IT Jobs: ಐಟಿ ಕಂಪನಿಗಳಿಂದ ಕ್ಯಾಂಪಸ್ ನೇಮಕಾತಿ: ಫ್ರೆಶರ್‌ಗಳಿಗೆ ಭರಪೂರ ಉದ್ಯೋಗಾವಕಾಶಗಳು

ಕಳೆದ ವರ್ಷ ಸರಿಸುಮಾರು 37,000 ಉದ್ಯೋಗಿಗಳು ಇನ್ಫೋಸಿಸ್ ಅನ್ನು ತೊರೆದಿದ್ದಾರೆ. ಇದನ್ನು ತಡೆಯುವ ಸಲುವಾಗಿ ಕಂಪನಿಯು ವೃತ್ತಿ ತರಬೇತಿ, ಅಭಿವೃದ್ಧಿ ಪೂರಕ ತರಬೇತಿಗಳು ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿವೆ.

Jobs

Jobs

 • Share this:

  ಕೊರೊನಾ ನಂತರ ಭವಿಷ್ಯದ ಬಗೆಗೆ ಎಲ್ಲರಲ್ಲೂ ಒಂದು ರೀತಿಯ ಅನಿಶ್ಚಿತತೆ ಭಯ ಕಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲೂ ಹಲವಾರು ಬದಲಾವಣೆಗಳು ನಡಿದಿದ್ದು ಪ್ರಾಥಮಿಕದಿಂದ ಹಿಡಿದು ಪದವಿಯವರೆಗೂ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣವನ್ನೇ ನೆಚ್ಚಿಕೊಂಡಿದ್ದಾರೆ. ಆನ್‌ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳದು ಶಿಕ್ಷಕರು ಹೇಳಿಕೊಳ್ಳಲಾರದ ಹಲವಾರು ದುಃಖಗಳಿವೆ. ಕೆಲವರಿಗೆ ಇಂಟರ್ನೆಟ್ ಸಮಸ್ಯೆಯಾದರೆ ಇನ್ನು ಕೆಲವರಿಗೆ ನೆಟ್‌ವರ್ಕ್ ಸಮಸ್ಯೆ ಒಂದು ರೀತಿಯಲ್ಲಿ ಶಿಕ್ಷಣವಿಂದು ತೂಗುಯ್ಯಾಲೆಯ ಸ್ಥಿತಿಯಲ್ಲಿದೆ.


  ಈ ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯೋಗ ದೊರಕುವ ಖಾತರಿ ಇದೆಯೇ ಇಲ್ಲವೋ ಎಂಬುದು ಹಲವಾರು ಪದವೀಧರರ ಕಳವಳವಾಗಿದೆ. ಕೊರೋನಾ ಬಂದ ನಂತರ ಆನ್‌ಲೈನ್ ಪಠ್ಯ ಕ್ರಮದಲ್ಲೇ ಎಷ್ಟೋ ವಿದ್ಯಾರ್ಥಿಗಳು ಕಲಿತು ಉತ್ತೀರ್ಣರಾಗಿ ಉದ್ಯೋಗದ ಬೇಟೆಗೆ ತೊಡಗಿದ್ದಾರೆ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಯಾರಿಗೂ ಉದ್ಯೋಗ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಅದಾಗ್ಯೂ ಕೆಲವೊಂದು ಕಂಪೆನಿಗಳು ಪದವೀಧರರಿಗೆ ಅವಕಾಶವನ್ನು ನೀಡುತ್ತಿದ್ದು ಕೆಲವೊಂದು ಕಂಪೆನಿಗಳು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ.


  ಐಟಿ ದಿಗ್ಗಜನೆಂದೇ ಖ್ಯಾತಿ ಪಡೆದಿರುವ ಇನ್ಫೋಸಿಸ್ ಶೈಕ್ಷಣಿಕ ವರ್ಷ 2022 ಕ್ಕಾಗಿ 35,000 ಕಾಲೇಜು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದೆ. ಇನ್ನು ಜೂನ್ 30, 2021 ರವರೆಗೆ ಪ್ರಸ್ತುತ ಕಂಪೆನಿಯು 2.67 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.


  ಡಿಜಿಟಲೀಕರಣದ ತೀವ್ರ ಪೈಪೋಟಿ


  ಸಾಂಕ್ರಾಮಿಕ ರೋಗದ ಹಿನ್ನಲೆಯಿಂದಾಗಿ ಪ್ರಸ್ತುತ ಡಿಜಿಟಲೀಕರಣ ಉತ್ತುಂಗಕ್ಕೇರುವ ಸಾಧ್ಯತೆ ಇದೆ. ಇದರಿಂದಾಗಿ ಡಿಜಿಟಲ್ ಯುಗದ ಪ್ರತಿಭೆಯಲ್ಲಿ ತೀವ್ರ ಸ್ಪರ್ಧೆಯನ್ನು ನಾವು ಕಾಣಬಹುದು. ಇದು ಉದ್ಯಮಗಳಿಗೆ ಸವಾಲೊಡ್ಡಬಹುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ರಾವ್ ತಿಳಿಸಿದ್ದಾರೆ.


  ಇನ್ಫೋಸಿಸ್ ಅಟ್ರಿಷನ್ ದರ (ಔದ್ಯೋಗಿಕ ಕ್ಷೀಣಿಸುವಿಕೆ) ಪ್ರತಿಕ್ರಿಯೆ


  ಇನ್ಫೋಸಿಸ್ ಸಂಸ್ಥೆಯ ಮಾರ್ಚ್ ತ್ರೈಮಾಸಿಕಕ್ಕಿಂತ ಜೂನ್ ತ್ರೈಮಾಸಿಕದಲ್ಲಿ ಹೆಚ್ಚಾಗಿದ್ದು ಹೆಚ್ಚಿನ ಉದ್ಯೋಗಿಗಳು ಸಂಸ್ಥೆಯನ್ನು ತೊರೆದಿರುವುದು ಇದಕ್ಕೆ ಕಾರಣ ಎಂದು ತಿಳಿಸಲಾಗಿದೆ. ಕಳೆದ ವರ್ಷ ಸರಿಸುಮಾರು 37,000 ಉದ್ಯೋಗಿಗಳು ಇನ್ಫೋಸಿಸ್ ಅನ್ನು ತೊರೆದಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಉದ್ಯೋಗಿಗಳ ತೊರೆಯುವಿಕೆಯನ್ನು ನಿರ್ಬಂಧಿಸುವ ಸಲುವಾಗಿ ಕಂಪನಿಯು ವೃತ್ತಿ ತರಬೇತಿ, ಅಭಿವೃದ್ಧಿ ಪೂರಕ ತರಬೇತಿಗಳು ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿವೆ.


  ಇದನ್ನೂ ಓದಿ: JOBS: ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ; ರಾಜ್ಯದ 1527 ಹುದ್ದೆಗೆ ಅರ್ಜಿ ಆಹ್ವಾನ

  ಐಟಿ ಬುದ್ಧಿಮತ್ತೆಗೆ ಬೇಡಿಕೆ ಹೆಚ್ಚಿದೆ


  ಸಾಂಕ್ರಾಮಿಕದ ನಂತರ ಐಟಿ ವಲಯದಲ್ಲಿ ಟ್ಯಾಲೆಂಟ್ ಹಾಗೂ ಕೌಶಲ್ಯಗಳಿಗೆ ಬೇಡಿಕೆ ಹೆಚ್ಚಾಗಿದ್ದು ಹೊಸದಾಗಿ ನೇಮಕಾತಿಗೊಂಡಿರುವ ಉದ್ಯೋಗಿಗಳು ಜೊತೆಗೆ ವೃತ್ತಿಕೌಶಲ್ಯವನ್ನು ಹೊಂದಿರುವ ಉದ್ಯೋಗಿಗಳೂ ಕೂಡ ಉನ್ನತ ಸಂಬಳ ಸೌಲಭ್ಯವಿರುವ ಸಂಸ್ಥೆಗಳನ್ನು ಸೇರಿಕೊಳ್ಳುತ್ತಿದ್ದಾರೆ. ಪ್ರಸ್ತುತ ಐಟಿ ವಲಯದಲ್ಲಿ ತೀವ್ರ ಪೈಪೋಟಿ ಎದ್ದುಕಾಣುತ್ತಿದ್ದು ಉದ್ಯೋಗಿಗಳ ಖರೀದಿಯನ್ನು ಕೆಲವೊಂದು ಕಂಪನಿಗಳು ಮಾಡುತ್ತಿರುವಂತೆ ಕಾಣುತ್ತಿದೆ ಎಂಬುದಾಗಿ ವಿಪ್ರೊ ಸಂಸ್ಥೆಯ CHRO ಸೌರಭ್ ಗೋವಿಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


  ಐಟಿ ಕಂಪನಿಗಳಲ್ಲಿ ಈಗ ನುರಿತ ಅನುಭವಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದ್ದು ಉದ್ಯೋಗಿ ಕ್ಷೀಣತೆಯ ಸವಾಲುಗಳನ್ನು ಹಲವಾರು ಸಂಸ್ಥೆಗಳು ಎದುರಿಸುತ್ತಿವೆ. ಈ ಸಲುವಾಗಿಯೇ ವಿಪ್ರೊ, ಇನ್ಫೋಸಿಸ್, ಟಿಸಿಎಸ್ ಮೊದಲಾದ ಕಂಪನಿಗಳು ಕ್ಯಾಂಪಸ್‌ಗಳಿಂದ ನೇರವಾಗಿ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡುತ್ತಿದ್ದು ಉದ್ಯೋಗ ಭರವಸೆಯನ್ನು ನೀಡಿವೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: