REET: ಶಿಕ್ಷಕರ ಅರ್ಹತಾ ಪರೀಕ್ಷೆ ವೇಳೆ ವಂಚನೆ; ಹೆಂಡತಿಯರಿಗೆ ಸಹಾಯ ಮಾಡುತ್ತಿದ್ದ ಇಬ್ಬರು ಪೊಲೀಸರ ಬಂಧನ

ಪರೀಕ್ಷೆ ಪ್ರಾರಂಭವಾಗುವ ಮೊದಲೇ ಇವರ ಮೊಬೈಲ್​ನಲ್ಲಿ ಪತ್ರಿಕೆ ಲಭ್ಯವಾಗಿದೆ. ಇದಾದ ಬಳಿಕ ಅವರು ಹೆಂಡತಿಯರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ

.

.

 • Share this:
  ಶಿಕ್ಷಕರ ಅರ್ಹತಾ ಪರೀಕ್ಷೆ ವೇಳೆ ತಮ್ಮ ಹೆಂಡತಿಯರಿಗೆ ಸಹಾಯ ಮಾಡಲು ವಂಚನೆ ಎಸಗಿದ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ ರನ್ನು ಬಂಧಿಸಿದ್ದಾರೆ. ​ ಪರೀಕ್ಷೆಗೆ ಇನ್ನೇನು ಕೆಲವೇ ಗಂಟೆಗಳ ಇರುವ ಮೊದಲು ಪ್ರಶ್ನಾ ಪತ್ರಿಕೆಯನ್ನು ಈ ಆರೋಪಿಗಳು ಪಡೆದಿದ್ದರು ಎಂದು ತಿಳಿದು ಬಂದಿದೆ. ರಾಜಸ್ಥಾನ ಸರ್ಕಾರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (REET Exam-2021) ನಿನ್ನೆ ಅಂದರೆ ಸೆ. 26ರ ಭಾನುವಾರ ರಾಜ್ಯದ್ಯಾಂತ ನಡೆಸಿತ್ತು. ಈ ವೇಳೆ ಸಾಕಷ್ಟು ವಂಚನೆ ಪ್ರಕರಣಗಳು ಕೇಳಿ ಬಂದಿದ್ದು, ಅದರಲ್ಲಿ ಈ ಪ್ರಕರಣ ಕೂಡ ಒಂದಾಗಿದೆ.

  ರಾಜಸ್ಥಾನದ ಶಿಕ್ಷಕರ ಅರ್ಹತಾ ಪರೀಕ್ಷೆ ವೇಳೆ ಸವಾಯಿ ಮಾಧೋಪುರ ಜಿಲ್ಲೆಯ ಗಂಗಾಪುರ ನಗರದಲ್ಲಿ, ಇಬ್ಬರು ಪೋಲಿಸ್​ ಕಾನ್ಸ್​ಟೇಬಲ್​ಗಳು ತಮ್ಮ ಪತ್ನಿಯರು ಪರೀಕ್ಷೆಯಲ್ಲಿ ಮೋಸ ಮಾಡಲು ಯತ್ನಿಸಿ ಸಿಕ್ಕಿಬಿದಿದ್ದಾರೆ. ಇವರು ಮಾತ್ರವಲ್ಲದೇ ಜಿಲ್ಲೆಯಲ್ಲಿ ಸುಮಾರು 6 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ, 40 ಜನರು ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದಿದ್ದು, ರಾಜ್ಯ ಮಾತ್ರವಲ್ಲದೇ ದೇಶದಲ್ಲಿ ಸುದ್ದಿಯಾಗಿದೆ.

  ಅಷ್ಟೇ ಅಲ್ಲದೇ ಸವಾಯಿ ಮಾಧೋಪುರ ಶಿಕ್ಷಕರ ಅರ್ಹತಾ ಪರೀಕ್ಷೆ ವೇಳೆ ನಿಯೋಜಿಸಲಾಗಿದ್ದ ಭದ್ರತಾ ಜಾಲವನ್ನು ನಾಶ ಮಾಡಿ ಕೂಡ ಪೊಲೀಸರು ಸಿಕ್ಕಿಬಿದ್ದಿದ್ದಾರೆ. ಸವಾಯಿ ಮಾಧೋಪುರ ಜಿಲ್ಲೆಯ ಗಂಗಾಪುರ ನಗರದಲ್ಲಿ ಹೆಂಡತಿಯರಿಗೆ ಪರೀಕ್ಷೆ ವೇಳೆ ಸಹಾಯ ಮಾಡಲು ಯತ್ನಿಸಿದ ಇಬ್ಬರು ಪೊಲೀಸರು ಸೇರಿದಂತೆ ನಾಲ್ಕು ಪರೀಕ್ಷಾರ್ಥಿಗಳನ್ನು ಬಂಧಿಸಲಾಗಿದೆ.

  ರಾಜ್ಯದಲ್ಲಿ ಭಾರೀ ವಂಚನೆ ಪ್ರಕರಣ ಪತ್ತೆ

  ವಂಚನೆ ಮಾಡಿದ ಆರೋಪದ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ ಅವರನ್ನು ಅಮಾನತುಗೊಳಿಸಲಾಗಿದೆ. ಭಾನುವಾರ ರಾಜ್ಯದಲ್ಲಿ ನಡೆದ ಪರೀಕ್ಷೆ ವೇಳೆ ಹೈಟೆಕ್​ ತಂತ್ರ ಬಳಸಿ ವಂಚನೆ ಮಾಡಿದ ಆರೋಪಿಗಳು ಸೇರಿದಂತೆ ಸುಮಾರು 40 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಏಳು ಜನ ಸರ್ಕಾರಿ ಶಾಲಾ ಶಿಕ್ಷಕರು ಕೂಡ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಮೊಬೈಲ್​ನಲ್ಲಿ ಪ್ರಶ್ನಾ ಪತ್ರಿಕೆ ಪಡೆದ ಪೊಲೀಸರು 

  ಇಬ್ಬರೂ ಪೊಲೀಸರ ಮೊಬೈಲ್​ನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನಾ ಪತ್ರಿಕೆ ಪತ್ತೆಯಾಗಿದೆ. ಪರೀಕ್ಷೆ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುವ ಮೊದಲೇ ಇವರ ಮೊಬೈಲ್​ನಲ್ಲಿ ಪತ್ರಿಕೆ ಲಭ್ಯವಾಗಿದೆ. ಇದಾದ ಬಳಿಕ ಅವರು ಹೆಂಡತಿಯರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಹಿನ್ನಲೆ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಮೊಬೈಲ್​ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

  ಇದನ್ನು ಓದಿ: Govt Job Alert: SSC ನೇಮಕಾತಿ: 3261 ಹುದ್ದೆಗಳಿಗೆ ಅರ್ಜಿ ಆಹ್ವಾನ

  ಸಿರೋಹಿ ಜಿಲ್ಲೆಯಲ್ಲೂ ಪೊಲೀಸ್​ರಿಂದ ವಂಚನೆ
  ಸಿರೋಹಿ ಜಿಲ್ಲೆಯಲ್ಲೂ, ಒಬ್ಬ ಪೊಲೀಸ್ ಪರೀಕ್ಷೆಯಲ್ಲಿ ವಂಚನೆ ಪಾತ್ರ ನಿರ್ವಹಣೆ ಮಾಡಿದ್ದಾನೆ ಎಂಬ ಶಂಕೆ ಮೇರೆಗೆ ಆತನನ್ನು ಅಮಾನತು ಮಾಡಲಾಗಿದೆ. ಕಲಂದರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಶೈತಾನಾರಾಮ್ ಅವರನ್ನು ಅಮಾನತು ಮಾಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಶರಂ ಆಜ್ಞೆ ಹೊರಡಿಸಿದ್ದಾರೆ. ರೀಟ್ ಪರೀಕ್ಷೆಗೆ ಸಂಬಂಧಿಸಿದ ಆತನ ಮೊಬೈಲ್‌ನಲ್ಲಿ ಅನುಮಾನಾಸ್ಪದ ಚಾಟ್‌ಗಳನ್ನು ಪೊಲೀಸರು ಪತ್ತೆ ಆಗಿದೆ. ಈ ಸಂಬಂಧ ತನಿಖೆ ಕೂಡ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.

  ಇದನ್ನು ಓದಿ: ಸ್ವಂತ ಉದ್ಯಮ ಹೊಂದುವ ಕನಸಿದ್ಯಾ; ಕಡಿಮೆ ಬಂಡವಾಳದಲ್ಲಿ ದುಪ್ಪಟ್ಟು ಲಾಭ ಪಡೆಯಲು ಇಲ್ಲಿದೆ ಐಡಿಯಾ

  ಮುನ್ನೆಚ್ಚರಿಕೆ ನಡುವೆಯೂ ಭಾರೀ ವಂಚನೆ

  ಪರೀಕ್ಷೆಯಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಲು ಸರ್ಕಾರವು ಸಕಲ ಮುನ್ನೆಚ್ಚರಿಕೆಗಳೊಂದಿಗೆ ಭದ್ರತಾ ಕ್ರಮ ಕೈಗೊಂಡಿತ್ತು. ಅಷ್ಟೇ ಅಲ್ಲದೇ ರಾಜ್ಯದಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಿತು. ಇದಲ್ಲದೆ, ವಿವಿಧ ಕೇಂದ್ರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇನ್ನು ಅಜ್ಮೇರ್​ ಕಿಶನ್​ ಕೇಂದ್ರಕ್ಕೆ ಭಾನುವಾರ ಪರೀಕ್ಷೆಯನ್ನು ಬರೆಯಲು ಆಗಮಿಸಿದ ಅಭ್ಯರ್ಥಿಯನ್ನು ಕಿವಿಯಲ್ಲಿ ವೈರ್‌ಲೆಸ್ ಸಾಧನವನ್ನು ಹಾಕಿಕೊಂಡು ಸಿಕ್ಕಿ ಬಿದ್ದಿದ್ದು, ಆತನನ್ನು ಬಂಧಿಸಲಾಗಿದೆ.
  Published by:Seema R
  First published: