UPSC Civil Services Result: 2016ರ ಟಾಪರ್ ಟೀನಾ ಡಾಬಿ ತಂಗಿ ರಿಯಾಗೆ ಯುಪಿಎಸ್​ಸಿಯಲ್ಲಿ 15ನೇ rank

Tina Dabi ಅವರ ತಂಗಿ ರಿಯಾ ಕೂಡ ಯುಪಿಎಸ್​ಸಿ ಪರೀಕ್ಷೆಯಲ್ಲಿ 15ನೇ ಸ್ಥಾನ ಪಡೆದಿದ್ದು, ಐಎಎಸ್​ ಅಧಿಕಾರಿಯಾಗುವುದು ಖಚಿತವಾಗಿದೆ. 

ಟೀನಾ ಡಾಬಿ- ರಿಯಾ ಡಾಬಿ

ಟೀನಾ ಡಾಬಿ- ರಿಯಾ ಡಾಬಿ

 • Share this:
  2020ನೇ ಸಾಲಿನ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ  (2020 upsc mains result) ಪ್ರಕಟವಾಗಿದೆ. 2016 ರ ಬ್ಯಾಚ್ ಟಾಪರ್ ಟೀನಾ ಡಾಬಿಯ (Tina Dabi) ಸಹೋದರಿ ರಿಯಾ ಡಾಬಿ (ria Dabi) ಕೂಡ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ (UPSC Mains Result 2020) ಯಶಸ್ವಿಯಾಗಿದ್ದಾರೆ. ಅವರು 15 ನೇ Rank ಪಡೆದಿದ್ದಾರೆ. 2016 ರಲ್ಲಿ, ಟೀನಾ ಡಾಬಿ ಅಖಿಲ ಭಾರತ ನಂಬರ್ ಒನ್ ಸ್ಥಾನ ಪಡೆದು ಖ್ಯಾತಿ ಪಡೆದಿದ್ದರು. ತಮ್ಮ ಸಹೋದರಿಯ ಈ ಸಾಧನೆಗೆ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿರುವ ಟೀನಾ ಡಾಬಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಟೀನಾ ಬರೆದಿದ್ದಾರೆ, 'ನನ್ನ ತಂಗಿ ರಿಯಾ ಡಾಬಿ ಯುಪಿಎಸ್‌ಸಿ 2020 ಪರೀಕ್ಷೆಯಲ್ಲಿ 15 ನೇ Rakn ಪಡೆದಿದ್ದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

  ದಾಖಲೆ ಸೃಷ್ಟಿಸಿದ್ದ ಟೀನಾ ಡಾಬಿ

  2016ರಲ್ಲಿ ಅತಿ ಕಿರಿಯ ವಯಸ್ಸಿನಲ್ಲಿಯೇ ಯುಪಿಎಸ್​ಸಿಯ ನಾಗರೀಕ ಪರೀಕ್ಷೆಯಲ್ಲಿ (2016 upsc topper Tina dabi) ಮೊದಲ ಸ್ಥಾನಗಳಿಸುವ ಮೂಲಕ ಟೀನಾ ಡಾಬಿ ಹೊಸ ದಾಖಲೆಯನ್ನು ಕೂಡ ಸೃಷ್ಟಿಸಿದ್ದರು. ಇತ್ತೀಚೆಗೆ ಇವರ ವೈವಾಹಿಕ ಜೀವನದಲ್ಲಿ ಉಂಟಾದ ಬಿರುಕಿನ  ಕಾರಣದಿಂದಲೂ ಕೂಡ ಅವರು ಸುದ್ದಿಯಾಗಿದ್ದರು.

  ಈಗ ಅವರ ತಂಗಿ ರಿಯಾ ಕೂಡ ಯುಪಿಎಸ್​ಸಿ ಪರೀಕ್ಷೆಯಲ್ಲಿ 15ನೇ ಸ್ಥಾನ ಪಡೆದಿದ್ದು, ಅವರಿಗೂ ಐಎಎಸ್​ ಅಧಿಕಾರಿಯಾಗುವುದು ಖಚಿತವಾಗಿದೆ.  2020ರಲ್ಲಿ ಶುಭಂ ಕುಮಾರ್​ ಟಾಪರ್​

  ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2020ನೇ ಸಾಲಿನ ಪರೀಕ್ಷೆಯ ಫಲಿತಾಂಶದಲ್ಲಿ ಬಿಹಾರದ ಕತಿಹಾರ್ ಜಿಲ್ಲೆಯ ಶುಭಂ ಕುಮಾರ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಶುಭಂ ಕುಮಾರ್ ಬಾಂಬೆ ಐಐಟಿಯಿಂದ ಬಿಟೆಕ್‌ನಲ್ಲಿ ಪದವಿ ಪಡೆದಿದ್ದಾರೆ. ಈ ಪರೀಕ್ಷೆಯಲ್ಲಿ ಜಾಗೃತಿ ಅವಸ್ಥಿ ದ್ವಿತೀಯ ಮತ್ತು ಅಂಕಿತಾ ಜೈನ್ ಮೂರನೇ ಸ್ಥಾನ ಪಡೆದರು.

  UPSC ನೀಡಿರುವ ಮಾಹಿತಿ ಪ್ರಕಾರ ನಾಗರೀಕ ಸೇವಾ ಪರೀಕ್ಷೆಯಲ್ಲಿ 545 ಪುರುಷರು ಮತ್ತು 216 ಮಹಿಳೆಯರು ಆಯ್ಕೆಯಾಗಿದ್ದಾರೆ. ಯುಪಿಎಸ್‌ಸಿ ಒಟ್ಟು 761 ಅಭ್ಯರ್ಥಿಗಳ ನೇಮಕಾತಿಯನ್ನು ಶಿಫಾರಸು ಮಾಡಿದೆ. ಸಾಮಾನ್ಯ ವರ್ಗದ 761 ಅಭ್ಯರ್ಥಿಗಳಲ್ಲಿ 263. 86 ಅಭ್ಯರ್ಥಿಗಳು EWS ವರ್ಗದಿಂದ ಬಂದವರು. 229 ಅಭ್ಯರ್ಥಿಗಳು ಒಬಿಸಿ ವರ್ಗದವರಾಗಿದ್ದರೆ 122 ಅಭ್ಯರ್ಥಿಗಳು ಎಸ್‌ಸಿ ವರ್ಗದಿಂದ ಬಂದವರು. 61 ಎಸ್ಟಿ ವರ್ಗದ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ

  ಯುಪಿಎಸ್​ಸಿಯಲ್ಲಿ ಮೊದಲ 10 ಪಡೆದವರ ಪಟ್ಟಿ

  1- ಶುಭಂ ಕುಮಾರ್
  2- ಜಾಗರತಿ ಅವಸ್ಥಿ
  3- ಅಂಕಿತಾ ಜೈನ್
  4- ಯಶ್ ಜಲುಕಾ
  5- ಮಮತಾ ಯಾದವ್
  6- ಮೀರಾ ಕೆ
  7- ಪ್ರವೀಣ್ ಕುಮಾರ್
  8- ಜೀವನ ಕಾರ್ತಿಕ್ ನಾಗಜಿಭಾಯಿ
  9- ಅಪಾಲ ಮಿಶ್ರ
  10- ಸತ್ಯಂ ಗಾಂಧಿ

  ಇದನ್ನು ಓದಿ: ತಿಂಗಳಿಗೆ 65 ಸಾವಿರ ಸಂಬಳ; ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ

  ಐಎಎಸ್, ಐಪಿಎಸ್, ಐಎಫ್ಎಸ್, ಐಆರ್​ಎಸ್​​, ಮತ್ತು ಐಆರ್​ಟಿಎಸ್​​ ಸೇರಿದಂತೆ ವಿವಿಧ ಅಖಿಲ ಭಾರತ ಸೇವೆಗಳು ಮತ್ತು ಕೇಂದ್ರ ನಾಗರಿಕ ಸೇವೆಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆಗೆ ಮೂರು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮೊದಲು ಪ್ರಾಥಮಿಕ, ಇದಾದ ಬಳಿಕ ಮುಖ್ಯ ಪರೀಕ್ಷೆ ಇದರಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ನಂತರ  ಸಂದರ್ಶನಕ್ಕೆ ಕರೆಯಲಾಗುವುದು. ಈ ರೀತಿಯಾಗಿ ಮೂರು ಹಂತದಲ್ಲಿ ದೇಶದ ಅತ್ಯುನ್ನತ ಹುದ್ದೆಗಳ ಆಯ್ಕೆಗೆ ಪ್ರತಿ ವರ್ಷ ಕೇಂದ್ರ ಲೋಕಸೇವ ಆಯೋಗ ಪರೀಕ್ಷೆ ನಡೆಸುತ್ತದೆ.

  ಇದನ್ನು ಓದಿ: ಸಿವಿಲ್​ ಸರ್ವಿಸ್​ ಫಲಿತಾಂಶ ಪ್ರಕಟ; ಐಐಟಿ ಬಾಂಬೆ ವಿದ್ಯಾರ್ಥಿ ಶುಭಂ ಟಾಪರ್​​; ರಾಜ್ಯದ ಅಕ್ಷಯ್​ ಗೆ 72ನೇ ಸ್ಥಾನ

  ಯುಪಿಎಸ್​ಸಿ ಫಲಿತಾಂಶ ನೋಡಿವ ವಿಧಾನ
  ಹಂತ 1: upsc.gov.in ವೆಬ್‌ಸೈಟ್‌ಗೆ ಭೇಟಿ ನೀಡಿ

  ಹಂತ 2: 'UPSC ಮುಖ್ಯ ಫಲಿತಾಂಶ ಲಿಂಕ್ 2020' ಮೇಲೆ ಕ್ಲಿಕ್ ಮಾಡಿ

  ಹಂತ 3: ಆಯ್ಕೆಯಾದ ಅಭ್ಯರ್ಥಿಗಳ ಹೆಸರು ಮತ್ತು ರೋಲ್ ಸಂಖ್ಯೆಯೊಂದಿಗೆ ಪಿಡಿಎಫ್ ಫೈಲ್ ಕಾಣಿಸುತ್ತದೆ

  ಹಂತ 4: ಡೌನ್‌ಲೋಡ್ ಮಾಡಿ ಮತ್ತು ಅಗತ್ಯವಿದ್ದರೆ, ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
  Published by:Seema R
  First published: