿ) NE-4 : 31000-92000
ಹಿರಿಯ ಸಹಾಯಕ (ಖಾತೆಗಳು) NE-6: 36000-110000
ಹಿರಿಯ ಸಹಾಯಕ (ಅಧಿಕೃತ ಭಾಷೆ)NE-6 : 36000-110000


ಇದನ್ನೂ ಓದಿ: ಬೆಂಗಳೂರು ಗ್ರಾಮ ಪಂಚಾಯತ್​ನಲ್ಲಿ 56 ಹುದ್ದೆಗಳಿಗೆ ನೇಮಕಾತಿ; ಪಿಯುಸಿ ಆಗಿದ್ರೆ ಸಾಕು


ಅರ್ಹತೆಯ ಮಾನದಂಡ
ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆ) NE-4: ಕನಿಷ್ಠ 50% ಅಂಕಗಳೊಂದಿಗೆ 10 ನೇ ತರಗತಿ ಪಾಸ್​ಆಗಿರಬೇಕು. 3 ವರ್ಷಗಳ  ಡಿಪ್ಲೋಮಾ ಮೆಕ್ಯಾನಿಕಲ್ / ಆಟೋಮೊಬೈಲ್ / ಫೈರ್ (ಅಥವಾ) ii) 50% ಅಂಕಗಳೊಂದಿಗೆ 12 ನೇ ತರಗತಿ ಪಾಸ್ ಆಗಿರಬೇಕು.
ಜೂನಿಯರ್ ಅಸಿಸ್ಟೆಂಟ್ (ಕಚೇರಿ) NE-4: ಇಂಗ್ಲಿಷ್‌ನಲ್ಲಿ ಟೈಪಿಂಗ್ ಮತ್ತು ಹಿಂದಿ ಟೈಪಿಂಗ್ ವೇಗವಾಗಿರಬೇಕು.
ಹಿರಿಯ ಸಹಾಯಕ (ಖಾತೆಗಳು) NE-6: ಪದವೀಧರರು 03 ರಿಂದ 06 ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್‌ನೊಂದಿಗೆ  ಬಿ.ಕಾಂ. ಪದವಿ ಪಡೆದಿರಬೇಕು.
ಹಿರಿಯ ಸಹಾಯಕ (ಅಧಿಕೃತ ಭಾಷೆ)NE-6: ಪದವಿ ಮಟ್ಟದಲ್ಲಿ ಇಂಗ್ಲಿಷ್‌ನೊಂದಿಗೆ ಹಿಂದಿಯಲ್ಲಿ ಮಾಸ್ಟರ್ಸ್ ಅಥವಾ ಪದವಿ ಮಟ್ಟದಲ್ಲಿ ಹಿಂದಿಯನ್ನು ಒಂದು ವಿಷಯವಾಗಿ ಇಂಗ್ಲಿಷ್‌ನಲ್ಲಿ ಮಾಸ್ಟರ್ಸ್ ಮಾಡಿರಬೇಕು.
ಅಥವಾ ಪದವಿ ಹಂತದಲ್ಲಿ ಕಡ್ಡಾಯ/ಐಚ್ಛಿಕ ವಿಷಯಗಳಾಗಿ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ತಾತಕ್ಕೊತ್ತರ ಪದವಿ ಪಡೆದಿರಬೇಕು.


ಇದನ್ನೂ ಓದಿ: ಪದವಿ ಪೂರ್ಣಗೊಳಿಸಿದವರಿಗೆ LICಯಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ


ಅರ್ಜಿ ಶುಲ್ಕ
UR,OBC, EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂ.1000
ಮಹಿಳೆಯರು / SC / ST / ಮಾಜಿ ಸೈನಿಕ ಅಭ್ಯರ್ಥಿಗಳು / ವಿಕಲಾಂಗ ವ್ಯಕ್ತಿಗಳು ಮತ್ತು AAI ನಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಪ್ರೆಂಟಿಸ್‌ಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ, ಅಪ್ರೆಂಟಿಸ್ ಕಾಯಿದೆ 1961 ರ ಪ್ರಕಾರ ವಿನಾಯಿತಿ ನೀಡಲಾಗುತ್ತದೆ.


ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇಲಿನ ಪೋಸ್ಟ್‌ಗಳಿಗೆ ಸೆಪ್ಟೆಂಬರ್ 30, 2022 ರ ಮೊದಲು ಅಧಿಕೃತ ವೆಬ್‌ಸೈಟ್ — aai.aero ಮೂಲಕ ಅರ್ಜಿ ಸಲ್ಲಿಸಬಹುದು.
ನಿಗದಿತ ಶುಲ್ಕ ಪಾವತಿಸಿ
ನಿಮ್ಮ ವಿವರಗಳನ್ನು ನಮೂದಿಸಿ
ಮುಂದಿನ ಸಂವಹನಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ

First published: